ಜಮೀನುಗಳಿಗೆ ಏಕರೂಪ ಬೆಲೆ: ಎಸ್ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ಸರಕಾರಕ್ಕೆ ಅಭಿನಂದನೆ

ಕೊಲಾರ:ಕೃಷ್ಣ ಮೇಲ್ದಂಡೆ ಯೋಜನೆ ಹಂತ-೩ ರ ಅಡಿಯಲ್ಲಿ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಏಕರೂಪದ ಬೆಲೆ ನಿಗದಿಪಡಿಸಿ ತರ‍್ಪನ್ನು ರಚಿಸುವ ಮೂಲಕ ಪರಿಹಾರ ವಿತರಿಸಲು ಇಂದು ಬೆಳಗಾವಿಯಲ್ಲಿ ನಡೆದ ವಿಶೇಷ ಸಚಿವ ಸಂಪುಟದ ಸಭೆಯಲ್ಲಿ ಮಹತ್ವದ ಐತಿಹಾಸಿಕ  ಕೈಗೊಂಡ ಮುಖ್ಯಮಂತ್ರಿ ಹಾಗೂ ಸರಕಾರದ ಸಚಿವರುಗಳಿಗೆ ಧನ್ಯವಾದಗಳು ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಆವರಣದಲ್ಲಿ ರೈತರಿಗೆ ಸಿಹಿ ತಿನಿಸುವ ಮೂಲಕ ಏಕರೂಪ ಪರಿಹಾರ ನೀಡಲು ಘೋಷಿಸಿದ ಸರಕಾರಕ್ಕೆ ಅಭಿನಂದನೆ ಸಲ್ಲಿಸುವ ಮೂಲಕಕೃಷ್ಣಾ ನದಿಯ ಎಡದಂಡೆಯಲ್ಲಿ ಮುಳುಗಡೆಯಾಗಲಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ೧೪ ಗ್ರಾಮಗಳು ಕೊಲ್ಹಾರ ತಾಲ್ಲೂಕಿನ ೬ ಗ್ರಾಮಗಳು, ನಿಡಗುಂದಿ ತಾಲ್ಲೂಕಿನ ೯ ಗ್ರಾಮಗಳ ಜಮೀನುಗಳ ಭೂಪರಿಹಾರದಲ್ಲಿ ವ್ಯತ್ಯಾಸ ಉಂಟಾಗಿ ೨೦೧೬-೧೭ ರಲ್ಲಿ ಈ ಗ್ರಾಮಗಳು ಮರ‍್ಗರ‍್ಶಿ ಬೆಲೆ ಪರಿಷ್ಕೃತ ಗೊಂಡ ನಂತರ ಈವರೆಗೆ ಪರಿಷ್ಕೃತಗೊಳ್ಳದೇ ಇರುವುದರಿಂದ ರೈತರಿಗೆ ಆಗಿರುವ ಘೋರ ಅನ್ಯಾಯವನ್ನು ಪರಿಗಣನೆಗೆ ತೆಗೆದುಕೊಂಡು ಏಕರೂಪದ ಬೆಲೆ ಮತ್ತು ಸಮ್ಮತಿ ಐತರ‍್ಪನ್ನು ರಚಿಸಲು ನಾನು ಆರುರ‍್ಷದ ಹಿಂದೆ ಆಲಮಟ್ಟಿಯ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರ ಕಚೇರಿ ಮುಂದೆ ರೈತರೊಂದಿಗೆ ಸತತ೧ ರ‍್ಷ ೩ ತಿಂಗಳುಗಳ ಕಾಲ ಧರಣಿ ಕುಳಿತು ಮನವಿ ಸಲ್ಲಿಸಿದ್ದೆ. ಇಂದಿನ ಬಿಜೆಪಿ ರ‍್ಕಾರದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವರಾದ ಗೋವಿಂದ್ ಕಾರಜೋಳ, ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಎರಡು ಸಾರಿ ಮನವಿ ಸಲ್ಲಿಸಿದ್ದೆ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳುಈ ಐತಿಹಾಸಿಕ ತರ‍್ಮಾನ ತೆಗೆದುಕೊಂಡದಕ್ಕೆ ವಿಜಯಪುರ ಜಿಲ್ಲೆಯ ಬಬಲೇಶ್ವರ, ನಿಡಗುಂದಿ ಮತ್ತು ಕೊಲ್ಹಾರ ತಾಲ್ಲೂಕುಗಳಲ್ಲಿ ಹೋರಾಟ ಮಾಡಿಕೊಂಡು ಬಂದ ರೈತರಿಗೆ ಗೌರವಿಸಿದಂತಾಗಿದೆ ಮತ್ತು ವೈಯಕ್ತಿಕವಾಗಿ ನನಗೆ ಸಂತಸ ತಂದಿದೆ ಸಮಸ್ತ ರೈತರ ಪರವಾಗಿ ಮುಖ್ಯಮಂತ್ರಿಗಳಿಗೆ ರ‍್ಕಾರದ ಸಚಿವರುಗಳಿಗೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಈ ಸಂರ‍್ಭದಲ್ಲಿ ರೈತರಾದ ಬಸಪ್ಪ ಏಳಗಂಟಿ,ಬಸಪ್ಪ ಬಾಟಿ,ಕಲ್ಲಪ್ಪ ಸೊನ್ನದ, ಗರ‍್ಲಿಂಗಪ್ಪ ಬಾಟಿ, ವೀರಭದ್ರಪ್ಪ ಬಾಗಿ,ಅಶೋಕ ಗಿಡ್ಡಪ್ಪಗೋಳ ,ಪುಂಡಲಿಕ ಬಾಟಿ ಸುಭಾಷ್ ಭಜಂತ್ರಿ ಹಾಗೂ ರೈತರು ಇದ್ದರು.