ಅನುರಾಗದ ಶಿಕ್ಷಣವನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ
ತಿಪಟೂರು:ಇಂದಿನ ಆಧುನಿಕ ಶಿಕ್ಷಣದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡು ಮಕ್ಕಳಲ್ಲಿ ಅಡಗಿ ರುವ ಸುಪ್ತ ಪ್ರತಿಭೆಯನ್ನು ಹೊರತಂದು ಅವರ ಜ್ಞಾನಾರ್ಜನೆಯ ಮಟ್ಟವನ್ನು ಉನ್ನತೀಕರಿಸಿ ಮನುಕುಲದ ಅಭಿವೃದ್ಧಿಗೆ ನಾಂದಿ ಹಾಡಬೇಕೆಂದು ತಿಳಿಸಿದರು ಅಲ್ಲದೆ ಪೋಷಕರಿಗೆ ಅಂಕಾಧಾರಿತ ಶಿಕ್ಷಣಕ್ಕೆ ಹೆಚ್ಚು ಹೊತ್ತು ಕೊಡದೆ ಪಠ್ಯೇತರ ಚಟು ವಟಿಕೆಗಳ ಮೂಲಕ ಅನುರಾಗದ ಶಿಕ್ಷಣವನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್‌ರವರು ಹೇಳಿದರು.
ತಿಪಟೂರಿನ ಕಲ್ಪತರು ಸೆಂಟ್ರಲ್ ಶಾಲೆಯ ಶಾಲಾ ವಾರ್ಷಿಕೋತ್ಸವವನ್ನು ಉದ್ಗಾಟಿಸಿ ಮಾತನಾಡಿದ ಅವರು ಭಾರತೀಯ ಗುರುಕುಲ ಶಿಕ್ಷಣ ಪದ್ಧತಿ ಇಂದು ದೇಶವಿದೇಶಗಳಲ್ಲಿ ನೆಲೆಯೂರಿದೆ ಇದರಂತೆಯೇ ನಮ್ಮ ದೇಶದಲ್ಲಿಯೂ ಸಹ ಅಳವಡಿಸಿ ಕೊಂಡು ಕಲಿಕೆಯ ಜೊತೆ ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯದಂತ0ಹ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಶಿಕ್ಷಣ ತಜ್ಞರಾದ ಉಡೇ ಪಿ ಕೃಷ್ಣರವರು ಸ್ವಾಮಿ ವಿವೇಕಾನಂದರು ಹೇಳಿರುವಂತೆ ‘ನಮ್ಮ ಆಲೋಚನೆಗಳೆ ನಮ್ಮನ್ನು ರೂಪಿಸುತ್ತವೆ ಆದ್ದರಿಂದ ಏನನ್ನು ಯೋಚಿಸುತ್ತೀರೊ ಅದರ ಬಗ್ಗೆ ಎಚ್ಚರದಿಂದಿರಿ’ ಇಂತಹ ಮೌಲ್ಯಯುತ ಯೋಚನಾ ಮಟ್ಟದ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಬೇಕೆಂದು ತಿಳಿಸಿದರು. ಗಾಂಧಿಜಿಯವರ ದೃಷ್ಟಿಕೋನವಾದ ಜೌದ್ಯೋಗಿಕ ಶಿಕ್ಷಣಕ್ಕೆ ಹೆಚ್ಚು ಹೊತ್ತು ಕೊಟ್ಟು ಮಕ್ಕಳಲ್ಲಿ ಕ್ರಿಯಾಶೀಲತೆಯ ಗುಣವನ್ನು ಬೆಳಸಿ ಸ್ವಾವಲಂಬನೆಯ ಜೀವನ ನಡೆಸಲು ಪ್ರೋತ್ಸಾಹಿಸುವ ಗುರುರವಾದ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲಿದೆ ಎಂದು ತಿಳಿಸಿದರು.
ಕಲ್ಪತರು ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ ಆರ್ ಸಂಗಮೇಶ್‌ರವರು ಶಿಕ್ಷಣವು ಮಾನವನನ್ನು ಸುಸಂಕೃತಿಯತ್ತ ಕೊಂಡೊಯ್ಯುವ ಸಾಧನ. ಇಂತಹ ಶಿಕ್ಷಣವನ್ನು ನಮ್ಮ ಶಾಲೆಯು ಅಂದಿನಿ0ದ ಇಂದಿನವರೆಗೂ ನೀಡುತ್ತಾ ಬಂದಿದೆ. ಅಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳು ಮಾನವನ ಅವಿಭಾಜ್ಯ ಅಂಗಗಳಾಗಿವೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಮಕ್ಕಳು ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಎಲ್ಲರನ್ನು ರಂಜಿಸುತ್ತ ಅನೇಕ ಪ್ರಶಸ್ತಿಗಳನ್ನು ಪಡೆದು ಮುನ್ನಡೆಯುತ್ತಿರುವ ನಮಗೆ ಸಂತಸ ತಂದಿದೆ ಎಂದರು.
