ತಾಳ್ಮೆ, ಸಹನೆ ಗುಣವಿದ್ದಾಗ ಮಾತ್ರ ಸಮಾಜ ಸಂಘಟಿಸಲು ಸಾಧ್ಯ
ತಿಪಟೂರು:ಸಂಘಟನೆಯಿ0ದ ಸಮಾಜವನ್ನು ಸಧೃಡಗೊಳಿಸುವಾಗ ಟೀಕೆ ಟಿಪ್ಪಣಿಗಳಿಗೆ ಉತ್ತರಿಸಿದೆ ತಾಳ್ಮೆ, ಸಹನೆ, ಸಹಿಸಿಕೊಳ್ಳುವ ಗುಣವಿದ್ದಾಗ ಮಾತ್ರ ಸಮಾಜವನ್ನು ಸಂಘಟಿಸಲು ಮಾತ್ರ ಸಾಧ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ ನಿರ್ಮಲಾನಂದ ಮಹಾಸ್ವಾಮಿಜಿ ತಿಳಿಸಿದರು.
ನಗರದ ಒಕ್ಕಲಿಗರ ಭವನದ ಆವರಣದಲ್ಲಿರುವ ಕುವೆಂಪು ಭವನ ಉದ್ಗಾಟನೆ ಹಾಗೂ ಗಣಪತಿ ದೇವಾಸ್ಥಾನದ ಲೋಕಾರ್ಪಣೆ ಹಾಗೂ ಬಿಜಿಎಸ್ ಕನ್ವೆನ್ಷಲ್ ಹಾಲ್‌ನ್ನು ಲೋಕರ್ಪಣೆ ಮಾಡಿ ದಿವ್ಯ ಸಾನಿಧ್ಯವನ್ನು ವಹಿಸಿ ಆರ್ಶಿವಚನ ನೀಡಿದರು.
ಸಮುದಾಯದ ಬೆಳವಣಿಗೆಯಲ್ಲಿ ಅನ್ಯ ಸಮುದಾಯಗಳಿಗೆ ತೊಂದರೆ ಅಗದಂತೆ ಸಂಘಟನೆಯನ್ನು ಮಾಡುತ್ತಾ ತ್ಯಾಗದ ಮನೋಭಾವದಿಂದ, ಹಲವಾರು ಚಿಂತನೆಗಳೊAದಿಗೆ ಮುನ್ನಡೆಯುವಾಗ ಪ್ರಶಂಸೆಗಳನ್ನು ನಿರೀಕ್ಷಿಸದೆ, ನೊಂದವರ ಪಾಲಿಗೆ ಆಶಾಕಿರಣವಾಗುತ್ತಾ ರಾಷ್ಟçನಿರ್ಮಾಣದ ಶಕ್ತಿಯಾಗಿ, ತ್ಯಾಗದ ಮನೋಭಾವವನ್ನು ಅಳವಡಿಸಿಕೊಳ್ಳತ್ತಾ, ಅಭಿವೃದ್ದಿಯತ್ತಾ ಮುನ್ನಡೆಯಾಗಬೇಕು. ನಾವುಗಳು ಭೌತಿಕವಾಗಿ ಸಧೃಡವಾಗುವುದರ ಜೊತೆಗೆ ಅದ್ಯಾತ್ಮಿಕ ಚಿಂತನೆಗಳನ್ನು ಬೆಳಸಿಕೊಳ್ಳಬೇಕು ಎಂದರು.
ಸಮಾಜ, ಸಂಘ, ಸಮುದಾಯವನ್ನು ಸಂಘಟಿಸುವಾಗ ಬನಾರಸ್ ವಿಶ್ವವಿದ್ಯಾಲಾಯ ನಿರ್ಮಿಸಿದ ಮದನ್ ಮೋಹನಾ ಮಾಳವೀಯರ ದೂರದೃಷ್ಟಿಯಂತೆ ಸತ್ತ ಶವದ ಮೇಲಿನ ಎಸೆಯುವ ನಾಣ್ಯಗಳ ಸಂಗ್ರಹಣೆಯ ಸ್ಪೂರ್ತಿದಾಯಕವಾಗುವಂತೆ, ನವಾಬನು ಎಸೆದ ಚಪ್ಪಲಿಯ ಅವಮಾನದ ಸಹನೆ ಹಾಗೂ ಛಲದಂತೆಯಿದ್ದರೆ ಮಾತ್ರ ಸಾಧ್ಯವಾಗುತ್ತದೆ. ಹಾಗೂ ಶಕ್ತಿಯಿದ್ದು ಸಹ ಸಹಿಸಿಕೊಳ್ಳುವ ಗುಣವನ್ನು ಮೈಗೊಡಿಸಿ ಕೊಂಡಾಗ ಮಾತ್ರ ಸಂಘಟನೆಗೆ ಮಾತ್ರ ಸಾಧ್ಯವಾಗುತ್ತದೆ. ವಿವೇಕನಂದರ ಆಶಯದಂತೆ ಸಂಘಟನೆಯಿAದ ಸಮುದಾಯ ಉದ್ದಾರ ಮಾತ್ರ ಸಾಧ್ಯ ಹಾಗೂ ಮಹಿಳೆಯ ಶಿಕ್ಷಣದಿಂದ ಮಾತೃಶಕ್ತಿ ಜಾಗೃತವಾದರೆ ದೇಶ ಕಟ್ಟಲು ಮಾತ್ರ ಸಾಧ್ಯತೆಯ ಮುನ್ನಣೆ ಸಿಗುತ್ತದೆ ಎಂದರು.
