ನಾಡಗೀತೆಯನ್ನು ಸಂಪೂರ್ಣವಾಗಿ ಹಾಡುವ ಅವಶ್ಯಕತೆಯಿಲ್ಲ: ಹಂ.ಪ.ನಾ
14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಕಳೆಗಟ್ಟಿದ ಕನ್ನಡ ಹಬ್ಬ
ತುಮಕೂರು:ನಾಡಗೀತೆಯನ್ನು ಸಂಪೂರ್ಣವಾಗಿ ಹಾಡುವ ಅವಶ್ಯಕತೆ ಯಿಲ್ಲ. ಬದಲಾಗಿ ಮೊದಲ ಚರಣ ಹಾಗೂ ಕೊನೆಯ ಚರಣ ಹಾಡಿದರೆ ಸಾಕು ಎಂದು ಸಾಹಿತಿ ಡಾ. ಹಂ.ಪ.ನಾಗರಾಜಯ್ಯ ಅಭಿಪ್ರಾಯಪಟ್ಟರು.
ನಗರದ ಗಾಜಿನ ಮನೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತ ನಾಡಿ, ಸಾಹಿತ್ಯ ಜನಜೀವನದ ಪ್ರತಿಬಿಂಬವಾಗಿದ್ದು ಮನಸ್ಸುಗಳನ್ನು ಬೆಸೆಯುವ ಕರ‍್ಯವನ್ನು ಸಾಹಿತ್ಯ ಮಾಡುತ್ತದೆ. ವೇದಿಕೆ ಗಳಲ್ಲಿ ನಾಡಗೀತೆಯನ್ನು ಸಂಪೂರ್ಣವಾಗಿ ಹಾಡುವುದರಿಂದ ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ. ಇದರ ಅವಶ್ಯಕತೆ ಯಿಲ್ಲ. ನಾಡಗೀತೆಯ ಎಲ್ಲ ಚರಣಗಳ ಹೃದಯ ಭಾಗ ಪ್ರಾರಂಭ, ಕೊನೆಯ ಭಾಗವನ್ನು ಹಾಡಿದರೆ ಸಾಕು ಎಂಬುದು ನಮ್ಮ ಭಾವನೆ. ನಾಡಗೀತೆಯ ಮೊದಲ ಹಾಗೂ ಕಡೆಯ ಚರಣ ಹಾಡಿದರೆ ಒಳ್ಳೆಯ ಪರಿಣಾಮ ಬೀರುತ್ತದೆ ಎಂದರು.
ಕನ್ನಡ ಸಮ್ಮೇಳನಗಳು ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಲ್ಲ. ಸಮ್ಮೇಳನ ಗಳು ಕನ್ನಡಿಗರ ಹಬ್ಬ, ಉತ್ಸಾಹದ ಚಿಲುಮೆ ಯಾಗಿದೆ. ನಮಗೆ ಅನೇಕ ಸವಾಲುಗಳಿವೆ. ಮನಸು ಮನಸುಗಳ ನಡುವೆ ಕಂದಕಗಳಿವೆ. ಅವುಗಳನ್ನು ಹೋಗಲಾಡಿಸಿ ನಮ್ಮ ಮಧ್ಯೆ ಸೇತುವೆಯಾಗಿ ಸಾಹಿತ್ಯ ಕೆಲಸ ಮಾಡುತ್ತಿದೆ. ತ್ಯಾಗ- ಭೂಗದ ಸಮನ್ವಯವೇ ಸಾಹಿತ್ಯವಾಗಿದ್ದು ನಮಗೆ ಬೇಕಾದದ್ದು ಇಟ್ಟುಕೊಂಡು ಉಳಿದಿದ್ದನ್ನು ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಾಹಿತ್ಯ ಮತ ಬೇಕೇ ಹೊರತು ಮತಾಂಧರಾಗ ಬಾರದು. ಜಾತಿಯನ್ನು ಮರೆತು ರ‍್ವಜನಾಂಗದ ಶಾಂತಿಯ ತೋಟದಂತೆ ಬದುಕಬೇಕು. ದೇಶದ ಐಕ್ಯತೆಗೆ ಭಂಗ ತರುವ ಕೆಲಸ ವಾಗಬಾರದು ಎಂದರು.
ಸಾಹಿತಿ ಹಾಗೂ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಧ್ವಜ ಹಸ್ತಾಂತರಿಸಿ ಮಾತನಾಡಿ, ಕ್ರಮಪಾಲನೆ ಈಗ ಬದಲಾಗಿದೆ. ಗುಣಾತ್ಮಕವಾಗಿ ವಯೋರ‍್ಮದ ಭಾಗವಾಗಿ ಕ್ರಮಪಾಲನೆ ಆಗಬೇಕು ಆದರೆ, ಇದು ತಪ್ಪಿದೆ. ಕಿರಿಯನಾದ ನಾನುನನಗಿಂತ ಹಿರಿಯರಿಗೆ ಧ್ವಜ ಹಸ್ತಾಂತರ ಮಾಡಿದ್ದೇನೆ. ಸಾಂಸ್ಕೃತಿಕ ಬೀಜವನ್ನು ಜನ ಸಾಮಾನ್ಯರ ಮನದೊಳಕ್ಕೆ ಬಿತ್ತಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಾಕಿಕೊಟ್ಟ ಮರ‍್ಗದಲ್ಲಿ ಸಾಹಿತ್ಯ ಪರಂಪರೆಯನ್ನು ಸಾಹಿತ್ಯ ಅರಿವನ್ನು ವಿಸ್ತರಿಸುವ ಕರ‍್ಯ ಮಾಡಬೇಕು. ಭಾಷೆಗಳ ಸಾಂಸ್ಕೃತಿಕ ರಾಯಭಾರಿಯಾಗಿ ಎಂ.ವಿ.ನಾಗರಾಜರಾವ್ ಕಾರ್ಯ ಮಾಡುತ್ತಿದ್ದು ಅವರ ಕರ‍್ಯ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸಿದರು.
