ಇಂಡಿ ಜಿಲ್ಲೆಗಾಗಿ ಸದನದಲ್ಲಿ ಯಶವಂತರಾಯಗೌಡ ಪಾಟೀಲ ಗುಡುಗು
ಇಂಡಿ:ಇಂಡಿ ತಾಲೂಕಿನ ಕೊನೆಯ ಗ್ರಾಮ ಭೀಮಾನದಿಗೆ ಹೊಂದಿಕೊ0ಡಿರುವ ಗ್ರಾಮಗಳು ವಿಜಯಪುರ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದರೆ ಸುಮಾರು ೧೦೦ ರಿಂದ ೧೨೦ ಕಿಮೀ ದಷ್ಟು ದೂರ ಹೋಗಬೇಕಾಗುತ್ತದೆ.
ಹೀಗಾಗಿ ಇಂಡಿಯನ್ನು ಕೇಂದ್ರ ಸ್ಥಾನವನ್ನಾಗಿ ಇಟ್ಟುಕೊಂಡು ಆಡಳಿತದ ಹಿತದೃಷ್ಟಿ ಹಾಗೂ ಅಭಿವೃದ್ದಿಗಾಗಿ ಇಂಡಿ, ಚಡಚಣ, ಆಲಮೇಲ,ಸಿoದಗಿ,ದೇವರಹಿಪ್ಪರಗಿ ತಾಲೂಕುಗಳನ್ನು ಒಗ್ಗೂಡಿಸಿ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಅಽವೇಶನದಲ್ಲಿ ಕಂದಾಯ ಸಚಿವರ ಗಮನ ಸೆಳೆದರು. ಜಿಲ್ಲೆಯಲ್ಲಿ ಈಗಾಗಲೆ ೧೩ ತಾಲೂಕುಗಳು ಇದ್ದು,ಆಡಳಿತ ಹಾಗೂ ಅಭಿವೃದ್ದಿ ಸಾಧ್ಯ ವಾಗುತ್ತಿಲ್ಲ. ೧೩ ತಾಲೂಕುಗಳನ್ನು ಹೊಂದಿರುವ ವಿಜಯಪುರ ಜಿಲ್ಲೆ ಬಹುದೊಡ್ಡದಾದ ವಿಸ್ತಾರ ಹೊಂದಿದೆ.ಹೀಗಾಗಿ ಆಡಳಿತ ಸುಗಮವಾಗಿ ಸಾಗಲು,ಎಲ್ಲ ತಾಲೂಕುಗಳು ಅಭಿವೃದ್ದಿ ಹೊಂದಬೇಕಾದರೆ ಇಂಡಿ ಜಿಲ್ಲಾ ಕೇಂದ್ರವನ್ನಾಗಿ ಆದರೆ ಮಾತ್ರ ಸಾಧ್ಯವಾಗುತ್ತದೆ ಎಂದು ಸದನದಲ್ಲಿ ಮನವರಿಕೆ ಮಾಡಿದರು.
ರಾಜ್ಯದಲ್ಲಿ ಹೊಸದಾಗಿ ಜಿಲ್ಲೆ ಮಾಡುವ ಸಂದರ್ಭ ಬಂದರೆ,ಹಿ0ದುಳಿದ ಇಂಡಿ ತಾಲೂಕು ಅದರಲ್ಲಿ ೧೩ ತಾಲೂಕುಗಳನ್ನು ಒಳಗೊಂಡ ದೊಡ್ಡ ಜಿಲ್ಲೆ ವಿಜಯಪುರ.ಇಂಡಿಗಿ0ತ ಭೌಗೋಳಿಕವಾಗಿ,ಜನಸಂಖ್ಯೆ ಕಡಿಮೆ ಇರುವ ಜಿಲ್ಲೆಗಳು ನಮ್ಮ ರಾಜ್ಯದಲ್ಲಿ ಇವೆ.ಅವುಗಳನ್ನು ಜಿಲ್ಲೆ ಮಾಡಲಾಗಿದೆ.ಇಂಡಿ ತಾಲೂಕಿನಲ್ಲಿ ಅಪರಾಧ ಪ್ರಕರಣಗಳು ಇವೆ.ರಾಜ್ಯದ ಕೊನೆ ಭಾಗ ಇದೆ. ಇಂಡಿ ಅಭಿವೃದ್ದಿಯಾಗಬೇಕಾದರೆ,ನಂಜು0ಡಪ್ಪ ವರದಿ ಪ್ರಕಾರ ಇಂಡಿ ಅಭಿವೃದ್ದಿ ಮಾಡಬೇಕಾದರೆ ಇಂಡಿ ಜಿಲ್ಲೆಯಾಗಬೇಕಾ ಗಿರುವುದು ಅನಿವರ‍್ಯ ಇದೆ.ವಿವಿಧ ಇಲಾಖೆಗಳ ಉಪವಿಭಾಗ,ಮಿನಿ ವಿಧಾನಸೌಧ,ಲಿಂಬೆ ಅಭಿವೃದ್ದಿ ಮಂಡಳಿ,ರೈಲ್ವೆ ಮಾರ್ಗ ಎಲ್ಲವೂ ಇಲ್ಲಿ ಇದೆ.ರಾಜ್ಯದ ಸಮಗ್ರ ಅಭಿವೃದ್ದಿ ಆಗಬೇಕಾದರೆ ಹೊಸ ಜಿಲ್ಲೆಗಳು ಮಾಡುವುದು ಅವಶ್ಯಕವಾಗಿದೆ .ಇಂಡಿ ಜಿಲ್ಲೆ ಮಾಡುವುದು ಆ ಭಾಗದ ಜನರ ಆಸೆಯಾಗಿದೆ ಎಂದು ಸದನದ ಮೂಲಕ ಸರ್ಕಾರದ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವರು,೧೩ ಜಿಲ್ಲೆಗಳನ್ನು ಹೊಂದಿದ ವಿಜಯಪುರ ಜಿಲ್ಲೆ ದೊಡ್ಡ ಜಿಲ್ಲೆ ಆಗಿರುವುದು,ತಾವು ಕೇಳುವುದು ನ್ಯಾಯಯೋಚಿತವಾಗಿದೆ.ಸರ್ಕಾರದಲ್ಲಿ ಆರ್ಥಿಕ ಪರಿಸ್ಥಿತಿ ಹಿನ್ನಲೆ ಇರುವುದರಿಂದ.ಜಿಲ್ಲಾಽಕಾರಿಗಳ ಮೂಲಕ ವರದಿ ತರಿಸಿಕೊಂಡು,ಮು0ದೆ ರಾಜ್ಯದಲ್ಲಿ ಜಿಲ್ಲೆಗಳು ಮಾಡುವ ಸಂದರ್ಭ ಬಂದಾಗ ಆದ್ಯತೆ ನೀಡಲಾಗುತ್ತದೆ ಎಂದು ಕಂದಾಯ ಸಚಿವರು ಉತ್ತರಿಸಿದರು.
