ಭಾರತವು ಇಂಡಿಯಾ ಎನರ್ಜಿ ವೀಕ್ ೨೦೨೩ರ ಆಯೋಜನೆ, ಶಕ್ತಿಯ ಪ್ರಗತಿ, ಸಹಯೋಗ ಮತ್ತು ಪರಿವರ್ತನೆ ಕುರಿತು ಜಾಗತಿಕ ನಾಯಕರ ಚಿಂತನ ಮಂಥನ
ಬೆಂಗಳೂರು:ಭಾರತದ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಬೆಂಗಳೂರಿನಲ್ಲಿ ಭಾರತ ಶಕ್ತಿ ಸಪ್ತಾಹ ೨೦೨೩ರ ಉದ್ಘಾಟನಾ ಆವೃತ್ತಿಯನ್ನು (ಫೆಬ್ರವರಿ ೬ರಿಂದ ೮, ೨೦೨೩ ಬೆಂಗಳೂರು ಅಂತಾರಾಷ್ಟಿçÃಯ ವಸ್ತು ಪ್ರದರ್ಶನ ಕೇಂದ್ರ) ಆಯೋಜಿಸಲಿದ್ದು ಹೇಗೆ ಭಾರತವು ಜೈವಿಕ ಇಂಧನಗಳು, ಹಸಿರು ಜಲಜನಕ, ನವೀಕರಿಸಬಲ್ಲ ಶಕ್ತಿ ಮತ್ತು ಸಾಂಪ್ರದಾಯಿಕ ಶಕ್ತಿಯ ಸಂಯೋಜನೆಯ ಮೂಲಕ ಹೆಚ್ಚುತ್ತಿರುವ ಶಕ್ತಿಯ ಬೇಡಿಕೆಯನ್ನು ಪೂರೈಸಲಿದೆ ಎನ್ನುವ ಕುರಿತು ಜಾಗತಿಕ ನೀತಿ ನಿರೂಪಕರು ಮತ್ತು ಶಕ್ತಿ ನಾಯಕರ ನಡುವೆ ಚರ್ಚೆಗಳನ್ನು ನಡೆಸಲಿದೆ.
ಭಾರತವು ತನ್ನ ಅರ್ಥವ್ಯವಸ್ಥೆಯು ಬೆಳೆಯುವ ಮತ್ತು ತನ್ನ ಜನರಿಗೆ ಹಾಗೂ ಜಾಗತಿಕ ಶಕ್ತಿಯ ಮೌಲ್ಯ ಸರಣಿಯಲ್ಲಿ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಮುಂದಿನ ಎರಡು ದಶಕಗಳಲ್ಲಿ ಬೇರೆ ಯಾವುದೇ ದೇಶಕ್ಕಿಂತ ಹೆಚ್ಚಿನ ಶಕ್ತಿಯ ಬೇಡಿಕೆ ಕಾಣಲಿದೆ. ವೇಗವಾಗಿ ಅಭಿವೃದ್ಧು ಹೊಂದುತ್ತಿರುವ ದೇಶವಾಗಿ ಮತ್ತು ಸದ್ಯದಲ್ಲೇ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆಯ ದೇಶವಾಗಿ ಭಾರತದ ಶಕ್ತಿಯ ಪರಿವರ್ತನೆಯು ಜಾಗತಿಕ ಶಕ್ತಿ ಮಾರುಕಟ್ಟೆಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಭಾರತ ಶಕ್ತಿ ಸಪ್ತಾಹವು ಅತ್ಯಂತ ಸಂಕೀರ್ಣ ಸಮಯದಲ್ಲಿ ಬಂದಿದ್ದು ಶಕ್ತಿಯ ಭದ್ರತೆಯ ಸವಾಲುಗಳು ಮತ್ತು ಪಾರಿಸರಿಕ ಸುಸ್ಥಿರತೆಯು ದೀರ್ಘಾವಧಿ ಶಕ್ತಿಯ ಪರಿವರ್ತನೆಯ ಮೇಲೆ ಹಾಗೂ ಡಿಕಾರ್ಬನೈಸೇಷನ್‌ನ ಮಾರ್ಗಗಳಿಗೆ ಪರಿಣಾಮ ಬೀರಲಿದೆ.
ಭಾರತದ ಜಿ೨೦ ಅಧ್ಯಕ್ಷತೆಯ ಕ್ಯಾಲೆಂಡರ್‌ನಲ್ಲಿ ಮೊದಲ ಶಕ್ತಿಯ ಕಾರ್ಯಕ್ರಮವಾಗಿ ದೇಶಾದ್ಯಂತ ಶಕ್ತಿ ನಾಯಕರು ಹೇಗೆ ಭಾರತವು ಭಾರತದ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾತಾವರಣ ಬದಲಾವಣೆಗೆ ಸಿಒಪಿ೨೬ರಲ್ಲಿ ಅನಿಲ, ಜೈವಿಕ ಇಂಧನಗಳು ಮತ್ತು ಜಲಜನಕದ ಪೂರ್ಣ ಸಾಮರ್ಥ್ಯವನ್ನು ಬಳಸುವ ಮೂಲಕ ೨೦೭೦ರ ವೇಳೆಗೆ ನೆಟ್-ಜೀ಼ರೋ ಸಾಧಿಸಲು ಪ್ರಸ್ತುತ ಮತ್ತು ಮುಂದಿನ ಯೋಜನೆಗಳನ್ನು ಕೂಡಾ ಪ್ರಸ್ತುತಪಡಿಸಲಿದ್ದಾರೆ.
