ಸರಣಿ ಡಿ ನಿಧಿ ಸಂಗ್ರಹಿಸಿದ ವೇಕ್‌ಫಿಟ್‌.ಕೊ; ಕರ್ನಾಟಕದಾದ್ಯಂತ ವಹಿವಾಟು ಮತ್ತಷ್ಟು ವಿಸ್ತರಿಸುವ ಗುರಿ
~ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ 4 ಮಳಿಗೆಗಳೊಂದಿಗೆ, ಕಂಪನಿಯು ರಾಜ್ಯದಾದ್ಯಂತ 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಇನ್ನಷ್ಟು ಮಳಿಗೆ ತೆರೆಯಲು ಯೋಜಿಸಿದೆ ~~ ಸರಣಿ ಡಿ ನಿಧಿಯು, ಕಂಪನಿಯ ವೈವಿಧ್ಯಮಯ ಮಾರಾಟ ವಹಿವಾಟನ್ನು ಮತ್ತಷ್ಟು ವಿಸ್ತರಿಸಲಿದ್ದು, ಪೂರೈಕೆ ಸರಪಳಿಯ ಕಾರ್ಯಾ ಚರಣೆ ಹೆಚ್ಚಿಸಲಿದೆ
ಬೆಂಗಳೂರು:ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು (ಡಿ2ಸಿ) ತಲುಪಿಸುವ ಭಾರತದ ಅತಿದೊಡ್ಡ ಗೃಹ ಮತ್ತು ನಿದ್ದೆ (   ) ಪರಿಹಾರ ಗಳ ವೇಕ್‌ಫಿಟ್‌.ಕೊ (.) ಕಂಪನಿಯು, ಇತ್ತೀಚೆಗೆ ₹320 ಕೋಟಿ ಮೊತ್ತದ ಬಂಡವಾಳ ಸಂಗ್ರಹಿಸಿದೆ. 40ಕ್ಕೂ ಹೆಚ್ಚು ವರ್ಷಗಳ ಅಪಾರ ಅನುಭವದ ಹಿನ್ನೆಲೆ ಹೊಂದಿರುವ ಪರ್ಯಾಯ ಹೂಡಿಕೆ ಉತ್ಪನ್ನಗಳ ಪ್ರಮುಖ ನಿರ್ವಹಣಾ ಕಂಪನಿಯಾಗಿರುವ ಇನ್ವೆಸ್ಟ್‌ಕಾರ್ಪ್ ನೇತೃತ್ವದಲ್ಲಿ ₹320 ಕೋಟಿ ಮೊತ್ತದ ಸರಣಿ ಡಿ ನಿಧಿ ಸಂಗ್ರಹಿಸಲಾಗಿದೆ. ಈಗ ಕಂಪನಿಯು ತನ್ನ ಉತ್ಪನ್ನ ನಾವೀನ್ಯತೆ ಮತ್ತು ಗ್ರಾಹಕ-ಕೇಂದ್ರಿತ ಹಣಕಾಸು ವಿವೇಕದೊಂದಿಗೆ ಈ ಬಂಡವಾಳವನ್ನು ಬಳಸುವ ಗುರಿ ಹೊಂದಿದೆ. ಈ ಬಂಡವಾಳ ಸಂಗ್ರಹದ ಪ್ರಕ್ರಿಯೆಯು ವೇಕ್‌ಫಿಟ್‌.ಕೊದ ವಹಿವಾಟು ವಿಸ್ತರಣೆ ಬಲಪಡಿಸುವು ದನ್ನು ಸಕ್ರಿಯಗೊಳಿಸುತ್ತದೆ.
