ಅತ್ಯಾಧುನಿಕ ಕ್ಲಾಸ್ ರೂಂ ಯೋಜನೆ ಅನುಷ್ಠಾನಕ್ಕೆ ಟಾಟಾ ಮೋಟರ್ಸ್ ಮತ್ತು ಬೆಂಗಳೂರಿನ ಸ್ಟ್ರೇಟ್ ಸ್ಕೂಲ್ ಆಫ್ ಡಿಸೈನ್ ಪಾಲುದಾರಿಕೆ
ಬೆಂಗಳೂರು:ಆಟೋಮೋಟಿವ್ ಡಿಸೈನ್ ಮತ್ತು ಎಂಜಿನಿಯರಿಂಗ್ ನಲ್ಲಿ ಪರಿಣತಿ ಹೊಂದಿರುವ ಟಾಟಾ ಮೋಟರ್ಸ್ ಡಿಸೈನ್ ಇತ್ತೀಚೆಗೆ ಬೆಂಗಳೂರಿನ ಸ್ಟ್ರೇಟ್ ಸ್ಕೂಲ್ ಆಫ್ ಡಿಸೈನ್ ಜೊತೆಗೆ ಪಾಲುದಾರಿಕೆಯನ್ನು ಘೋಷಿಸಿದೆ.
ಭವಿಷ್ಯದ ಆಟೋಮೋಬೈಲ್ ಪರಿಹಾರಗಳನ್ನು ವಿನ್ಯಾಸಗೊಳಿಸಲು ಮಹತ್ವಾಕಾಂಕ್ಷೆಯನ್ನು ಹೊಂದಿರುವ ಆಟೋ ಮೋಬೈಲ್ ವಿನ್ಯಾಸಕರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಪಾಲುದಾರಿಕೆಯನ್ನು ಮಾಡಿಕೊಳ್ಳ ಲಾಗಿದೆ. ಭವಿಷ್ಯಕ್ಕೆ ಪ್ರತಿಭೆಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಂಪನಿಯ ದೃಷ್ಟಿಗೆ ಅನುಗುಣವಾಗಿ ಈ ಕಾರ್ಯತಂತ್ರದ ಪಾಲುದಾರಿಕೆಯು ಭಾರತದಲ್ಲಿ ಸುಧಾರಿತ ಸ್ವಯಂ-ವಿನ್ಯಾಸ ಪಠ್ಯಕ್ರಮ ಮತ್ತು ಶಿಕ್ಷಣದ ಅಭಿವೃದ್ಧಿಗೆ ಪರಸ್ಪರ ಹಾಗೂ ಉದ್ಯಮದ ಮಟ್ಟದಲ್ಲಿನ ತರಗತಿ ಯೋಜನೆಗಳನ್ನು ನೀಡುತ್ತದೆ.
