ತಾಲ್ಲೂಕು ವಕೀಲರ ಸಂಘದಿ೦ದ ಉಪವಿಭಾಗಾಧಿಕಾರಿ ರೀಷಿ ಆನಂದ್ ರವರಿಗೆ ಮನವಿ
ಮಧುಗಿರಿ :ರಾಜ್ಯದಲ್ಲಿ ವಕೀಲರ ಮೇಲೆ ಹಲವಾರು ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು ಅದನ್ನು ತಡೆಯುವ ಸಲುವಾಗಿ ಬೆಳಗಾವಿ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ತಾಲ್ಲೂಕು ವಕೀಲರ ಸಂಘದಿ೦ದ  ಉಪವಿಭಾಗಾಧಿಕಾರಿ ರೀಷಿ ಆನಂದ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪಿ.ಸಿ.ಕೃಷ್ಣರೆಡ್ಡಿ ಮಾತನಾಡಿ ಜನಸಾಮಾನ್ಯರ ಹಾಗೂ ಇತರೆ ಪ್ರಕರಣದಲ್ಲಿ ಕಿಡಿಗೇಡಿ ಗಳಿಂದ ವಕೀಲದ ಮೇಲೆ ಹಲವಾರು ಬಾರಿ ಹಲ್ಲೆಗಳಾಗಿದೆ. ಇದರಿಂದ ನ್ಯಾಯವಾದಿಗಳು ನ್ಯಾಯ ಕೊಡಿಸಲು ಸಾದ್ಯವಾಗುತ್ತಿಲ್ಲ. ಭಯದ ವಾತವರಣದಲ್ಲಿ ಪ್ರಕರಣಗಳನ್ನು ನಡೆಸಬೇಕಿದೆ, ಅದಕ್ಕಾಗಿ ಈ ಕಾಯ್ದೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮಾನ್ಯ ಮುಖ್ಯ ಮಂತ್ರಿಗಳು ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಸೂಕ್ತ ನಿರ್ಣಯವನ್ನು ಕೈಗೊಂಡು ವಕೀಲರ ರಕ್ಷಣಾ ಕಾಯ್ದೆಗೆ ಸರ್ಕಾರ ಮುಂದಾಗಿ ವಕೀಲರ ಸಮೂಹಕ್ಕೆ ಧೈರ್ಯ ತುಂಬಬೇಕೆ೦ದು ಕೋರಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ರಂಗನಾಥ್, ಹಿರಿಯ ವಕೀಲರಾದ ಪಂಚಾ ಕ್ಷರಯ್ಯ, ಶಿವಣ್ಣ, ನಾಗರಾಜು, ತಿಮ್ಮ ರಾಜು, ಆದಿಲ್, ಅಶೋಕ್, ಅನ್ನಪೂರ್ಣ, ಪುಪ್ಪಲತಾ, ವೀರಕ್ಯಾತಪ್ಪ ಮೂರ್ತಿ, ಹೆಚ್.ಟಿ.ತಿಮ್ಮರಾಜು ಹಾಗೂ ಮುಂತಾದವರು ಇದ್ದರು.