ಮಾನ್ಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಹರ್‌ದೀಪ್ ಸಿಂಗ್ ಪುರಿ ಅವರು ಪ್ರಮುಖ ಚರ್ಚೆಗೆ ಮತ್ತು ವಿಕಾಸಗೊಳ್ಳುತ್ತಿರುವ ಶಕ್ತಿಯ ಸನ್ನಿವೇಶಕ್ಕೆ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲು ಅಂತಾರಾಷ್ಟಿçÃಯ ಶಕ್ತಿಯ ಸಹೋದ್ಯೋಗಿಗಳನ್ನು ಸ್ವಾಗತಿಸಲಿದ್ದಾರೆ.
ಭಾರತ ಶಕ್ತಿ ಸಪ್ತಾಹ ೨೦೨೩ರಲ್ಲಿ ೩೦,೦೦೦ಕ್ಕೂ ಹೆಚ್ಚು ಶಕ್ತಿ ವೃತ್ತಿಪರರು ಪೂರ್ಣ ಶಕ್ತಿಯ ಮೌಲ್ಯ ಸರಣಿಯಲ್ಲಿರುವ ಶಕ್ತಿ, ಹಣಕಾಸು, ಸರ್ಕಾರ, ಬುದ್ಧಿಜೀವಿಗಳು ಮತ್ತು ಶೈಕ್ಷಣಿಕ ವೃತ್ತಿಪರರು ಭಾರತದ ಅತ್ಯಂತ ದೊಡ್ಡ ಶಕ್ತಿಯ ಪ್ರದರ್ಶನ, ಬಹುಮುಖಿ ಸಮ್ಮೇಳನ ಕಾರ್ಯಕ್ರಮ ಮತ್ತು ಮೂರು ದಿನಗಳು ನಡೆಯಲಿರುವ ವಿಶೇಷ ಕಾರ್ಯಕ್ರಮಗಳ ಸರಣಿಯಲ್ಲಿ ಭಾಗವಹಿಸಲಿದ್ದಾರೆ.
ಈ ಅಂತಾರಾಷ್ಟಿçÃಯ ಪ್ರದರ್ಶನವು ಭಾರತದ ಎಕ್ಸ್ಪೀರಿಯೆನ್ಸ್ ಝೋನ್, ಫ್ಯೂಚರ್ ಮೊಬಿಲಿಟಿ ಝೋನ್, ಬಯೋ-ಎನರ್ಜಿ ಝೋನ್ ಮತ್ತು ಪೆಟ್ರೋನೆಟ್ ಎಲ್‌ಎನ್‌ಜಿ ಪೆವಿಲಿಯನ್, ಮೇಕ್ ಇನ್ ಇಂಡಿಯಾ ಪೆವಿಲಿಯನ್ ಮತ್ತು ವೇಸ್ಟ್ ಟು ಎನರ್ಜಿ ಪೆವಿಲಿಯನ್ ಮುಂತಾದ ವಿಶೇಷ ಪೆವಿಲಿಯನ್‌ಗಳು ಇದ್ದು ೬೫೦+ ಪ್ರದರ್ಶಿಸುವ ಕಂಪನಿಗಳು ಭಾರತಕ್ಕೆ ಮತ್ತು ಜಾಗತಿಕ ಮಾರುಕಟ್ಟೆಗೆ ಅವುಗಳ ಪರಿಹಾರಗಳನ್ನು ಪ್ರಸ್ತುತಪಡಿಸಲಿವೆ. ಈ ಪ್ರದರ್ಶನವು ಸಂದರ್ಶಕರಿಗೆ ಉಚಿತ ಪ್ರವೇಶ ನೀಡುತ್ತದೆ ಆದರೆ ಆನ್‌ಲೈನ್ ತಿತಿತಿ.iಟಿಜiಚಿeಟಿeಡಿgಥಿತಿeeಞ.ಛಿ/ಡಿegisಣeಡಿ ಮೂಲಕ ನೋಂದಣಿ ಕಡ್ಡಾಯವಾಗಿದೆ.
ಈ ಪ್ರದರ್ಶನ ಮತ್ತು ವಿಚಾರ ಸಂಕಿರಣದ ಪ್ರಮುಖ ವಿಷಯಗಳಲ್ಲಿ:• ಶಕ್ತಿಯು ಎಲ್ಲರಿಗೂ ಲಭ್ಯ, ಸುರಕ್ಷಿತ ಮತ್ತು ಕೈಗೆಟುಕುವಂತೆ ಮಾಡುವುದು• ನೆಟ್-ಜೀ಼ರೋಗೆ ಮಾರ್ಗ ನಿರ್ಮಿಸುವುದು• ತಂತ್ರಜ್ಞಾನ ಆವಿಷ್ಕಾರ ಮತ್ತು ವರ್ಗಾವಣೆ• ಪ್ರಗತಿ ಪೂರೈಕೆಗೆ ಸಹಯೋಗಗಳನ್ನು ಸಾಧ್ಯವಾಗಿಸುವುದು