  ’  ನಡೆಸಿದ ತಾಯಿಯನ್ನು ತಬ್ಬಿಕೊಳ್ಳುವ # ಅಭಿಯಾನ
•  ನಡೆಸಿದ ಸಮೀಕ್ಷೆಯ ಪ್ರಕಾರ, ಭಾಗವಹಿಸುವವರು ತಮ್ಮ ತಾಯಂದಿರನ್ನು ಮಕ್ಕಳಾಗಿದ್ದಾಗ ಹೋಲಿಸಿದರೆ 50% ಕಡಿಮೆ ತಬ್ಬಿಕೊಳ್ಳುತ್ತಾರೆ• 60% ಭಾಗವಹಿಸುವವರು ತಾಯಂದಿರು ತಮ್ಮ ‘ಸಂತೋಷ’ದ ದೊಡ್ಡ ಮೂಲ ಎಂದು ಹೇಳುತ್ತಾರೆ
ಬೆಂಗಳೂರು:ಇಂದಿನ ವೇಗದ ಜಗತ್ತಿನಲ್ಲಿ, ವಿವಿಧ ಕಾರಣಗಳಿಗಾಗಿ ಒತ್ತಡದ ಮಟ್ಟಗಳು ಏರುತ್ತಿವೆ. ಸದಾ ಆನ್‌ಲೈನ್‌ನಲ್ಲಿ ಇರುವುದು, ಗೇಮಿಂಗ್‌, ಸಾಮಾಜಿಕ ಜಾಲತಾಣದಲ್ಲಿ ಸಮಯವನ್ನು ಕಳೆಯುವುದಲ್ಲೇ ಬ್ಯುಸಿಯಾಗಿದ್ದೇವೆ. ಇದರಿಂದ ಪೋಷಕರೊಂದಿಗೆ ಕಾಲ ಕಳೆಯುವುದೇ ಕಡಿಮೆ ಯಾಗಿದೆ. ಮಕ್ಕಳು ಮತ್ತು ಪೋಷಕರ ನಡುವೆ ಪ್ರೀತಿ, ಬಾಂಧವ್ಯ ಬೆಸೆಯುವ ಉದ್ದೇಶದಿಂದ   ’  # ಎನ್ನುವ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ.
ಈ ಹೊಸ ವರ್ಷದ ಹೊಸ್ತಿಲಿನಲ್ಲಿ ಅಮ್ಮನ ಪ್ರೀತಿಯನ್ನು ಇನ್ನಷ್ಟು ಪಡೆಯಲು # ಅಭಿಯಾನ ನಡೆಸಿ, ತಾಯಿಯ ಅಪ್ಪುಗೆಗೆ ಮಕ್ಕಳನ್ನು ಪ್ರೋತ್ಸಾಹಿಸಿದೆ. ದೆಹಲಿ, ಬೆಂಗಳೂರು ಮತ್ತು ಮುಂಬೈನಾದ್ಯಂತ 321 ಜನರೊಂದಿಗೆ ಸಮೀಕ್ಷೆ ನಡೆಸಿದ್ದು, ತಾಯಿಯ ಅಪ್ಪುಗೆಯ ಜನರ ಕಳೆದು ಕೊಳ್ಳುತ್ತಿದ್ದಾರೆಯೇ ಎಂಬುದರ ಅನುಭವದ ಬಗ್ಗೆ ಮಾಹಿತಿ ಕಲೆ ಹಾಕಿದೆ.
