ಕಾರ್ಯನಿರತ ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ಬಿಡಿಎ ಫ್ಲಾಟ್
ಬೆಂಗಳೂರು:ಕಾರ್ಯನಿರತ ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ಬಿಡಿಎ ಫ್ಲಾಟ್ ನೀಡುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಭರವಸೆ ನೀಡಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ಪತ್ರಕರ್ತರ ನಿಯೋಗ ಬೆಳಗಾವಿ ಸುವರ್ಣ ಸೌಧದಲ್ಲಿ ಭೇಟಿ ಮಾಡಿ ಚರ್ಚೆ ಮಾಡಿದ ಸಂದರ್ಭ, ಈ ಬಗ್ಗೆ ಕೂಡಲೇ ಮುಖ್ಯಮಂತ್ರಿ ಜೊತೆಗೆ ಚರ್ಚೆ ಮಾಡಿ  ಬೇಡಿಕೆ ಈಡೇರಿಸುವು ದಾಗಿ ಭರವಸೆ ನೀಡಿದರು.
ವಕೀಲರ ಸಂಘಕ್ಕೆ ನೀಡಿರುವ ಮಾದರಿಯಲ್ಲಿ ಪತ್ರಕರ್ತರಿಗೂ ಬಿಡಿಎ ಪ್ಲಾಟ್ ಗಳನ್ನು ಒದಗಿಸಲಾಗುವುದು. ಈ ಬಗ್ಗೆ ಸಂಘದ ಮೂಲಕ ಅರ್ಹ ಪತ್ರಕರ್ತರಿಂದ ಆದಷ್ಟು ಬೇಗ ಅರ್ಜಿಗಳನ್ನು ಪಡೆದು ಒಟ್ಟಿಗೆ ಬಿಡಿಎಗೆ ನೀಡುವಂತೆ ತಿಳಿಸಿದರು.
ನಿಯೋಗದಲ್ಲಿ ವಿಜಯವಾಣಿ ಪತ್ರಿಕೆಯ ರುದ್ರಣ್ಣ ಹರ್ತಿಕೋಟೆ, ಟಿವಿ 18 ರಾಜಕೀಯ ವಿಭಾಗದ ಮುಖ್ಯಸ್ಥ ಚಿದಾನಂದ ಪಟೇಲ್, ದಿಗ್ವಿಜಯ ಟಿವಿ ವಿಜಯ್, ಟಿವಿ 9 ನ ಪ್ರಮೋದ್ ಶಾಸ್ತ್ರಿ, ಪ್ರಜಾ ಟಿವಿಯ ಗೋವಿಂದ್, ವಿಶ್ವವಾಣಿ ಪತ್ರಿಕೆಯ ಸುದ್ದಿ ಸಂಪಾದಕ ಶಿವಕುಮಾರ್ ಬೆಳ್ಳಿತಟ್ಟೆ ಉಪಸ್ಥಿತರಿ ದ್ದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಸಲ್ಲಿಸಿದ ಮನವಿಗೆ ಕೂಡಲೇ ಸ್ಪಂದಿಸಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರಿಗೆ ಪತ್ರಕರ್ತರ ಪರವಾಗಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿನಂದನೆ ಸಲ್ಲಿಸಿದರು. - 