ಟಾಟಾ ಮೋಟರ್ಸ್ ಡಿಸೈನ್ ಮತ್ತು ಸ್ಟ್ರೇಟ್ ಸ್ಕೂಲ್ ಆಫ್ ಡಿಸೈನ್ ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದ ನಡುವಿನ ಪ್ರತಿಭೆಯ ಕೊರತೆಯ ಅಂತರವನ್ನು ಕಡಿಮೆ ಮಾಡುವತ್ತ ಒಟ್ಟಾಗಿ ಹೆಜ್ಜೆ ಇಡಲಿವೆ. ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಸುಸ್ಥಿರ ಮತ್ತು ಭವಿಷ್ಯದ ವಾಹನ ಪರಿಹಾರಗಳನ್ನು ವಿನ್ಯಾಸಗೊಳಿಸಲು ಹಾಗೂ ಅದಕ್ಕೆ ಪೂರಕವಾಗಿ ತಯಾರಿಸಲು ಸಮರ್ಥವಾಗಿರುವ ಉದ್ಯೋಗಿ-ಸಿದ್ಧ ಪದವೀಧರರನ್ನು ಈ ಎರಡೂ ಸಂಸ್ಥೆಗಳು ತಯಾರು ಮಾಡಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಮೋಟರ್ಸ್ ನ ಗ್ಲೋಬಲ್ ಡಿಸೈನ್ ನ ಮುಖ್ಯಸ್ಥ ಮಾರ್ಟಿನ್ ಉಲ್ಹಾರಿಕ್ ಅವರು, “ಟಾಟಾ ಮೋಟರ್ಸ್ ಡಿಸೈನ್ ನಲ್ಲಿ ನಾವು ಮಾಡುವ ಪ್ರತಿಯೊಂದರ “ಹ್ಯೂಮನ್ ಎಕ್ಸ್ ಪೀರಿಯನ್ಸ್’’ ಅನ್ನು `ಹೃದಯ’ ದಲ್ಲಿ ಇರಿಸುವ ಮೂಲಕ ನಾವು `ಮೂವ್ ಇಂಡಿಯಾ’ಗೆ ಪ್ರಯತ್ನ ನಡೆಸಿದ್ದೇವೆ. ನಾವು ವೈವಿಧ್ಯತೆ ಮತ್ತು ಅನನ್ಯವಾದ ದೃಷ್ಟಿಕೋನಗಳು, ವರ್ಧಿತ ಸೃಜನಶೀಲತೆ ಮತ್ತು ಸಾಧಿಸಬಹುದಾದ ಪ್ರೇರಣೆಯನ್ನು ಪಾಲಿಸುತ್ತಾ ಬಂದಿದ್ದೇವೆ.
ಜಾಗತಿಕ ಮಟ್ಟವಾಗಿ ಭಾರತದಲ್ಲಿ ಸ್ಪರ್ಧಾತ್ಮಕ ಆಟೋ ಡಿಸೈನ್ ಸ್ಟುಡಿಯೋ ಆಗಿರುವ ನಾವು ಪ್ರತಿಭೆ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಬದ್ಧರಾಗಿದ್ದೇವೆ. ಸ್ಟ್ರೇಟ್ ಸ್ಕೂಲ್ ಆಫ್ ಡಿಸೈನ್ ನೊಂದಿಗೆ ನಾವು ಮಾಡಿಕೊಂಡಿರುವ ಸಹಯೋಗವು ಪ್ರಗತಿಪರ ಪಠ್ಯಕ್ರಮ, ಸಂವಹನಗಳು ಮತ್ತು ಉದ್ಯಮ ಮಟ್ಟದ ತರಗತಿ ಯೋಜನೆಗಳೊಂದಿಗೆ ಭಾರತದಲ್ಲಿ ಡಿಸೈನಿಂಗ್ ಶಿಕ್ಷಣವನ್ನು ಸಮೃದ್ಧಗೊಳಿಸುವ ವಿಶಾಲ ದೃಷ್ಟಿಯನ್ನು ಆಧರಿಸಿದೆ.
ಈ ಕ್ಲಾಸ್ ರೂಂ ಯೋಜನೆಯ ಮೂಲಕ ಕೌಶಲ್ಯದ ಅಂತರವನ್ನು ಕಡಿಮೆ ಮಾಡಲು ಮತ್ತು ಆಟೋಮೋಟಿವ್ ವಲಯಕ್ಕೆ ಪ್ರತಿಭಾವಂತ ಮತ್ತು ತಾಂತ್ರಿಕವಾಗಿ ಅರ್ಹರಾಗಿರುವ ವೃತ್ತಿಪರರಿಗೆ ತರಬೇತಿ ನೀಡಲು ನಾವು ಯೋಜನೆ ರೂಪಿಸಿದ್ದೇವೆ. ಈ ತರಗತಿ ಯೋಜನೆ ಅಥವಾ ಕ್ಲಾಸ್ ರೂಂ ಯೋಜನೆಯು ಭವಿಷ್ಯಕ್ಕಾಗಿ ಆಟೋಮೋಟಿವ್ ಪರಿಹಾರಗಳನ್ನು ಮರು ವ್ಯಾಖ್ಯಾನಿ ಸುವ, ಮರು ವಿನ್ಯಾಸಗೊಳಿಸುವ ಮತ್ತು ಮರುರೂಪಿಸುವಂತಹ ನಾವೀನ್ಯತೆಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ನಾವು ನಂಬುತ್ತೇವೆ’’ ಎಂದರು.
