ನೀರು ವಿತರಕ ಲೋಕೇಶ್ ರನ್ನು ಏಕಾಏಕಿ ತೆಗೆದು ಹಾಕಿದ್ದಕ್ಕೆ ಖಂಡನೆ, ಮನವಿ
ತುರುವೇಕೆರೆ:ತಾಲ್ಲೂಕಿನ ಅಡವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೇನಳ್ಳಿ ಗ್ರಾಮದ ನೀರು ವಿತರಕರಾದ ಲೋಕೇಶ್ ರವರನ್ನುಏಕಾಏಕಿ ತೆಗೆದು ಹಾಕಿ ಯಾವುದೇ ಹಾಜರಾತಿ ನೀಡದೆ ಸಂಬಳ ನೀಡದೆ ಇರುವುದನ್ನು ಖಂಡಿಸಿ ತಮ್ಮ ಗ್ರಾಮದ ಯುವಕರೊಂದಿಗೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಘಟಕರಾದ ಹೊನ್ನೇನಹಳ್ಳಿ ಕೃಷ್ಣಪ್ಪನವರ ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಯ ಸಂಘಟಕರಾದ ಹೊನ್ನೇನಹಳ್ಳಿ ಕೃಷ್ಣಪ್ಪನವರ ನೇತೃತ್ವದಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಹೊನ್ನೇನಲ್ಲಿ ಕೃಷ್ಣಪ್ಪನವರು ಮಾತನಾಡಿ ನಮ್ಮ ಗ್ರಾಮದಲ್ಲಿ ನೀರು ವಿತರಕರಾಗಿ ಕಾರ್ಯನಿರ್ವಹಿಸುತ್ತಿರುವ ಲೋಕೇಶ್ ರವರು ಸುಮಾರು10ವರ್ಷಗಳಿಂದ ಅಮ್ಮಸಂದ್ರ ಪಂಚಾ ಯತಿಯಲ್ಲಿ ತಮ್ಮ ತಂದೆಯ ಕೆಲಸವನ್ನು ನಿರ್ವಹಿಸುತ್ತಿದ್ದು ಪಂಚಾಯಿತಿಯ ವಿರುದ್ಧ ನಂತರ ಅಡವನಹಳ್ಳಿ ಪಂಚಾಯತಿಯಲ್ಲೂ ನೀರು ವಿತರಕನಾಗಿ ಕೆಲಸ ಮಾಡುತ್ತಿದ್ದು ಅನಾರೋಗ್ಯದ ಕಾರಣ ಕೆಲವು ದಿನಗಳು ಕೆಲಸಕ್ಕೆ ಗೈರಾಗಿದ್ದ ಕಾರಣದಿಂದಾಗಿ ಆಗಿ ಆಗಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ವಸಂತ್ ರವರು ಇವರನ್ನು ಕೆಲಸದಿಂದ ವಜಾ ಮಾಡಿರುತ್ತಾರೆ.
ಇದನ್ನು ಖಂಡಿಸುತ್ತೇವೆ ಈಗಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೂ ತಂದಿದ್ದು ಹಾಗೂ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಮನವಿ ನೀಡಿದ್ದು ಯಾವುದೇ ಪ್ರಯೋಜನವಾಗಿರುವುದಿಲ್ಲ ಆದರೂ ಈ ದಿನ ಮತ್ತೊಮ್ಮೆ ತಾಲೂಕು ಪಂಚಾಯಿತಿ ಕಚೇರಿಯ ಬಳಿ ಬಂದು ಮನವಿ ನೀಡುತ್ತಿದ್ದು ಈ ಮನವಿಯನ್ನು ಪುರಸ್ಕರಿಸುತ್ತಾರೆ ಎಂದು ನಂಬಿರುತ್ತೇವೆ ಈ ಬಡವನಿಗೆ ಮತ್ತೆ ಕೆಲಸ ನೀಡಿ ಹಾಜರಾತಿಯನ್ನು ನೀಡಿ ಸಂಬಳ ನೀಡುತ್ತಾರೆ ಎಂಬ ವಿಶ್ವಾಸವಿದೆ. ಮತ್ತೆ ಲೋಕೇಶ್ ರವರ ಕೆಲಸ ಮುಂದುವರಿಸದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಚೇರಿಯ ಎದುರು ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ನುಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಗಂಗಣ್ಣ,ಕುಮಾರ್,ನವೀನ್,ರಮೇಶ್,ನರಸಿಂಹಯ್ಯ,ಮೂಡಲಗಿರಿ,ಚಂದನ್ ಮುಂತಾದವರು ಭಾಗವಹಿಸಿದ್ದರು.