ಭಾಗವಹಿಸುವವರಲ್ಲಿ ಸಮೀಕ್ಷೆಯ ಪ್ರಮುಖ ಮುಖ್ಯಾಂಶಗಳು:– ಮಗುವಾಗಿದ್ದಾಗ ಅವರ ತಾಯಿಯನ್ನು ತಬ್ಬಿಕೊಳ್ಳುವ ಅನುಭವ ಶೇ. 31ರಿಂದ ಶೇ. 33ರಷ್ಟು ಕಡಿಮೆಯಾಗಿದೆ. ಕೆಲಸಕ್ಕೆ ಹೋಗುವವರಿಗಿಂತ ವಿದ್ಯಾರ್ಥಿ ಆಗಿದ್ದ ವಯಸ್ಸಿನ ಮಕ್ಕಳೇ ತಾಯಿಯಯನ್ನು ಹೆಚ್ಚಾಗಿ ಅಪ್ಪಿಕೊಳ್ಳುತ್ತಾರೆ.– ತಮ್ಮ ಒತ್ತಡ ಕಡಿಮೆ ಮಾಡಲು ಹೆಚ್ಚಾಗಿ ಸಂಗೀತವನ್ನು ಕೇಳುವುದು , ಎರಡನೆಯದಾಗಿ ಅತಿಯಾಗಿ  ವೀಕ್ಷಿಸುವುದು, ಮೂರನೆಯದಾಗಿ ತಾಯಂದಿರನ್ನು ತಬ್ಬಿಕೊಳ್ಳುವುದು ಆಗಿದೆ.– ವಾರಕ್ಕೆ ೬ ಬಾರಿ ಮಗುವನ್ನು ತಬ್ಬಿಕೊಳ್ಳುವುದು, ಸಂಗಾತಿಯನ್ನು ತಬ್ಬಿಕೊಳ್ಳುವ ವಾರಕ್ಕೆ ಸರಿಸುಮಾರು 5 ಬಾರಿ, ಆದರೆ ತಾಯಂದಿರನ್ನು ತಬ್ಬಿಕೊಳ್ಳುವುದು ವಾರಕ್ಕೆ ಕೇವಲ 3 ಬಾರಿ.– ಸಮೀಕ್ಷೆಯಲ್ಲಿ ಭಾಗವಹಿಸಿದವರನ್ನು ತಮ್ಮ ತಾಯಂದಿರನ್ನು ತಬ್ಬಿಕೊಂಡಾಗ ಅವರಿಗೆ ಹೇಗೆ ಅನಿಸಿತು ಎಂದು ಕೇಳಿದಾಗ – ಶೇ.60 ಕ್ಕಿಂತ ಹೆಚ್ಚು ಜನರು ಅವರು ಆರಾಮ, ಉಲ್ಲಾಸ ಮತ್ತು ಸಂತೋಷದ ಭಾವನೆಯನ್ನು ಅನುಭವಿಸಿದ್ದಾಗಿ ಹೇಳಿದ್ದಾರೆ.
ಸಮೀಕ್ಷೆಯಲ್ಲಿ 13 ರಿಂದ 35 ರ ವಯೋಮಾನದ ಗಂಡು ಮತ್ತು ಹೆಣ್ಣು ಮಕ್ಕಳು ಒಳಗೊಂಡಿದ್ದಾರೆ. ಪ್ರಮುಖವಾಗಿ ವಿದ್ಯಾರ್ಥಿಗಳು, ವೃತ್ತಿಪರರು, ಗೃಹಿಣಿಯರು ಮತ್ತು ಅವರ ಪೋಷಕರೊಂದಿಗೆ ಮತ್ತು ದೂರವಿರುವ ಯುವಕರನ್ನು ಸಮೀಕ್ಷೆಯಲ್ಲಿ ತೊಡಗಿಸಲಾಗಿತ್ತು.
