ಇಂಧನ ನಿಯಂತ್ರಣ ಕೇಂದ್ರ ಪ್ರಾರಂಭಿಸಿದ ನಂತರ ಕ್ಯಾಪ್ ಜೆಮಿನಿ ಶೇ 24 ರಷ್ಟು ತಗ್ಗಿದ ಇಂಧನ ಬಳಕೆ
ಬೆಂಗಳೂರು:ಕ್ಯಾಪ್ ಜೆಮಿನಿ ಸಂಸ್ಥೆ ಬೆಂಗಳೂರಿನಲ್ಲಿ ಅಸಾಧಾರಣ ಇಂಧನ ನಿಯಂತ್ರಣ ಕೇಂದ್ರ ಪ್ರಾರಂಭಿಸಿದ ನಂತರ ಇಂಧನ ದಕ್ಷತೆ ಹೆಚ್ಚಿದ್ದು, ನವೀಕರಿಸಬಹುದಾದ ಇಂಧನ ಬಳಸಿಕೊಂಡು ತನ್ನೆಲ್ಲಾ ಕಟ್ಟಡಗಳಲ್ಲಿ ದಕ್ಷ ಮೇಲ್ವಿಚಾರಣೆ ಮತ್ತು ನಿಗಾ ವ್ಯವಸ್ಥೆಯ ಮೂಲಕ ಇಂಗಾಲ ಹೊರಸೂಸುವ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿದೆ.
ಕ್ಯಾಪ್ ಜೆಮಿನಿ ಎನರ್ಜಿ ಕಮಾಂಡ್ ಕೇಂದ್ರ [ಇಸಿಸಿ] ಭಾರತದಲ್ಲಿ ತನ್ನ ಮಾಲೀಕತ್ವದ ಕಟ್ಟಡಗಳಲ್ಲಿ ವಿನೂತನ ಕ್ರಮ ಗಳಿಂದ ಇಂಧನ ಬಳಕೆಯನ್ನು ಗಣನೀಯವಾಗಿ ಅಂದರೆ ಶೇ 24 ರಷ್ಟು ತಗ್ಗಿಸಲು ನೆರವಾಗಿದೆ. ಇಂಧನ ಉಳಿಸುವ ಜೊತೆಗೆ ಆರ್ಥಿಕ ಮಿತವ್ಯಯ ಸಾಧಿಸಲು ಸಾಧ್ಯವಾಗಿದೆ. 2022 ರ ಮೇ ನಲ್ಲಿ ಬೆಂಗಳೂರಿನ ಕಮಾಂಡ್ ಸೆಂಟರ್ ನಲ್ಲಿ ಎಚ್.ವಿ.ಎ.ಸಿ ಉಪಕರಣಗಳನ್ನು ಅಳವಡಿಸಿದ್ದು, ಇವು ಸ್ವಯಂ ಚಾಲಿತ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತಿವೆ.
ವಿಶೇಷವೆಂದರೆ ಭಾರತ ದಲ್ಲಿನ ಎಲ್ಲಾ ಕ್ಯಾಪ್ ಜೆಮಿನಿ ಮಾಲೀಕತ್ವದ ಕಚೇರಿಗಳಲ್ಲಿ ನೈಜ ಸಮಯದಲ್ಲಿ ಇಂಧನ ಬಳಕೆಯ ನ್ನು ಈ ಕೇಂದ್ರ ಮೇಲ್ವಿಚಾರಣೆ ಮಾಡುತ್ತದೆ. ಅಷ್ಟೇ ಅಲ್ಲದೇ ಇಂಧನ ಸೋರಿಕೆಯ ಕುರಿತು ಎಚ್ಚರಿಕೆ ನೀಡುವ ಜೊತೆಗೆ ಸರಿಪಡಿಸುವ ಕ್ರಮಗಳನ್ನು ಸಹ ಅಳವಡಿಸಿಕೊಂಡಿದೆ. ಇದರಿಂದಾಗಿ ಇಂಧನ ಬಳಕೆ ಪ್ರಮಾಣ ನಿರ್ಣಾಯಕವಾಗಿ ತಗ್ಗಿಸಲು ನೆರವಾಗಿದೆ.
ಕ್ಯಾಪ್ ಜೆಮಿನಿಯ ಈ ಕಮಾಂಡ್ ಕೇಂದ್ರದ ಇಂಧನ ವಿಭಾಗದಲ್ಲಿ ನಿರಂತರ ಮಾಹಿತಿ ಹರಿಯುತ್ತಿದ್ದು, ಇದರಿಂದ ಭಾರತ ದಾದ್ಯಂತ ತನ್ನ ಕಟ್ಟಡಗಳಲ್ಲಿ ಸುಸ್ಥಿರ ಉಪಕ್ರಮಗಳನ್ನು ಹೆಚ್ಚಿಸಲು ಸಾಧ್ಯವಾಗಿದೆ. ಗಾಳಿಯ ಗುಣಮಟ್ಟ, ಇಂಧನ ಬಳಕೆ ಯನ್ನು ನಿಯಂತ್ರಿಸುವ ವಿವಿಧ ಮೆಟ್ರಿಕ್ ಗಳನ್ನು ಸಹ ಅಳವಡಿಸಲಾಗಿದೆ. ಹೆಚ್ಚುವರಿಯಾಗಿ ಪರಿಸ್ಥಿತಿಯನ್ನು ಆಧರಿಸಿ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡುವ ವಿಶೇಷತೆಗಳನ್ನು ಸಹ ಈ ಕೇಂದ್ರ ಒಳಗೊಂಡಿದೆ.