ಕಂಪನಿಯ ವೈವಿಧ್ಯಮಯ ಮಾರಾಟದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ನೆರವಾಗಲಿದೆ. ಸರಣಿ ಡಿ ಸುತ್ತಿನ ಬಂಡವಾಳ ಸಂಗ್ರಹವು ಕಂಪನಿಯ ತಯಾರಿಕೆ ಮತ್ತು ಪೂರೈಕೆ ಸರಪಳಿಯ ಸಾಮರ್ಥ್ಯಗಳನ್ನು ಬಲಪಡಿಸಲು, ಎಲ್ಲಾ ಹಂತಗಳಲ್ಲಿ ನೇಮಕಾತಿ ಹೆಚ್ಚಿಸಲು ಮತ್ತು ಬ್ರ್ಯಾಂಡ್‌ನ ಜನ ಪ್ರಿಯತೆ ಹೆಚ್ಚಿಸುವ ಉಪಕ್ರಮಗಳನ್ನು ಸುಧಾರಿಸಲು ಸಹಾಯ ಮಾಡಲಿದೆ.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಕಂಪನಿಯ ಬಹುಬಗೆಯ ಮಾರಾಟ ವಹಿವಾಟು ವಿಸ್ತರಿಸುವುದಕ್ಕೂ ಈ ಹಣ ಬಳಸಲಾಗುವುದು. ಹಣಕಾಸು ವರ್ಷ 2022ರಲ್ಲಿ ಬೆಂಗಳೂರಿನಾದ್ಯಂತ, ಈಜಿಪುರ, ಬಾಣಸವಾಡಿ, ಮಾರತಹಳ್ಳಿ ಮತ್ತು ಜೆಪಿ ನಗರದಲ್ಲಿ ನಾಲ್ಕು ಮಾರಾಟ ಮಳಿಗೆಗಳನ್ನು ಪ್ರಾರಂಭಿಸಿರುವ ವೇಕ್‌ಫಿಟ್‌.ಕೊ, ರಾಜ್ಯದ ಇತರ ಪ್ರದೇಶಗಳನ್ನು ತಲುಪಲು ಕರ್ನಾಟಕದ ವಿವಿಧ ನಗರಗಳಲ್ಲಿ ಹೆಚ್ಚಿನ ಮಳಿಗೆಗಳನ್ನು ತೆರೆಯಲು ಉದ್ದೇಶಿಸಿದೆ. ಕರ್ನಾಟಕದಲ್ಲಿ ಭೌತಿಕ ಮಾರಾಟ ಮಳಿಗೆಗಳ ಪ್ರಾರಂಭವು 2021 ಮತ್ತು 2022ರ ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 71ರಷ್ಟು ಬೆಳವಣಿಗೆ ದಾಖಲಿಸಿದೆ. ಇದರಿಂದಾಗಿ ಕಂಪನಿಯು ವರ್ಷದಲ್ಲಿ 2.15 ಲಕ್ಷ ಗ್ರಾಹಕರಿಗೆ ಸೇವೆ ಸಲ್ಲಿಸಲು ಸಾಧ್ಯವಾಯಿತು. ಹಿಂದಿನ ವರ್ಷ, ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಆನ್‌ಲೈನ್‌ ತಾಣಗಳಲ್ಲಿ ಮಾಹಿತಿ ಹುಡುಕಾಡಿದ ನಿದ್ರೆಯ ಬ್ರ್ಯಾಂಡ್ ಆಗಿ ವೇಕ್‌ಫಿಟ್‌.ಕೊ ಹೊರ ಹೊಮ್ಮಿದೆ. ಇದು ಬ್ರ್ಯಾಂಡ್‌ ಬಗ್ಗೆ ಜನರು ತೋರಿದ ಅಪಾರ ಪ್ರೀತಿಗೆ ಸಾಕ್ಷಿಯಾಗಿದೆ.
