ಟ್ರಸ್ಟ್  ಹೆಸರಲ್ಲಿ ದೇವಸ್ಥಾನ ಸುಪರ್ದಿಗೆ ಯತ್ನ: ಗ್ರಾಮಸ್ಥರ ವಿರೋಧ
ಮಧುಗಿರಿ: ಗ್ರಾಮದ ಬಲಾಡ್ಯ ಸಮುದಾಯದ ಕೆಲ ಕುಟುಂಬದ ಸದಸ್ಯರೆಲ್ಲಾ ಸೇರಿಕೊಂಡು ದೇವಾಲಯದ ಹೆಸರಿನಲ್ಲಿ ಇತ್ತೀಚೆಗೆ ಮುತ್ಯಾಲಮ್ಮ ದೇವಸ್ಥಾನ ಅಭಿವೃದ್ಧಿ ಸೇವಾ ಟ್ರಸ್ಟ್ ಸೃಷ್ಟಿಸಿಕೊಂಡು ದೇವಾಲಯವನ್ನು ತಮ್ಮ ಸುಪರ್ದಿಗೆ ತೆಗೆದು ಕೊಳ್ಳಲು ಹೊರಟಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಗಡಿ ಗ್ರಾಮವಾದ ಕಸಿನಾಯಕನಹಳ್ಳಿಯಲ್ಲಿನ ಮುತ್ಯಾಲಮ್ಮ ದೇವಾಲಯವು ಅನಾದಿಕಾಲದಿಂದಲೂ ಗ್ರಾಮದಲ್ಲಿದ್ದು ಗ್ರಾಮದ ಕೆಲ ಮೇಲ್ವರ್ಗದವರು ಇತ್ತೀಚೆಗೆ ಅನಾದಿ ಕಾಲದಿಂದಲೂ ಸಂಪ್ರದಾಯ ಬದ್ಧವಾಗಿ ದೇವಿಗೆ ನಡೆದು ಕೊಂಡು ಬರುವುತ್ತಿರುವ ಕುಲಸ್ಥರನ್ನು ಟ್ರಸ್ಟ್ ನಲ್ಲಿ ಸೇರಿಕೊಂಡಿಲ್ಲ ಹಾಗೂ ಪ್ರತಿ ವರ್ಷ ದೇವಾಲಯಕ್ಕೆ ಭಕ್ತರು ಅರ್ಪಿಸುತ್ತಿರುವ ಕಾಣಿಕೆ ರೂಪದ ಹುಂಡಿ ಹಣವನ್ನು ಮೇಲ್ವರ್ಗದವರೆ ತಿಂದು ತೇಗುತ್ತಿದ್ದಾರೆಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.ಮುತ್ಯಾಲಮ್ಮನ ದೇವಾಲಯಕ್ಕೆ ದಾನಿಗಳು ನೀಡಿದ್ದ ಸುಮಾರು ಎರಡು ಎಕರೆಗೂ ಹೆಚ್ಚು ಜಾಗವನ್ನು ಕೆಲವರು ಕಬಳಿಸಿ ತಮ್ಮದೆಂದು ದಾಖಲೆಗಳನ್ನು ಸೃಷ್ಟಿಸಿ ಕೊಂಡಿದ್ದಾರೆ. ದೇವಾಲಯಕ್ಕೆ ಹೆಚ್ಚಾಗಿ ಎಸ್ ಸಿ ಮತ್ತು ಎಸ್ ಟಿ ಮತ್ತು ಇತರೆ ಸಮುದಾಯದವರೇ ನಡೆದು ಕೊಳ್ಳುತ್ತಿದ್ದು ಅವರೆನ್ನೆಲ್ಲಾ ದೂರವಿಟ್ಟು ಏಕಾಏಕಿ ಮೇಲ್ವರ್ಗದವರು ಟ್ರಸ್ಟ್ ಸೃಷ್ಟಿಸಿ ದ್ದು ಆ ಟ್ರಸ್ಟ್ ನ್ನು ರದ್ಧು ಪಡಿಸಿ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ನೂರಾರು ಗ್ರಾಮಸ್ಥರು ದೇವಾಲಯದ ಮುಂದೆ ಕೆಲ ಕಾಲ ಪ್ರತಿಭಟನೆ ನಡೆಸಿದರು.