ಎಲ್ಲಾ ವರ್ಗದವರಿಗೂ ಉಚಿತ ವಿದ್ಯುತ್ ಸೌಲಭ್ಯ ವಿಸ್ತರಿಸಲಿ
ಚಿಕ್ಕನಾಯಕನಹಳ್ಳಿ:ಗಂಗಾ ಕಲ್ಯಾಣ, ೭೫ ಯುನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವ ರಿಗೆ ಮಾತ್ರ ನೀಡದೆ ಬಿಪಿಎಲ್ ಕಾರ್ಡ್ ಹೊಂದಿ ರುವ ಎಲ್ಲಾ ವರ್ಗದವರಿಗೂ ವಿಸ್ತರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ಈ ಕುರಿತು ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಲೀಟರ್ ಹಾಲಿನ ಬೆಲೆಯನ್ನು ೫೦ ರೂಪಾಯಿಗೆ ನಿಗದಿಪಡಿಸಬೇಕು. ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು. ಬ್ಯಾಂಕುಗಳು ರೈತರ ಆಸ್ತಿಯನ್ನು ಜಪ್ತಿಮಾಡುವುದು, ಹರಾಜು ಹಾಕುವುದನ್ನು ನಿಷೇಧಿಸಿ ಸರಕಾರ ಭರವಸೆ ನೀಡಿರುವಂತೆ ಚಳಿಗಾಲದ ಅಧಿವೇಶನ ದಲ್ಲೇ ಕಾನೂನು ತರಬೇಕು. ಕಳಸಾ – ಬಂಡೂರಿ ನೀರಾವರಿ ಯೋಜನೆಯನ್ನು ಕಾಲ ಮಿತಿಯೊಳಗೆ ಪೂರ್ಣ ಗೊಳಿಸಬೇಕು. ತೆಲಂಗಾಣ, ಹಾಗು ಪಂಜಾಬ್, ದೆಹಲಿ ಸರಕಾರ ಗಳು ರಾಜ್ಯದ ಜನರಿಗೆ ನೀಡುತ್ತಿರುವ ವಿಶೇಷ ಸವಲತ್ತುಗಳನ್ನು ನಮ್ಮ ರಾಜ್ಯದಲ್ಲೂ ಜಾರಿಗೆ ತರಬೇಕೆಂದು ಮನವಿಯಲ್ಲಿ ಬರೆದುಕೊಂಡಿದೆ.
ಬೆಳಗಾವಿ ಸುವರ್ಣ ಸೌಧಧ ಎದುರು ಬೃಹತ್ ಸಮಾವೇಶಡಿ.೧೯ ರಂದು ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದ್ದು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯಿಂದ ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುವರ್ಣ ಸೌಧಕ್ಕೆ ರೈತರ ಜೊತೆಗೂಡಿ ಮುತ್ತಿಗೆ ಹಾಕಲಾಗುತ್ತದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸಂಚಾಲಕ  ರಾಮನ ಹಳ್ಳಿ ಕುಮಾರಯ್ಯ, ಶೆಟ್ಟಿಕೆರೆ ತೋಂಟಾರಾಧ್ಯ ಮನವಿ ಮಾಡಿದ್ದಾರೆ.