ಕಲ್ಪತರು ವಿದ್ಯಾ ಸಂಸ್ಥೆಯ ಉಪಾಧ್ಯಕ್ಷರಾದ ಬಾಗೆಪಲ್ಲಿ ನಟರಾಜ್‌ರವರು ‘ಶಿಕ್ಷಣವು ಕೆಲವೇ ಜನರ ಸ್ವತ್ತಾಗದೆ ಎಲ್ಲರ ಆ ಜನ್ಮಸಿದ್ಧ ಹಕ್ಕಾಗಬೇಕು’ ಎಂಬ ತತ್ವದ ಅಡಿಯಲ್ಲಿ ಈ ಶಾಲೆಯು ಕಾರ್ಯನಿರ್ವಹಿಸುತ್ತಿದೆ ಇದಕ್ಕೆ ಬದ್ಧರಾಗಿ ನಾವೆಲ್ಲ ಕಾರ್ಯೋ ನ್ಮುಕರಾಗಿದ್ದೇವೆ ಇದರ ಸದುಪಯೋಗವನ್ನು ಮಕ್ಕಳೆಲ್ಲರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಲ್ಪತರು ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ ಕೆ ತಿಪ್ಪೇರುದ್ರಪ್ಪನವರು ಸಾಂಸ್ಕೃತಿಕ ಚಟುವಟಿಕೆಗಳು ಮಾನವನ ಆಸರಿಕೆ ಬೇಸರಿಕೆಗಳನ್ನು ನೀಗಿಸುವ ಮೂಲಮಂತ್ರಗಳು ಇಂತಹ ಸಾಂಸ್ಕೃತಿಕ ಕಾರ್ಯಗಳು ಮಾನವನಲ್ಲಿ ಚೇತನವನ್ನು ಉಂಟುಮಾಡಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುತ್ತವೆ ಎಂದು ತಿಳಿಸಿ. ಶಿಕ್ಷಣದ ಜೊತೆಜೊತೆಗೆ ಇಂತಹ ಕಾರ್ಯಗಳ ಪ್ರೋತ್ಸಾಹಕ್ಕೆ ಸದಾ ನಾವು ಸಿದ್ದರಾಗಿರುತ್ತೇವೆಂದು ತಿಳಿಸಿದರು.
ಎಲ್ಲರ ನೆಚ್ಚಿನ ಆಕರ್ಷಣೀಯ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭರತನಾಟ್ಯ, ಭೂತಕೋಲ, ಶಿವತಾಂಡವ ಸಿರಿಗನ್ನಡಂ ಗೆಲ್ಗೆ, ಯಕ್ಷಗಾನ, ವಿವಿಧ ರಾಜ್ಯಗಳ ಕಲೆಗಳನ್ನು ಒಂದರಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ನಯನ ಮನೋಹರವಾಗಿ ನೃತ್ಯಮಾಡುವುದರ ಮೂಲಕ ನೆರೆದಿದ್ದ ಎಲ್ಲ ಪ್ರೇಕ್ಷಕರ ಮನಸೂರೆಗೊಂಡರು.
ಖಚಾಂಜಿಗಳಾದ ಟಿ ಎಸ್ ಶಿವಪ್ರಸಾದ್‌ರವರು, ಉಪಾಧ್ಯಾಕ್ಷರುಗಳಾದ ಶ್ರೀ ಬಾಗೆಪಲ್ಲಿ ನಟರಾಜರವರು, ಟಿ ಎಸ್ ಬಸವರಾಜ್, ಜಿಪಿ ದೀಪಕ್, ಬಿಎಸ್ ಉಮೇಶ್, ಕಾರ್ಯದರ್ಶಿಗಳಾದ ಎಂ.ಆರ್ ಸಂಗಮೇಶ್‌ರವರು, ಟಿ ಯು ಜಗದೀಶ್‌ಮೂರ್ತಿಯವರು , ಜಿ ಎಸ್ ಉಮಾಶಂಕರ್‌ರವರು , ಹೆಚ್ ಜಿ ಸುಧಾಕರ್‌ರವರು ಹಾಗೆಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ ಜೆ ಪ್ರಭುಸ್ವಾಮಿಯವರು, ತಹಸಿಲ್ದಾರರಾದ ಎಸ್ ಪವನ್ ಕುಮಾರ್‌ರವರು ಹಾಜರಿದ್ದರು. ಶಾಲಾ ಪ್ರಾಂಶುಪಾಲರಾದ ಶ್ರೀಮತಿ ದೇವಿಕ ಬಿ ಸ್ವಾಮಿಯವರು ಶಾಲಾ ಅಭಿವೃದ್ಧಿ ಹಾಗೂ ಮಕ್ಕಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಾಧನೆಯ ವರದಿಯನ್ನು ಓದಿದರು.
*
‘ನಮ್ಮ ಆಲೋಚನೆಗಳೆ ನಮ್ಮನ್ನು ರೂಪಿಸುತ್ತವೆ ಆದ್ದರಿಂದ ಏನನ್ನು ಯೋಚಿಸುತ್ತೀರೊ ಅದರ ಬಗ್ಗೆ ಎಚ್ಚರದಿಂದಿರಿ’ಉಡೇ ಪಿ ಕೃಷ್ಣ ಶಿಕ್ಷಣ ತಜ್ಞ
‘ಶಿಕ್ಷಣವು ಕೆಲವೇ ಜನರ ಸ್ವತ್ತಾಗದೆ ಎಲ್ಲರ ಆ ಜನ್ಮಸಿದ್ಧ ಹಕ್ಕಾಗಬೇಕು ಎಂಬುದು ಕಲ್ಪತರು ವಿಧ್ಯಾಸಂಸ್ಥೆಯ ಆಶಯ.ಬಾಗೇಪಲ್ಲಿ ನಟರಾಜು ಉಪಾಧ್ಯಕ್ಷ ಕಲ್ಪತರು ವಿಧ್ಯಾಸಂಸ್ಥೆ