ಗ್ರಾಮಸ್ಥ ತಿಮ್ಮಾ ರೆಡ್ಡಿ ಮಾತನಾಡಿ, ಮುತ್ಯಾಲಮ್ಮ ದೇವಸ್ಥಾನವು ಎಲ್ಲಾ ಸಮುದಾಯಗಳಿಗೆ ಸೇರಿದ್ದಾಗಿದೆ ಅಂದಿನ ಕಾಲದಲ್ಲಿ ದಾನಿಗಳು ದೇವಾಲಯಕ್ಕೆ ನೀಡಿದ ಜಾಗದಲ್ಲಿ ಭಕ್ತಾಧಿಗಳ ಹಾಗೂ ಗ್ರಾಮಸ್ಥರ ನೆರವಿನಿಂದ ದೇವಾಲಯವನ್ನು ನಿರ್ಮಿಸಲಾಗಿತ್ತು ಅಂದೂ ಈ ಮೇಲ್ವರ್ಗದವರು ಯಾರು ಸಹಕಾರ ನೀಡಿರಲಿಲ್ಲ ಆದರೆ ಈಗ ಮೇಲ್ವರ್ಗದವರು ಕೆಳ ವರ್ಗದವರನ್ನು ಬಿಟ್ಟು ಟ್ರಸ್ಟ್ ರಚನೆ ಮಾಡಿರುವುದು ಸರಿಯಲ್ಲಾ ಎಂದರು.ಗ್ರಾಮದ ಭಾಗ್ಯಮ್ಮ ಮಾತನಾಡಿ, ನಮ್ಮತಾತನವರ ಸೇರಿಯಾದ ಜಾಗ ಇದಾಗಿದ್ದೂ ಮೊದಲಿನಿಂದಲೂ ಗ್ರಾಮಸ್ಥರೆಲ್ಲಾ ಸೇರಿಕೊಂಡು ಪೂಜಾ ಕೈಕಂರ್ಯಗಳನ್ನು ನಡೆಸಿ ಕೊಂಡು ಬರುತ್ತಿದ್ದೆವೆ. ಆದರೆ ಇತ್ತೀಚೆಗೆ ನಮ್ಮ ಗ್ರಾಮದ ಕೆಲವರು ಸೇರಿಕೊಂಡು ಪೊರ್ಜಾರಿಯಾಗಿ ಟ್ರಸ್ಟ್ ರಚಿಸಿದ್ದಾರೆ ಸ.ನಂ.೧೧೮ ರಲ್ಲಿ ಇರುವ ದೇವಾಲಯದ ವಿದ್ಯುತ್ಬಿಲ್ ನಮ್ಮ ತಂದೆಯವರ ಹೆಸರಿನಲ್ಲಿತ್ತು ಈಗ ಅದನ್ನು ಕೂಡ ಬದಲಾಯಿಸಿದ್ದಾರೆ ಎಂದು ಆರೋಪಿಸಿದರು.ಹಿರಿಯ ವೃದ್ದೆ ಅಂಜಿನಮ್ಮ ಮಾತನಾಡಿ, ಮೇಲ್ವರ್ಗದ ವರು ಇತ್ತೀಚೆಗೆ ದೇವಿಗೆ ಭಕ್ತರು ಸರ್ಮಪಿಸಿದ ಮೂಗತಿ ಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ , ದೇವಾಲಯದ ಹುಂಡಿಯ ಹಣವನ್ನು ಸಹ ತೆಗೆದು ಕೊಂಡು ಹೋಗಿದ್ದಾರೆ ಈ ದೇವಾಲಯವು ನಮಗೂ ಎಲ್ಲಾರಿಗೂ ಸೇರಿದ್ದಾಗಿದೆ ದೇವಾಲಯಕ್ಕೆ ಸಂಬAಧಿಸಿದ ದಾಖಲೆ ಗಳು ನಮ್ಮ ಬಳಿ ಇವೆ ದೇವಾಲಯ ಒಬ್ಬರ ಸ್ವತ್ತಾಲ್ಲ ಗ್ರಾಮಸ್ಥರೆಲ್ಲಾರಿಗೂ ಸೇರಿದ್ದಾಗಿದೆ ಎಂದರು.ಪ್ರತಿಭಟನೆಯಲ್ಲಿ ಜಗನ್ನಾಥ ರೆಡ್ಡಿ , ರಾಮಾಂಜಿನಪ್ಪ , ನಂಜಾರೆಡ್ಡಿ , ಆಶ್ವತರೆಡ್ಡಿ , ನಾಗರೆಡ್ಡಿ , ನರಸಪ್ಪ , ನಾರಾಯಣಪ್ಪ , ಶ್ರೀನಿವಾಸರೆಡ್ಡಿ , ನಂದೀಶ್ , ಶ್ರೀರಾಮಯ್ಯ , ವಿಜಯಕುಮಾರ್ , ಅನಸೂಯಮ್ಮ, ಪದ್ಮಾವತಮ್ಮ , ಭಾಗ್ಯಮ್ಮ, ಅನಿತಾ , ಪುಷ್ವವತಿ , ಸರಸ್ವತಮ್ಮ , ರಾಧಮ್ಮ , ರುದ್ರಮ್ಮ , ಉಮಾ , ಬಾಬಕ್ಕ , ಸಣ್ಣಕ್ಕ ಹಾಗೂ ನೂರಾರು ಗ್ರಾಮಸ್ಥರು ಇದ್ದರು.