ತಿರುಮಲ ದೇವಾಲಯದಲ್ಲಿ ೨೯೭ನೇ ಕೈವಾರ ತಾತಯ್ಯ ಜಯಂತ್ಯೋತ್ಸವ: ಧರ್ಮಾಧಿಕಾರಿ ಟಿ.ಆರ್.ವೆಂಕಟೇಶ್
ತುಮಕೂರು: ಇಲ್ಲಿನ ಜಯನಗರದ ರಿಂಗ್ ರಸ್ತೆಯಲ್ಲಿರುವ ತಿರುಪತಿ ತಿರುಮಲ ದೇವಾಲಯದಲ್ಲಿ ಮಾ.೭ಕ್ಕೆ ಕೈವಾರ ತಾತಯ್ಯನವರ ೨೯೭ನೇ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಟಿ.ಆರ್.ವೆಂಕಟೇಶ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ೨ ವರ್ಷಗಳಿಂದ ಕೊರೊನಾ ಕಾರಣದಿಂದ ಕೈವಾರ ತಾತಯ್ಯನವರ ಜಯಂ ತ್ಯೋತ್ಸವ ಆಚರಿಸಲು ಸಾಧ್ಯ ವಾಗಿರಲಿಲ್ಲ. ಆದರೆ ಭವನ ನಿರ್ಮಾಣವಾದಾಗಿನಿಂದ ಪ್ರತಿ ಶನಿವಾರ ಸಂಜೆ ಭಜನೆ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.
ಭಗವಂತನ ಕೃಪೆಯಿಂದ ಈ ವರ್ಷ ಮಾ.೭ ರಂದು ಸಂಜೆ ೫ ರಿಂದ ೭ ಗಂಟೆಯವರೆಗೆ ಗುರುಗಳಾದ ಕೈವಾರ ತಾತಯ್ಯನವರ ಜಯಂತ್ಯೊತ್ಸವ ಹಮ್ಮಿಕೊಳ್ಳಲಾಗಿದೆ. ಕಾರ‍್ಯಕ್ರಮದಲ್ಲಿ ಪಾವಗಡದ ಶ್ರೀ ರಾಮಕೃಷ್ಣ ಸೇವಾ ಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಜಪಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆತ್ಮಬೋಧಾ ಮೃತದ ಬಗ್ಗೆ ಉಪನ್ಯಾಸ ನಡೆಸಿಕೊಡುವರು. ಅಧ್ಯಕ್ಷತೆಯನ್ನು ತಿರುಮಲ ತಿರುಪತಿ ದೇವಸ್ಥಾನದ ಧರ‍್ಮಾಧಿಕಾರಿ ಬಿ.ಆರ್.ವೆಂಕಟೇಶ್ ವಹಿಸಲಿದ್ದು, ಲೇಖಕ ಡಾ.ಕವಿತಾಕೃಷ್ಣ ಉಪಸ್ಥಿತರಿರುವರು.
*ಸಂಕಷ್ಟದ ದಿನಗಳಲ್ಲಿ ನಗರದಲ್ಲಿ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನ ನರ‍್ಮಾಣ ಮಾಡಲು ಕೈವಾರ ತಾತಯ್ಯ ಅವರು ಪ್ರೇರಣೆಯಾಗಿ ದ್ದಾರೆ. ಪ್ರತಿ ವರ್ಷ ಜಯಂತಿ ಆಚರಿಸಿ ಗೌರವಿಸಲಾಗುವುದು.
ಟಿ.ಆರ್.ವೆಂಕಟೇಶ್, ಧರ್ಮಾಧಿಕಾರಿ