ಸಮ್ಮೇಳನಾಧ್ಯಕ್ಷ ಎಂ.ವಿ.ನಾಗರಾಜರಾವ್ ಮಾತನಾಡಿ, ಕನ್ನಡ ವಿಷಯದಲ್ಲಿ ಪ್ರೀತಿ, ಗೌರವ, ವಿಶ್ವಾಸ ಹೊಂದುವವರೆಗೆ ಭಾಷೆಯ ಕಡೆಗಣನೆ ನಡೆಯುತ್ತಲೇ ಇರುತ್ತದೆ. ಸ್ರ‍್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶ ದೊರೆಯಬೇಕು, ಕನ್ನಡ ಕಲಿಯುವ ವಿದ್ಯರ‍್ಥಿಗಳಲ್ಲಿ ಕೀಳರಿಮೆ ಹೋಗಲಾಡಿಸಬೇಕು, ಈ ಬಗ್ಗೆ ರ‍್ಕಾರ ಕೂಡಲೇ ಕ್ರಮಕೈಗೊಳ್ಳಬೇಕು, ಸಮಗ್ರ ಕನ್ನಡ ಭಾಷಾ ಅಭಿವೃಧ್ಧಿ ವಿಧೇಯಕ ಬಂಧಿರುವ ಹೊಸ್ತಿಲಲ್ಲಿ ಇದು ಸರಿಯಾದ ರೀತಿಯಲ್ಲಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ಮಕ್ಕಳ ಮನಸ್ಸಿನಲ್ಲಿ ಕನ್ನಡದ ಪ್ರೇಮ ಬೆಳೆದಾಗ ಮಾತ್ರ ಭವಿಷ್ಯದಲ್ಲಿ ಕನ್ನಡದ ಉಳಿವು ಸಾಧ್ಯ ಎಂದರು.
ತುಮಕೂರು ಜಿಲ್ಲೆ ಕಲೆ, ಸಾಹಿತ್ಯ ರಂಗಭೂಮಿಗೆ ಕೊಡುಗೆ ನೀಡಿದೆ. ಚಿ.ನಾ. ಹಳ್ಳಿಯಲ್ಲಿರುವ ತೀನಂಶ್ರೀ ಭವನ, ತುರುವೇಕೆರೆ ಯಲ್ಲಿರುವ ಹಿರಣಯ್ಯನವರ ಹೆಸರಿನ ಭವನ, ತಿಪಟೂರಿನಲ್ಲಿ ನರಸಿಂಹರಾಜು ಭವನಗಳಿಗೆ ಮೂಲ ಸೌರ‍್ಯ, ಅನುದಾನದ ಕೊರತೆಯಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಕಡೆಗೆ ಗಮನ ನೀಡಬೇಕಿದೆ ಎಂದರು. ಮೈಸೂರು, ಶಿವಮೊಗ್ಗ, ಧಾರ ವಾಡದ ರಂಗಾಯಣದಂತೆ ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರಿನ ಭಾಗದಲ್ಲಿ ಬಯಲುಸೀಮೆಯ ರಂಗಾಯಣ ಸ್ಥಾಪಿಸುವ ಅಗತ್ಯವಿದೆ ಎಂದರು.
ಕೆ.ಎಸ್.ಸಿದ್ದಲಿಂಗಪ್ಪ ಆಶಯ ನುಡಿಗಳನ್ನಾಡಿ, ಎಲ್ಲರೂ ಸೇರಿ ಕನ್ನಡ ಕಟ್ಟುವ ಕೆಲಸ ಮಾಡೋಣ, ಕನ್ನಡವನ್ನು ಉಳಿಸುವ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಸ್ಮರಣ ಸಂಚಿಕೆ ಕಲ್ಪನುಡಿ ಬಿಡುಗಡೆ ಮಾಡಿದರೆ, ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮ್ಮೇಳನದಲ್ಲಿ ಶಾಸಕ ಜ್ಯೋತಿಗಣೇಶ್, ಜಿ.ಪಂ. ಸಿಇಒ ಡಾ. ಕೆ. ವಿದ್ಯಾ ಕುಮಾರಿ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಟೂಡಾ ಅಧ್ಯಕ್ಷ ಹೆಚ್.ಜಿ. ಚಂದ್ರಶೇಖರ್, ಸಮಾಜ ಸೇವಕ ಚಿದಾನಂದ್ , ಎಸ್.ನಾಗಣ್ಣ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನಾ ನಗರದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನ ಅಧ್ಯಕ್ಷರನ್ನು ಮೆರವಣಿಗೆ ಮಾಡಲಾಯಿತು. ಕೋಲಾಟ, ವೀರಗಾಸೆ, ಸೋಮನ ಕುಣಿತ ಸೇರಿದಂತೆ ಮತ್ತಿತರ ಕಲಾ ನೃತ್ಯಗಳು ಕಣ್ಮನ ಸೆಳೆದವು.
ಸಚಿವರು ಗೈರು
ಜಿಲ್ಲಾ ಕನ್ನಡ ಹಬ್ಬ ಸಂಭ್ರಮದಿಂದ ನಡೆಯಿತು ಆದರೆ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ಮಾಧುಸ್ವಾಮಿ, ನಾಗೇಶ್ ಗೈರಾಗಿದ್ದರು.