ಗ್ರಾಮ ಪಂಚಾಯಿತಿ ಲೆಕ್ಕ ಪತ್ರದಲ್ಲಿ ಅವ್ಯವಹಾರ : ಪಿಡಿಒಗೆ ನೋಟಿಸ್
ತಿಪಟೂರು:ನೊಣವಿನಕೆರೆ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಗಳು ನಿಯಮಿತವಾಗಿ ನೆಡೆದೆಯಿದ್ದು, ಲೆಕ್ಕ ಪತ್ರಗಳಲ್ಲಿ ಹಾಗೂ ಖರ್ಚು ವೆಚ್ಚಗಳಿಗೆ ಸಂಬAಧಿಸಿದAತೆ ಮತ್ತು ೧೫ ನೇ ಹಣಕಾಸು ಯೋಜನೆಯ ಕೆ.ಟಿ.ಪಿ.ಪಿ ಹಾಗೂ ಕೆ.ಎಫ್.ಸಿ ನಿಯಮ ಪಾಲನೆ ಮಾಡದೇ ಉಲ್ಲಂಘನೆ ಮಾಡಿರುವುದು, ವಸ್ತುಗಳ ಖರೀದಿಯ ದಾಸ್ತಾನು ನಿರ್ವಹಣೆಯಿಲ್ಲದೆ ಇರುವುದು, ನಿಧಿ-೧ಕ್ಕೆ ಸಂಬAಧಿಸಿದAತೆ ತಾ ಪಂ ನಿಂದ ಕ್ರೀಯಾ ಯೋಜನೆಯ ಅನುಮೋದನೆ ಪಡೆಯದೆ ಕಾಮಗಾರಿ ಪ್ರಾರಂಭ ಮಾಡಿದ್ದು, ನರೇಗಾ ಯೋಜನೆಯಲ್ಲಿ ಕಾಮಗಾರಿ ಕಡತಗಳ ನಿರ್ವಹಣೆಯಿಲ್ಲದೆ ಇರುವುದು ಕಂಡು ಬಂದಿದ್ದು, ಬೇಜಾಬ್ದಾರಿತನ, ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷತೆ, ಮೇಲಾಧಿಕಾರಿಗಳ ಆದೇಶ ಪಾಲಿಸದೇಯಿರುವುದು, ಅಂಗಡಿ ಮಳಿಗೆಗಳ ಹರಾಜು ಪ್ರಕ್ರೀಯೆ ಮಾಡದೇ ಗ್ರಾ.ಪಂ ಯ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದು ಉಲ್ಲೇಖ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿಗಳ ಭೇಟಿ ಹಾಗೂ ಸಾರ್ವಜನಿಕರಾದ ಚೇತನ್‌ಕುಮಾರ್ ಮನವಿ ಪತ್ರದ ಉಲ್ಲೇಖದ ಮೂಲಕ ಕಾರ್ಯನಿರ್ವಾಹಕಾಧಿಕಾರಿ ಸುದರ್ಶನ್ ಅವರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಿವನಂಜೇಗೌಡ ಅವರಿಗೆ ನೋಟೀಸ್ ಜಾರಿ ಮಾಡಿ ೭ ದಿನಗಳಲ್ಲಿ ಉತ್ತರಿಸುವಂತೆ ತಿಳಿಸಿದ್ದಾರೆ.