ಪ್ರೇಮಿಗಳ ದಿನ ಆಚರಣೆಗೆ ಈ ಜಾಗಗಳು ಸೂಕ್ತ…
ಫ್ರೆಬ್ರವರಿ:ಪ್ರತಿಯೊಬ್ಬ ಪ್ರೇಮಿಗಳಿಗೂ ಈ ದಿನ ಅತ್ಯಂತ ವಿಶೇಷವಾದದ್ದು. ತಮ್ಮ ವ್ಯಾಲೆಂಟೈನ್‌ನನ್ನು ಸಪ್ರೈಸ್‌ಗೊಳಿಸಲು ಯಾವ ಸ್ಥಳಕ್ಕೆ ಕರೆ ದೊಯ್ಯಬೇಕು? ಹೇಗೆಲ್ಲಾ ಸಪ್ರೈಸ್‌ ನೀಡಬೇಕು ಎಂದು ಸಾಕಷ್ಟ ಆಸೆ ಹೊಂದಿರುತ್ತಾರೆ. ಈ ಬಗ್ಗೆ ಗೂಗಲ್‌ ಸಹ ಮಾಡಿರುತ್ತಾರೆ. ಆದರೂ ಕೆಲವೊಮ್ಮೆ ಐಡಿಯಾ ಸಿಕ್ಕಿರುವುದಿಲ್ಲ. ನಿಮ್ಮ ಸಂಗಾತಿಯೊಂದಿಗೆ ಏಕಾಂತವಾಗಿ ಸಮಯ ಕಳೆಯಲು ಅಥವಾ ಅವರನ್ನು ಸಪ್ರೈಸ್‌ ಮಾಡಲು ಒಂದಷ್ಟು ಸಲಹೆ ಗಳು ಇಲ್ಲಿವೆ.
ಚಿಕ್ಕಮಗಳೂರು- ಮಡಿಕೇರಿ ಈಸ್‌ ಬೆಸ್ಟ್‌:ಮಡಿಕೇರಿ ಪ್ರತಿಯೊಬ್ಬರ ಪಾಲಿಗೂ ಸ್ವರ್ಗವೇ ಸರಿ. ಅಲ್ಲಿನ ಪರಿಸರ, ಅಲ್ಲಿನ ಪ್ರಕೃತಿ ಸೌಂದರ್ಯ ಸೊಬಗು ಎಂಥವರನ್ನು ಮನಸೂರೆ ಮಾಡದೆ ಇರಲಾರದು. ಈ ಸ್ಥಳ ಪ್ರೇಮಿಗಳಿಗೆ ಪರ್ಫೆಕ್ಟ್‌.. ತಮ್ಮ ಮನಸ್ಸಿನಲ್ಲಿರುವ ಪ್ರೀತಿಯನ್ನು ತಮ್ಮ ವ್ಯಾಲೆಂಟೈನ್‌ ಜೊತೆ ವ್ಯಕ್ತಪಡಿಸಲು, ನಿಮ್ಮಬ್ಬರ ಮಧ್ಯೆ ಇರುವ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಪ್ರಕೃತಿಯೂ ಸಪೋರ್ಟ್‌ ಮಾಡಲಿದ್ದಾಳೆ. ಇದಷ್ಟೇ ಅಲ್ಲ, ಈ ಭಾಗದಲ್ಲಿ ಸಾಕಷ್ಟು ರೆಸಾರ್ಟ್‌ಗಳಿದ್ದು, ಕ್ಯಾಂಡಲ್‌ ಲೈಟ್‌ ಡಿನ್ನರ್‌ ಅಥವಾ ನಿಮ್ಮ ಪ್ರೀತಿಪಾತ್ರರಿಗೋಸ್ಕರನೇ ಬೇಕಾದ ರೊಮ್ಯಾಂಟಿಕಲ್‌ ಪರಿಸರ ವನ್ನು ನೀವೇ ನಿರ್ಮಾಣ ಮಾಡಿಕೊಳ್ಳಬಹುದು. ಈಗಾಗಲೇ ರೆಸಾರ್ಟ್‌ಗಳಲ್ಲಿ ಇವುಗಳಿಗೆ ಆಫರ್‌ ಸಹ ನೀಡಲಾಗುತ್ತಿದೆ. ಇನ್ನು, ಇಡೀ ದಿನ ಮಡಿಕೇರಿಯ ಸುತ್ತಮುತ್ತಲಿನ ಪ್ರದೇಶ ನೋಡಲು ನೀವು ತೆರಳಬಹುದು. ಭೂಲೋಕದ ಸ್ವರ್ಗದಂತಿರುವ ಚಿಕ್ಕಮಗಳೂರಿನಲ್ಲಿ ಅದರಲ್ಲೂ ಈ ಋತುವಿನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡುವುದು ಅತ್ಯಂತ ರೊಮ್ಯಾಂಟಿಕ್‌ ಆಗಿರುವುದರಲ್ಲಿ ಸಂದೇಹವಿಲ್ಲ.