ಕರ‍್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್ ಸಮಾಜವು ಒಗ್ಗಟ್ಟಾದರೆ ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಅದರಂತೆ ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸಮಾಜದ ವಿದ್ಯಾರ್ಥೀ ನಿಲಯ ನಿರ್ಮಾಣಕ್ಕೆ ನನ್ನ ಸಹಕಾರ ಸದಾಯಿರುತ್ತದೆ ಎಂದು ತಿಳಿಸಿದರು.
ಸಮಾಜ ಸೇವಕ ಕೆ.ಟಿ ಶಾಂತ್‌ಕುಮಾರ್ ಮಾತನಾಡಿ ಹಿರಿಯ ಶ್ರೀಗಳ ಪರಿಸರ ಕಾಳಜಿಯ ಕೆಲಸವು ನಮಗೆ ಆದರ್ಶವಾಗಿದ್ದು, ಮಾನವನು ಜ್ಯಾತ್ಯಾತೀತ ಮನೋಬಾವವನ್ನು ಹೊಂದಿ ಉತ್ತಮ ನಡತೆಯಿಂದ ಸಮಾಜದಲ್ಲಿ ಬದುಕಬೇಕು ಎಂದರು.
ಕರ‍್ಯಕ್ರಮದ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾಲ್ಲೂಕು ಒಕ್ಕಲಿಗರ ಸಂಘದ ಅದ್ಯಕ್ಷ ಚಿದಾನಂದ್ ಬಡ ಮಕ್ಕಳ ಶಿಕ್ಷಣ ಒತ್ತು ನೀಡುವ ದೃಷ್ಟಯಿಂದ ನಮ್ಮ ದಾನಿಗಳ ಸಹಾಯದಿಂದ ೫೦ ಲಕ್ಷ ರೂಪಾಯಿಗಳನ್ನು ಸಂಗ್ರಹಣೆ ಮಾಡಲಾಗಿದೆ ಮುಂದೆ ೧ ಕೋಟಿಯ ಸಂಗ್ರಹದ ಅವಶ್ಯಕತೆಯಿದ್ದು ಇದರಿಂದ ಬಡಮಕ್ಕಳ ವಿದ್ಯಾಭ್ಯಾಸ ಹಾಗೂ ಪ್ರತಿಬಾಪುರಸ್ಕಾರಕ್ಕೆ ಅನುಕೂಲ ಮಾಡಲಾಗುವುದು ಎಂದರು.
ಕರ‍್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಶ್ರೀ ಪ್ರಸನ್ನನಾಥ ಮಹಾಸ್ವಾಮಿಜಿ, ಶ್ರೀ ಶಂಭುನಾಥ ಸ್ವಾಮೀಜ, ಧಸರೀಘಟ್ಟದ ಶ್ರೀ ಚಂದ್ರಶೇಖರ ಸ್ವಾಮಿಜಿ, ಕಬ್ಬಳಿಯಶ್ರೀ ಶಿವಪುತ್ರಸ್ವಾಮಿಜಿ ಮಾಜಿ ಶಾಸಕ ಬಿ ನಂಜಾಮರಿ, ನಗರಸಭೆಯ ಅದ್ಯಕ್ಷ ರಾಮ್‌ಮೋಹನ್, ಸಂಘದ ಸ್ವಾಗತ ಸಮಿತಿಯ ಅದ್ಯಕ್ಷ ಡಾ.ವಿವೇಚನ್, ಕಾರ್ಯದರ್ಶಿ ಲಕ್ಷಣಗೌಡ, ಪ್ರದಾನ ಕಾರ್ಯದರ್ಶಿ ಬಸವರಾಜು, ಶಂಕರಲಿAಗೇಗೌಡ, ಅನಂತಣ್ಣ, ಹನುಮಂತರಾಯಪ್ಪ, ಸಂಘದ ಪದಾದಿಕಾರಿಗಳು, ಮಹಿಳಾ ಸಂಘದವರು ಮತ್ತಿತ್ತರು ಭಾಗವಹಿಸಿದ್ದರು.
*
ಸಮಾಜದಲ್ಲಿ ಎಲ್ಲರಿಗೂ ಬದುಕುವ ವ್ಯವಸ್ತೆಯಿದ್ದು, ಕಿವುಡ, ಮೂಗರು, ಕುರುಡರು ಹಾಗೂ ಅನಾಥರು ಇದ್ದರೆ ಅವರಿಗಾಗಿ ಆದಿಚುಂಚನಗಿರಿ ಶ್ರೀಮಠದಲ್ಲಿ ಎಲ್ಲ ರೀತಿಯ ವ್ಯವಸ್ಥೆಯೊಂದಿಗೆ ಜೀವನ ಮಾಡಲು ಅವಕಾಶ ಮಾಡಲಾಗಿದ್ದು, ಹಿರಿಯರಿಗೂ ಆಶ್ರಮದ ತಾಣ ಮಾಡಲಾಗಿದೆ ಅದ್ದರಿಂದ ಅಂತಹವರು ಶ್ರೀಮಠವನ್ನು ಸಂಪರ್ಕಿಸಬಹುದು.ಶ್ರೀ ನಿರ್ಮಲಾನಂದ ಮಹಾಸ್ವಾಮಿಜಿ ಆದಿಚುಂಚನಗಿರಿ ಮಹಾಸಂಸ್ಥಾನ.