ಸಮೀಕ್ಷೆ ಮತ್ತು ಸಾಮಾಜಿಕ ಪ್ರಯೋಗ ಅಭಿಯಾನದ ಕುರಿತು ಮಾತನಾಡಿದ ಐಟಿಸಿ ಲಿಮಿಟೆಡ್‌ ಫುಡ್ಸ್ ವಿಭಾಗದ ಬಿಸ್ಕೆಟ್ಸ್ ಮತ್ತು ಕೇಕ್ಸ್ ಕ್ಲಸ್ಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲಿ ಹ್ಯಾರಿಸ್ ಶೆರೆ, “ತಬ್ಬಿಕೊಳ್ಳುವುದು ಪ್ರೀತಿಯ ಅಭಿವ್ಯಕ್ತಿ ಮತ್ತು ತಾಯಿ ಮತ್ತು ಅವಳ ಮಕ್ಕಳ ನಡುವಿನ ಬಾಂಧವ್ಯದ ಅವಿಭಾಜ್ಯವಾಗಿದೆ. ನಾವು ವಯಸ್ಸಾದಂತೆ ನಮ್ಮ ತಾಯಂದಿರೊಂದಿಗೆ ದೈಹಿಕ ನಿಕಟತೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ.
ಮಕ್ಕಳು ಹೆಚ್ಚು ಸ್ವತಂತ್ರರಾಗುತ್ತಿದ್ದಂತೆ ಅಂತರವು ಹೆಚ್ಚುತ್ತಿರುವ ತಾಯಂದಿರಿಗೆ ಒಂಟಿತನಕ್ಕೆ ಕಾರಣವಾಗುತ್ತದೆ. ಅಮ್ಮಂದಿರಿಗೆ ಸಂಬಂಧಿಸಿದ ದೈನಂದಿನ ಸಮಸ್ಯೆಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ. ಅಮ್ಮನನ್ನು ಅಪ್ಪಿಕೊಳ್ಳುವುದರಲ್ಲಿರುವ ಬೆಚ್ಚಗಿನ ಭಾವ, ಮನಸ್ಸಿಗೆ ಆಗುವ ಉಲ್ಲಾಸ ಬೇರಾವುದರಲ್ಲೂ ಸಿಗುವುದಿಲ್ಲ. ತಾಯಿಯನ್ನು ತಬ್ಬಿಕೊಳ್ಳುವುದರಿಂದ ಎಲ್ಲಾ ಮಾನಸಿಕ ಒತ್ತಡವೂ ಸಂಪೂರ್ಣ ನಿವಾರಣೆಯಾಗಿ ನಿಮ್ಮ ಮನಸ್ಸು ಉಲ್ಲಾಸಭರಿತವಾಗಲಿದೆ. ಇದು ತಾಯಿ ಮತು ಮಗು ಇಬ್ಬರಿಗೂ ದೊಡ್ಡ ಚಿಕಿತ್ಸೆ.
# ಎಂಬ ನಮ್ಮ ಅಭಿಯಾನ, ಪ್ರತಿಯೊಬ್ಬರು ತಮ್ಮ ಅಮ್ಮಂದಿರನ್ನು ಹೆಚ್ಚಾಗಿ ತಬ್ಬಿಕೊಳ್ಳುವಂತೆ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಪ್ರತಿ ವರ್ಷ ಏನೇನೋ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುತ್ತೇವೆ, ಈ ವರ್ಷ, ನಾವೆಲ್ಲಾ ಮಕ್ಕಳಿದ್ದಾಗ, ಮುಗ್ದವಾಗಿ ತಾಯಿಯನ್ನು ತಬ್ಬಿಕೊಳ್ಳುತ್ತಿದ್ದೆವಲ್ಲಾ, ಅದೇ ಮುಗ್ದತೆಯಿಂದ ಈಗಲೂ ತಬ್ಬಿಕೊಳ್ಳಬೇಕು ಎಂಬುದಾಗಿರಲಿ.
