ಶ್ರೀಗಳ ಲಿಂಗೈಕರಾದ ನಿಮಿತ್ಯೆ ಗಣ್ಯರ ಸಂತಾಪ
ಇಂಡಿ:ಸೋಲಾಪೂರ ಜಿಲ್ಲೆಯ ಮಂದ್ರೂಪದ ಹಿರೇಮಠದ ಪೂಜೆ ರೇಣುಕಾ ಶಿವಾಚಾರ್ಯ ಅಗಲಿಕೆಯಿಂದ ಅಧ್ಯಾತ್ಮಿಕ, ಧಾರ್ಮಿಕ ಲೋಕದ ಭಕ್ತಿಯ ಕೊಂಡಿ ಕಳಚಿದಂತಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಶ್ರೀಗಳ ಅಂತಿಮ ದರ್ಶನ ಪಡೆದ ನಂತರ ಅವರು ದೂರವಾಣಿ ಮೂಲಕ ಮಾತನಾಡಿದ ಅವರು ಶ್ರೀರೇಣುಕಾ ಶಿವಾಚಾರ್ಯರರು ಬಾಲ್ಯದಿಂದ ನನಗೆ ಸದಾ ಆರ್ಶೀವಾದ ಶ್ರೀರಕ್ಷೇ ನೀಡುತ್ತಿದ್ದರು .ರೇಣುಕಾ ಶಿವಾಚಾರ್ಯರರು ಸದಾ ಭಕ್ತರಿಗೆ ನಗು ಮೊಗದಿಂದ ಶ್ರೀರಕ್ಷೆ ನೀಡುತ್ತಿದ್ದರು. ಶ್ರೀಗಳು ಏಕಾ ಎಕೀ ದೈವಾದೀನರಾಗಿದ್ದಾರೆ ಎಂಬ ಸುದ್ದಿ ತಿಳಿದು ಮಸ್ಸಿಗೆ ಅಘಾತವಾಗಿದೆ. ಶ್ರೀಗಳು ನಮ್ಮ ಭಾಗದಲ್ಲಿ ಪಂಚಪೀಠಾಧೀಶರನ್ನು ಆಗಮನ ಮಾಡಿಸಿ ಅವರ ಪಾದಸ್ಪರ್ಶ ಮಾಡುವ ಮೂಲಕ ಈ ನಮ್ಮ ಭಾಗದ ಜನರಿಗೆ ಹೃದಯ ಶ್ರೀಮಂತ ರನ್ನಾಗಿಸಿದ್ದಾರೆ.ಶ್ರೀಗಳ ನಿಧನ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಶಾಸಕ ಪಾಟೀಲ ಸಂತಾಪ ವ್ಯಕ್ತಪಡಿಸಿದರು.
ಶ್ರೀಗಳು ಶ್ರೀಶಾಂತೇಶ್ವರ ದೇವಸ್ಥಾನದಲ್ಲಿ ಸಾಕಷ್ಟು ಬಾರಿ ಆಗಮಿಸಿ ಭಕ್ತಿಯ ರಸದೌತಣ ಉಣಬಡಿಸಿದ್ದಾರೆ. ಧರ್ಮ ಸಂಸ್ಕೃತಿ ಉಳಿವಿಗಾಗಿ ಗಡಿಭಾಗದಲ್ಲಿ ಸೌರ್ಹಾದತ್ತಾ ಕೊಂಡಿ ಯಾಗಿ ಕೆಲಸ ಮಾಡುತ್ತಿದ್ದರು. ಪೂಜ್ಯರ ಅಗಲೀಕೆಯಿಂದ ಈ ಭಾಗದ ಅನೇಕ ಭಕ್ತರಿಗೆ ಮನಸ್ಸಿಗೆ ನೋವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಶೂಕ ವ್ಯಕ್ತಪಡಿಸಿದ್ದಾರೆ.
ಸಂತಾಪ :ಸಂಸದ ರಮೇಶ ಜಿಗಜಿಣಗಿ, ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ, ಮಾಜಿ ಶಾಸಕ ರವಿಕಾಂತ ಪಾಟೀಲ, ಬಿಜೆಪಿ ರಾಜ್ಯ ಕರ‍್ಯಕಾರಣಿ ಸದಸ್ಯ ಶೀಲವಂತ ಉಮರಾಣಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಮಧುವನ ಇಂಟರ್ ನ್ಯಾಶನಲ್ ಹೊಟೇಲ್ ಮಾಲೀಕ, ಬಿಜೆಪಿ ಜಿಲ್ಲಾ ಮುಖಂಡ ಬಾಬುಗೌಡ ಬಿರಾದಾರ, ಜೆ.ಡಿ.ಎಸ್ ಮುಖಂಡ ಬಿ.ಡಿ ಪಾಟೀಲ, ಶಂಕರಗೌಡ ಪಾಟೀಲ ಡೊಮನ್ನಾಳ, ಸಾಂಬಾಜಿರಾವ ಮಿಸಾಳೆ, ಧರ್ಮು ವಾಲೀಕಾರ, ಅನೀಲ ಜಮಾದಾರ,ಪ್ರಶಾಂತ ಕಾಳೆ, ಹಣಮಂತರಾಯಗೌಡ ಪಾಟೀಲ,ವೆಂಕಟೇಶ ಕುಲಕರ್ಣಿ, ಶರಣಗೌಡ ಬಂಡಿ,ಜೈನುದೀನ ಬಾಗವಾನ, ಭೀಮರಾಯ ಮದರಖಂಡಿ,ಭೀಮಣ್ಣಾ ಕೌಲಗಿ, ಜಟ್ಟೆಪ್ಪ ರವಳಿ, ಭೀಮಾಶಂಕರ ಮೂರಮನ್, ವಿಜಯಕುಮಾರ ಮಾನೆ, ರಾಮಸಿಂಗ ಕನ್ನೋಳ್ಳಿ, ಅಶೋಕಗೌಡ ಪಾಟೀಲ, ಅನೀಲ ಪ್ರಸಾದ ಏಳಗಿ, ಪ್ರಭು ಹೊಸಮನಿ, ಎಂ.ಎಸ್ ಪಾಟೀಲ ,ಎಂ,ಆರ್ ಪಾಟೀಲ ಗೋಳಸಾರ , ನ್ಯಾಯವಾದಿ ಅಶೋಕ ಗಜಾಕೋಶ, ಜಾವೀದ ಮೋಮಿನ್,ಸಿದ್ದು ಡಂಗಾ, ಹುಚ್ಚಪ್ಪ ತಳವಾರ ,ಗಂಗಾಧರ ನಾಟೀಕಾರ, ಶೇಖರ ಶಿವಶರಣ ಸೇರಿದಂತೆ ಇಂಡಿ ಪಟ್ಟಣದ ಗಣ್ಯರು ಅನೇಕ ಭಕ್ತಾದಿಗಳು ಸಂತಾಪ ಸೂಚಿಸಿದ್ದಾರೆ.