 : ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಸಲು ಸಹಕಾರಿ-ದಿಲೀಪ್ ಕುಮಾರ್
ಯರಗುಂಟೆಯ ಜೀನಿ ಆಹಾರ ಉತ್ಪಾದನಾ ಕೇಂದ್ರದಲ್ಲಿ ರಕ್ತದಾನ ಶಿಬಿರ
ಶಿರಾ:ರಕ್ತದಾನ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಮತ್ತೊಬ್ಬರ ಜೀವವನ್ನು ಉಳಿಸುವಲ್ಲಿ ಹೆಚ್ಚು ಸಹಕಾರಿ ಯಾಗುತ್ತದೆ, ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವ ಉಳಿಸುವಂತಹ ಕೆಲಸ ಮಾಡಬೇಕಿದೆ ಎಂದು ಪ್ರತಿಷ್ಠಿತ ಜೀನಿ ಆಹಾರ ಉತ್ಪಾದನಾ ಸಂಸ್ಥೆಯ ಅಧ್ಯಕ್ಷ ದಿಲೀಪ್ ಕುಮಾರ್ ಹೇಳಿದರು.
ಅವರು ತಾಲೂಕಿನ ಯರಗುಂಟೆ ಗ್ರಾಮದಲ್ಲಿರುವ ಜೀನಿ ಆಹಾರ ಉತ್ಪಾದನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತದಾನ ಮಾಡುವುದರಿಂದ ಮನುಷ್ಯನ ದೇಹದ ರಕ್ತ ಶುದ್ಧೀಕರಣ ವಾಗಲಿದ್ದು ಹೃದಯಾಘಾತದಂತಹ ಅಪಾಯದಿಂದ ಪಾರಾಗಬಹುದು. ಆದ್ದರಿಂದ 18 ವರ್ಷ ತುಂಬಿದ ಆರೋಗ್ಯ ವಂತ ವ್ಯಕ್ತಿಗಳು ರಕ್ತದಾನ ಮಾಡುವಂತಹ ಪ್ರವೃತ್ತಿ ಬೆಳೆಸಿಕೊಳ್ಳಬೇಕು.
ಸಾಮಾಜಿಕ ಸೇವೆ, ಶೈಕ್ಷಣಿಕ ಸೇವೆ ಸೇರಿದಂತೆ ಹಲವಾರು ರೀತಿಯ ಸೇವೆಗಳನ್ನು ಜೀನಿ ಆಹಾರ ಉತ್ಪಾದನಾ ಸಂಸ್ಥೆ ಮಾಡುತ್ತಾ ಬಂದಿದೆ. ಅಲ್ಲದೆ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಯುವಕರಿಂದ ರಕ್ತದಾನ ಮಾಡಿಸಬೇಕು ಎಂಬ ಉದ್ದೇಶದಿಂದ ಶಿಬಿರ ಆಯೋಜಿಸಿ 50 ಜನ ಸಿಬ್ಬಂದಿಯ ರಕ್ತದಾನ ಮಾಡಿಸಿದ್ದೇವೆ. ಈ ಅಮೂಲ್ಯವಾದ ರಕ್ತ ರೋಗಿಗಳ ಜೀವ ಉಳಿಸಲು ಸಹಕಾರಿಯ ಆದರೆ ನಮ್ಮ ಸೇವೆ ಸಾರ್ಥಕತೆ ಕಾಣಲಿದೆ ಎಂದರು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆ ರಕ್ತನಿಧಿ ವ್ಯವಸ್ಥಾಪಕರು ಡಾ. ಶೇಕ್, ಶಿರಾ ತಾಯಿ ಮಕ್ಕಳ ಆಸ್ಪತ್ರೆ ರಕ್ತನಿಧಿ ವ್ಯವಸ್ಥಾಪಕ ಡಾ.ಸುರೇಶ್ ಸೇರಿದಂತೆ ಆರೋಗ್ಯ ಕಾರ್ಯಕರ್ತರು, ಜೀನಿ ಸಂಸ್ಥೆಯ ಸಿಬ್ಬಂದಿ ಹಾಜರಿ ದ್ದರು.
ಇದನ್ನೂ ಓದಿ: : ಸರ್ಕಾರಿ ಶಾಲೆಗಳಲ್ಲೂ ಪ್ರತಿಭಾವಂತ ಶಿಕ್ಷಕರಿದ್ದಾರೆ: ಶಾಸಕ ಬಿ. ಸುರೇಶ್‌ಗೌಡ