ಪ್ರಯೋಗದ ವಿವರಗಳು:  ’  ಅಭಿಯಾನದ ಭಾಗವಾಗಿ, ಒಬ್ಬ ವ್ಯಕ್ತಿಯು ತನ್ನ ತಾಯಿಯನ್ನು ತಬ್ಬಿಕೊಂಡಾಗ ಆಗುವ ಸಂತೋಷದ ಮಟ್ಟವನ್ನು ಅರ್ಥಮಾಡಿಕೊಳ್ಳಲು “ದಿ ಹ್ಯಾಪಿನೆಸ್ ಹ್ಯಾಕ್ ಎಕ್ಸ್‌ಪರಿಮೆಂಟ್” ಎಂಬ ಸಾಮಾಜಿಕ ಪ್ರಯೋಗವನ್ನು ನಡೆಸಿತು. ಅಂದರೆ, ಆ ವ್ಯಕ್ತಿಗೆ ತನ್ನ ತಾಯಿಯನ್ನು ತಬ್ಬಿಕೊಂಡಾಗ ಆಗುವ ಸಂತೋಷವನ್ನು ಅಳೆಯಲು ಬ್ರೈನ್ ಟ್ರ್ಯಾಕಿಂಗ್ ಸಾಧನವನ್ನು ಜೋಡಿಸಲಾಗಿತ್ತು. ಈ ಸಾಧನವನ್ನು ಎರಡು ದಿನಗಳವರೆಗೂ ಅವರಲ್ಲಿ ಅಳವಡಿಸಲಾಗಿತ್ತು. ಆ ವ್ಯಕ್ತಿಯು, ತನ್ನ ಈ ಎರಡೂ ದಿನದಲ್ಲಿ ಮೊಬೈಲ್‌ ಬಳಕೆ ಮಾಡುವುದು, ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವುದು, ಚಾಟ್‌ ಮಾಡುವುದು ಹಾಗೂ ತಾಯಿಯನ್ನು ಅಪ್ಪಿಕೊಳ್ಳುವುದು ಇಷ್ಟು ಚಟುವಟಿಕೆಯನ್ನು ನೀಡಲಾಗಿತ್ತು. ಇದರಲ್ಲಿ ಬೇರೆಯಲ್ಲಾ ಚಟುವಟಿಕೆಯಲ್ಲೂ ಸಾಧರಣ ಖುಷಿಯನ್ನು ಹೊಂದಿದ್ದರು. ಆದರೆ, ಅವರ ತಾಯಿಯನ್ನು ತಬ್ಬಿಕೊಂಡಾಗ ಆದ ಸಂತಸ ಈ ಎಲ್ಲಾ ಖುಷಿಗಿಂತ ಮುಗಿಲಾಗಿತ್ತು ಎಂಬುದು ಸಾಧನದ ಮೂಲಕ ತಿಳಿದಿದೆ.
ಸಾಮಾಜಿಕ ಪ್ರಯೋಗದ ಕುರಿತು, ಓಗಿಲ್ವಿ ಸೌತ್‌ನ ಮುಖ್ಯ ಸೃಜನಾತ್ಮಕ ಅಧಿಕಾರಿ ಪುನೀತ್ ಕಪೂರ್ ಹೇಳಿದರು, “ನಮ್ಮ ಸಂತೋಷವನ್ನು ಪಡೆದುಕೊಳ್ಳಲು ಮೊಬಲ್‌, ಗ್ಯಾಜೆಟ್ಸ್‌, ಸಾಮಾಜಿಕ ಜಾಲತಾಣದತ್ತ ವಾಲಿದ್ದೇವೆ. ಈ ಎಲ್ಲವೂ ನಮಗೆ ತಾತ್ಕಾಲಿಕ ಸಂತೋಷ ನೀಡಬಹುದು. ಆದರೆ, ನಿಜವಾದ ಸಂತೋಷವೆಂದರೆ ಅಮ್ಮನೊಂದಿಗೆ ಸಮಯ ಕಳೆಯುವುದು, ಅವಳೊಂದಿಗೆ ಮಾತನಾಡುವುದು, ಖುಷಿ ಹಂಚಿಕೊಳ್ಳುವುದು ಅವಳನ್ನು ತಬ್ಬಿಕೊಳ್ಳುವುದು. ಈ ಖುಷಿಯ ಮುಂದೆ ಬೇರೆಲ್ಲವೂ ಗೌಣ.”