ವೇಕ್‌ಫಿಟ್‌.ಕೊದ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅವರು ಮಾತನಾಡಿ, ‘ಮನೆ ಮತ್ತು ನಿದ್ರೆಗೆ ಸಂಬಂಧಿಸಿದ ಕೊಡುಗೆ ಗಳೊಂದಿಗೆ ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಿರುವುದು ನಮ್ಮ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕದಲ್ಲಿನ ನಮ್ಮ ಗ್ರಾಹಕರಿಂದ ನಮಗೆ ದೊರೆತಿರುವ ಸಕಾರಾತ್ಮಕ ಪ್ರತಿಕ್ರಿಯೆಯು ತುಂಬ ಉತ್ತೇಜನಕಾರಿಯಾಗಿದೆ. ಈ ಹೊಸ ಸುತ್ತಿನ ಬಂಡವಾಳ ಸಂಗ್ರಹವು ರಾಜ್ಯದ ಹೆಚ್ಚಿನ ನಗರಗಳಲ್ಲಿ ನಮ್ಮ ವಹಿವಾಟು ವಿಸ್ತರಿಸಲು ನಮಗೆ ಸಹಾಯ ಮಾಡಲಿದೆ. ಇದನ್ನು ಫಲಪ್ರದ ರೀತಿಯಲ್ಲಿ ಕಾರ್ಯರೂಪಕ್ಕೆ ತರಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಹೂಡಿಕೆದಾರರಿಂದ ನಮಗೆ ದೊರೆತಿರುವ ಈ ನೆರವನ್ನು ನಾವು ಅಪಾರವಾಗಿ ಶ್ಲಾಘಿಸುತ್ತೇವೆ. ಭಾರತದ ಅತ್ಯಂತ ಅಚ್ಚುಮೆಚ್ಚಿನ ಮನೆ ಮತ್ತು ನಿದ್ರೆಯ ಪರಿಹಾರಗಳ ಬ್ರ್ಯಾಂಡ್ ಆಗುವ ನಮ್ಮ ಗುರಿ ಸಾಧಿಸುವ ನಿಟ್ಟಿನಲ್ಲಿ ಇನ್ನಷ್ಟು ಪರಿಶ್ರಮ ಪಡುವುದನ್ನು ಮುಂದುವರಿಸಲಿದ್ದೇವೆ’ ಎಂದು ಹೇಳಿದ್ದಾರೆ.
ವೇಕ್‌ಫಿಟ್‌.ಕೊದ ಸಿಇಒ ಮತ್ತು ಸಹ-ಸಂಸ್ಥಾಪಕ ಅಂಕಿತ್ ಗಾರ್ಗ್ ಅವರು ಪ್ರತಿಕ್ರಿಯಿಸಿ, ‘ನಾವು ಕರ್ನಾಟಕದಲ್ಲಿ ನಮ್ಮ ವಹಿವಾಟಿನ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವಂತೆ, ನಾವು ಸರಣಿ ಡಿ ನಿಧಿ ಸ್ವೀಕರಿಸುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಈ ನಿಧಿಯು ಮನೆ ಮತ್ತು ನಿದ್ರೆಯ ಪರಿಹಾರಗಳ ಉದ್ಯಮದಲ್ಲಿ ನಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ನಮ್ಮ ತಯಾರಿಕೆ ಮತ್ತು ಪೂರೈಕೆ ಸರಪಳಿ ಸಾಮರ್ಥ್ಯ ಗಳನ್ನೂ ವಿಸ್ತರಿಸಲಿದೆ. ನಮ್ಮ ಗ್ರಾಹಕರು ವೇಕ್‌ಫಿಟ್‌.ಕೊಗೆ ತೋರಿಸಿದ ದೀರ್ಘಕಾಲದ ಬೆಂಬಲ, ವಿಶ್ವಾಸ ಮತ್ತು ಪ್ರೀತಿಗಾಗಿ ನಾವು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಇದು ಕರ್ನಾಟಕದಲ್ಲಿ ಮನೆಮಾತಾಗುವ ಗುರಿ ಹೊಂದಿರುವುದರಿಂದ, ಪ್ರತಿದಿನ ಉತ್ತಮವಾಗಿ ಕಾರ್ಯನಿರ್ವಹಿಸಲು ನಮ್ಮನ್ನು ಪ್ರೇರೇಪಿಸುತ್ತದೆ’ ಎಂದು ಹೇಳಿದ್ದಾರೆ.