ಐದು ವರ್ಷಗಳ ಕ್ಲಾಸ್ ರೂಂ ಯೋಜನೆಯು ಆಟೋಮೋಟಿವ್ ಡಿಸೈನ್ ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ತಳಮಟ್ಟದಲ್ಲಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ದೇಶದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಆಟೋಮೊಬೈಲ್ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳನ್ನು ಅನ್ವೇಷಣೆ ಮಾಡಲು ಸಹಾಯ ಮಾಡುತ್ತದೆ. ಈ ಕ್ಲಾಸ್ ರೂಂ ಯೋಜನೆಯು ನೈಜ-ಪ್ರಪಂಚದ ಆಟೋಮೋಟಿವ್ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಹಾಲಿ ಇರುವ ಪರಿಹಾರ ಗಳನ್ನು ಮರುಶೋಧಿಸುವ ನಿಟ್ಟಿನಲ್ಲಿ ಸಮಗ್ರ ಶೂನ್ಯ ಮಾಲಿನ್ಯ ಹೊರಸೂಸುವಿಕೆಯ ಸಾರಿಗೆ ಪರಿಕಲ್ಪನೆಯನ್ನು ಒಳಗೊಂಡಿ ರುತ್ತದೆ. ಇದಕ್ಕೆ ಪೂರಕವಾಗಿ ಹೊಸ ಸಾಫ್ಟ್ ವೇರ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳೊಂದಿಗೆ ಪ್ರಯೋಗಗಳನ್ನು ಒಳಗೊಂಡಿರುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರಿನ ಸ್ಟ್ರೇಟ್ ಸ್ಕೂಲ್ ಆಫ್ ಡಿಸೈನ್ ನ ನಿರ್ದೇಶಕ ಮತ್ತು ಡೀನ್ ಥಾಮಸ್ ದಾಲ್ ಅವರು, “ಸ್ಟ್ರೇಟ್ ಸ್ಕೂಲ್ ಆಫ್ ಡಿಸೈನ್ ಕಳೆದ ಹಲವಾರು ವರ್ಷಗಳಿಂದ ಮೊಬಿಲಿಟಿ ಡಿಸೈನ್ ಶಿಕ್ಷಣ ನೀಡುವಲ್ಲಿ ಅಗ್ರಸ್ಥಾನ ದಲ್ಲಿದೆ. ವಿಶ್ವದಾದ್ಯಂತ ಬಲವಾದ ಉದ್ಯಮ ಪಾಲುದಾರಿಕೆ ಕಾರ್ಯಕ್ರಮವನ್ನು ಹೊಂದಿರುವ ಪ್ರಮುಖ ನಿರ್ದಿಷ್ಟತೆಯನ್ನು ಹೊಂದಿರುವ ಸಂಸ್ಥೆಯಾಗಿದೆ. ಟಾಟಾ ಮೋಟರ್ಸ್ ಡಿಸೈನ್ ನ ಪ್ರತಿಭಾವಂತ ಅಂತಾರಾಷ್ಟ್ರೀಯ ತಂಡದ ಬೆಂಬಲ ಮತ್ತು ಸವಾಲಿನೊಂದಿಗೆ ಭಾರತೀಯ ಮೊಬಿಲಿಟಿ ವ್ಯವಸ್ಥೆಗಳಿಗೆ ಹೊಸ ರೂಪ ಮತ್ತು ಅವಕಾಶಗಳನ್ನು ಅನ್ವೇಷಣೆ ಮಾಡಲು ನಾವು ಟಾಟಾ ಮೋಟರ್ಸ್ ಡಿಸೈನ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ’’ ಎಂದರು.