• ೩೦೦ ಅಡಿ ಮೇಲಿಂದ ನಿಮ್ಮ ವ್ಯಾಲೆಂಟೈನ್‌ಗೆ ಪ್ರಮೋಸ್‌ ಮಾಡಿ:ವಿಭಿನ್ನವಾಗಿ ಪ್ರೇಮಿಗಳ ದಿನವನ್ನು ಆಚರಿಸಬೇಕು ಎನ್ನುವುದು ಪ್ರತಿಯೊಬ್ಬ ಪ್ರೇಮಿಯ ಆಸೆಯೂ ಹೌದು. ಅದಕ್ಕಾಗಿಯೇ ವಂಡರ್‌ಲಾ ವತಿಯಿಂದ ಪ್ರೇಮಿಗಳಿಗಾಗಿ ವಿಶೇಷ ಆಚರಣೆಗಳನ್ನು ಇಟ್ಟಿದೆ. ನಿಮ್ಮ ವ್ಯಾಲೆಂಟೈನ್‌ ಜೊತೆ ರೊಮ್ಯಾಂಟಿಕ್‌ ಅನುಭವ ಪಡೆಯಲು 300 ಅಡಿ ಎತ್ತರದ ಸ್ಕೈವೀ ಲಿಂಗ್‌ನಲ್ಲಿ ಹಾರಬಹುದು. ಈ ಪ್ಯಾಕೇಜ್‌ ನೀವು ತೆಗೆದುಕೊಂಡರೆ, ನಿಮಗಷ್ಟೇ ಈ ಸ್ಕೈವೀಲ್‌ ತಿರುಗಲಿದೆ. ಇದಷ್ಟೇ ಅಲ್ಲ, ವೇವ್‌ಪೂಲ್‌ನಲ್ಲಿ ರೊಮ್ಯಾಂ ಟಿಕ್‌ ಡಿನ್ನರ್‌ ಸಹ ಆಯೋಸಿದ್ದಾರೆ. ಈ ಪ್ಯಾಕೇಜ್‌ ತೆಗೆದುಕೊಂಡರೆ, ವೇವ್‌ ಪೂಲ್‌ನಲ್ಲಿ ನೀವು ಮತ್ತು ನಿಮ್ಮ ವ್ಯಾಲೆಂಟೈನ್‌ ಮಾತ್ರ ಇರುವಂತೆ ಎಲ್ಲಾ ರೀತಿಯ ಅರೆಂಜ್‌ಮೆಂಟ್ಸ್‌ ಮಾಡಲಿದ್ದಾರೆ. ಇದು ಖಂಡಿತ ನಿಮ್ಮ ವ್ಯಾಲೆಂಟೈನ್‌ಗೆ ವಿಶೇಷ ಹಾಗೂ ರೊಮ್ಯಾಂಟಿಕ್‌ ಅನುಭವ ನೀಡುವುದಲ್ಲಿ ಅನು ಮಾನವಿಲ್ಲ.
• ಪಾಂಡಿಚೇರಿಯಲ್ಲಿ ಬೀಚ್ ಡೇಪಾಂಡಿಚೇರಿಯ ಕಡಲತೀರದ ದಿನವು ಪ್ರೇಮಿಗಳ ದಿನವನ್ನು ಕಳೆಯಲು ವಿನೋದ ಮತ್ತು ವಿಶ್ರಾಂತಿ ಮಾರ್ಗವಾಗಿದೆ. ಪಾಂಡಿಚೇರಿಯು ಭಾರತದ ದಕ್ಷಿಣ ರಾಜ್ಯವಾದ ತಮಿಳುನಾಡಿನಲ್ಲಿರುವ ಒಂದು ಸುಂದರವಾದ ಕರಾವಳಿ ಪಟ್ಟಣವಾಗಿದೆ. ಬೀಚ್‌ಫ್ರಂಟ್ ರೆಸಾರ್ಟ್ ಅಥವಾ ಹೋಮ್‌ಸ್ಟೇಗೆ ಪರಿಶೀಲಿಸಿ ಮತ್ತು ಸಂಜೆಯನ್ನು ಬೀಚ್‌ನಲ್ಲಿ ವಿಶ್ರಾಂತಿ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಲು ಕಳೆಯಿರಿ. ಅಲೆಗಳ ಸದ್ದಿಗೆ ಎಚ್ಚರಗೊಂಡು ಬಿಡುವಿನ ಉಪಹಾರ ಸೇವಿಸುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ದಂಪತಿಗಳು ಕಡಲತೀರದಲ್ಲಿ ದಿನ ಕಳೆಯಬಹುದು, ಸಮುದ್ರದಲ್ಲಿ ಸ್ನಾನ ಮಾಡ ಬಹುದು ಅಥವಾ ಪ್ಯಾರಾಸೈಲಿಂಗ್ ಮತ್ತು ಪ್ಯಾಡಲ್‌ಬೋರ್ಡಿಂಗ್‌ನಂತಹ ಜಲ ಕ್ರೀಡೆಗಳನ್ನು ಪ್ರಯತ್ನಿಸಬಹುದು. ವಾಯುವಿಹಾರದ ಉದ್ದಕ್ಕೂ ಒಂದು ಪ್ರಣಯ ದೂರ ಅಡ್ಡಾಡು ಮತ್ತು ಪ್ರಸಿದ್ಧ ಆರೋವಿಲ್ಲೆ ಆಶ್ರಮಕ್ಕೆ ಭೇಟಿ ನೀಡಿ. ಸಂಜೆ, ಬೀಚ್‌ಫ್ರಂಟ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿ ಮತ್ತು ಪ್ರಣಯ ಕ್ಯಾಂಡಲ್‌ಲೈಟ್ ಡಿನ್ನರ್ ಅನ್ನು ಆನಂದಿಸಿ.