ಹಣಕಾಸು ವರ್ಷ 2021ಕ್ಕೆ ಹೋಲಿಸಿದರೆ, ಹಣಕಾಸು ವರ್ಷ 2022 ರಲ್ಲಿ, ವೇಕ್‌ಫಿಟ್‌.ಕೊ, ಶೇ 54ರಷ್ಟು ವರಮಾನ ಹೆಚ್ಚಳ ದಾಖಲಿಸುವ ಮೂಲಕ ಒಟ್ಟಾರೆ ₹ 636 ಕೋಟಿ ಮೊತ್ತದ ವರಮಾನ ಗಳಿಸಿದೆ. ವೇಕ್‌ಫಿಟ್‌.ಕೊದ ವಹಿವಾಟು ವಿಸ್ತರಣೆಯಲ್ಲಿ 2022 ರಲ್ಲಿ ತಯಾರಿಕೆ ಆರಂಭಿಸಿದ ಭಾರತದ ಅತಿದೊಡ್ಡ ಪೀಠೋಪಕರಣ ತಯಾರಿಕಾ ಕಾರ್ಖಾನೆಯ ಕೊಡುಗೆ ಗಮನಾರ್ಹವಾಗಿದೆ. ಇದು ಕಂಪನಿಯ ವಹಿವಾಟು ಹೆಚ್ಚಳಕ್ಕೆ ದೊಡ್ಡ ಪ್ರಮಾಣ ದಲ್ಲಿ ನೆರವಾಗಿದೆ. ಈ ಕಾರ್ಖಾನೆಯು ತಿಂಗಳಿಗೆ ಸುಮಾರು 1 ಲಕ್ಷ ಮನೆಗಳಿಗೆ ಅಗತ್ಯ ಇರುವಷ್ಟು ಉತ್ಪನ್ನಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ.
ಹಿಂದಿನ ವರ್ಷದಲ್ಲಿ ಎರಡೂ ರಾಜ್ಯಗಳಲ್ಲಿ ಆನ್‌ಲೈನ್‌ನಲ್ಲಿ ಹೆಚ್ಚು ಹುಡುಕಾಡಿದ ನಿದ್ರೆಯ ಬ್ರ್ಯಾಂಡ್ ವೇಕ್‌ಫಿಟ್‌.ಕೊ ಆಗಿರುವುದು, ಗ್ರಾಹಕರಲ್ಲಿ ಮನೆ ಮಾಡಿರುವ ಬ್ರ್ಯಾಂಡ್‌ನ ಜನಪ್ರಿಯತೆಗೆ ಉತ್ತಮ ನಿದರ್ಶನವಾಗಿದೆ. ಕಂಪನಿಯು 2024ರ ಹಣಕಾಸು ವರ್ಷದಲ್ಲಿ ₹ 1,200 ಕೋಟಿಗೂ ಹೆಚ್ಚು ವರಮಾನ ಗಳಿಸುವ ಗುರಿ ಹೊಂದಿದೆ. ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವಾಗ ‘ಇಬಿಐಟಿಡಿಎ’ ಅನ್ನು ಧನಾತ್ಮಕವಾಗಿ ಪರಿವರ್ತಿಸುವುದು ಮತ್ತು ಭಾರತದಲ್ಲಿ ಮನೆ ಪರಿಹಾರಗಳ ವಿಷಯದಲ್ಲಿ ಗ್ರಾಹಕರ ಅತ್ಯಂತ ಪ್ರೀತಿಯ ಬ್ರ್ಯಾಂಡ್ ಆಗಿ ಬೆಳೆಯಲಿದೆ.