ಬೆಂಗಳೂರಿನ ಕ್ಯಾಪ್ ಜೆಮಿನಿ ಪೂರ್ಣ ಪ್ರಮಾಣದ ಸೌರ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದು, ಮೇಲ್ಛಾವಣಿಯ ಸೌರ ಫಲಕಗಳಿಂದಲೂ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹೆಚ್ಚುವರಿಯಾಗಿ ದೊರೆಯುವ ನವೀಕೃತ ಇಂಧನವನ್ನು ಈ ವರ್ಷದಿಂದ ರಾಜ್ಯ ವಿದ್ಯುತ್ ಜಾಲಕ್ಕೆ ರಫ್ತು ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ 90750 ಕಿಲೋವ್ಯಾಟ್ ಮತ್ತು ಹೈದರಾ ಬಾದ್ ನಲ್ಲಿ 2,70,000 ಕಿಲೋವ್ಯಾಟ್ ವಿದ್ಯುತ್ ಅನ್ನು ಪೂರೈಸಿ ಮಹತ್ವದ ಸಾಧನೆ ಮಾಡಿದೆ.
ಈ ಕೇಂದ್ರದಲ್ಲಿನ ದತ್ತಾಂಶದಿಂದಾಗಿ ಇಂಧನ ದಕ್ಷತೆಯನ್ನು ಸಮರ್ಥವಾಗಿ ಅಳೆಯಲು ಸಾಧ್ಯವಾಗಿದೆ. ಇದು ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯನ್ನು ನಿರ್ವಹಿಸುತ್ತಿದೆ. ಸೂಕ್ತ ಸಮಯದಲ್ಲಿ ಕೈಗೊಳ್ಳುವ ಕ್ರಮಗಳಿಂದ ವಿದ್ಯುತ್ ಉಳಿಸಲು ನೆರವಾಗಿದೆ. ಇದಲ್ಲದೇ ಕಾರ್ಯಾಚರಣೆಯ ದೋಷಗಳನ್ನು ಮುಂದಾಗಿಯೇ ಪತ್ತೆ ಮತ್ತು ನಿವಾರಣೆ ಮಾಡಲು ಇಸಿಸಿ ಕೇಂದ್ರ ವಿಶೇಷ ವಿಶ್ಲೇಷಣಾ ವೇದಿಕೆಯನ್ನು ಸಹ ಹೊಂದಿದೆ.
ಇಸಿಸಿ ಕೇಂದ್ರ ತನ್ನ ಕಚೇರಿಗಳ ಹವಾನಿಯಂತ್ರಣ ವಿಭಾಗದಲ್ಲಿ ಇಂಧನ ಬಳಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಚೇರಿಗಳಲ್ಲಿ ಶೇ 65 ರಷ್ಟು ಇಂಧನ ಹವಾನಿಯಂತ್ರಣ ವಿಭಾಗದಲ್ಲಿ ಬಳಕೆಯಾಗುತ್ತಿದೆ. ಬೇಡಿಕೆಯ ಅವಶ್ಯಕತೆಗಳನ್ನು ಪೂರೈಸಲು ಹವಾನಿಯಂತ್ರಣ ಉಪಕರಣಗಳ ಸಾಮರ್ಥ್ಯವನ್ನು ಕಡಿಮೆ ಮಾಡುವ ಇಲ್ಲವೆ ವೇಗಗೊಳಿಸುವ ಮೂಲಕ ತಾಪಮಾನಕ್ಕೆ ಅನುಗುಣವಾಗಿ ಕಡಿಮೆ ಇಂಧನ ಬಳಸುವಂತೆ ಮಾಡುತ್ತದೆ.
ಕ್ಯಾಪ್ ಜೆಮಿನಿ ಸಮರ್ಥನೀಯ ಗುರಿಗಳನ್ನು ಹಾಕಿಕೊಂಡಿದ್ದು, 2025 ರ ವೇಳೆಗೆ ಇಂಗಾಲ ಹೊರಸೂಸುವಿಕೆಯಲ್ಲಿ ತಟಸ್ಥ ಹಂತ ತಲುಪಲು, 2050 ರ ವೇಳೆಗೆ ಒಟ್ಟಾರೆ ಶೂನ್ಯ ಸ್ಥಿತಿಯ ಗುರಿ ಸಾಧಿಸಲು ಕಾರ್ಯಯೋಜನೆ ರೂಪಿಸಿಕೊಂಡಿದೆ. ತನ್ನ ಗ್ರಾಹಕರಿಗೆ ಇಸಿಸಿ ಸೇವೆ ನೀಡಲು ಷ್ನೇಯ್ಡರ್ ಎಲೆಕ್ಟ್ರಿಕ್ ನೊಂದಿಗೆ ಪಾಲುದಾರಿಕೆ ಹೊಂದಿದೆ. ಹೆಚ್ಚುವರಿಯಾಗಿ 2030 ರ ವೇಳೆಗೆ 10 ದಶಲಕ್ಷ ಟನ್ ಸಿಒ2ಇ ಅನ್ನು ಉಳಿಸುವ ಮಹತ್ವಾಕಾಂಕ್ಷೆಯ ಗುರಿ ಹಾಕಿಕೊಂಡಿದೆ.