ನಾಲಿಗೆಯನ್ನೆ ಕತ್ತರಿಸಬೇಕಾಗುತ್ತದೆ ಎಂದ ವಿರುಪಾಕ್ಷಿಪ್ಪ
ರಾಯಚೂರು:ನಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟರೆ ನಾಲಿಗೆಯನ್ನೆ ಕತ್ತರಿಸಬೇ ಕಾಗುತ್ತದೆಎಂದು ಜಾ.ದಳದ ಜಿಲ್ಲಾಧ್ಯಕ್ಷ ಎಂ ವಿರುಪಾಕ್ಷಿಪ್ಪ ಅವರು ಖಡಕ್ಕಾಗಿ ಎಚ್ಚರಿಸದರು.
ಅವರು ನಗರದ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿ ನಿನ್ನೆ ಜಾಲಹಳ್ಳಿಯ ವಿಜಯ ಸಂಕಲ್ಪ ಯಾತ್ರೆ ಸಂದರ್ಭ ದಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಬಳಸಿದ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದ ಇಂದು ವಾಗ್ದಾಳಿ ನಡೆಸಿದರು.
ಸಾರ್ವಜನಿಕವಾಗಿ ಸಭೆಗಳಲ್ಲಿ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡಬೇಕು. ಇಲ್ಲದಿದ್ದರೆ ನಿಮ್ಮ ನಾಲಿಗೆ ಕತ್ತರಿಸಬೇಕಾಗುತ್ತದೆ. ನಮ್ಮ ನಾಯಕರ ಬಗ್ಗೆ ತೆವಲಿನಿಂದ ಮಾತನಾಡಿದರೆ, ನಿನ್ನ ಮಂಚದ ಆಟ ಹೊರ ಹಾಕಬೇಕಾಗುತ್ತದೆ. ಬೆಂಗಳೂರು ಮತ್ತು ರಾಯಚೂರಿನ ಅಪಾರ್ಟಮೆಂಟ್ ನಲ್ಲಿ ಯಾರು ಇರುತ್ತಾರೆ ಎಂದು ಎಲ್ಲ ಬಿಡಿಸಿ ಹೇಳಬೇಕಾಗುತ್ತದೆ. ಇದು ನಮಗೆ ಅಗತ್ಯ ವಿಲ್ಲ. ಆದರೆ ನಮ್ಮ ನಾಯಕರ ವಿಷಯಕ್ಕೆ ಬಂದರೆ ಅದಕ್ಕೆ ಪ್ರತ್ಯುತ್ತರವಾಗಿ ನಿನ್ನ ಮಂಚದ ಆಟ ಪ್ರಕರಣ ಮತ್ತು ನಿನ್ನ ಅಕ್ರಮ ಆಸ್ತಿಗಳ ಬಗ್ಗೆ ಹೊರಗಿಡಬೇಕಾಗು ತ್ತದೆ ಎಂದು ಹೇಳಿದರು.
ನಿನ್ನ ಐವತ್ತು ಅಕ್ರಮ ಆಸ್ತಿಯ ಬಗ್ಗೆ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ದಾಖಲೆಗಳನ್ನು  ಬಹಿರಂಗಪಡಿಸ ಲಾಗುತ್ತದೆ. ಈಗಾಗಲೇ ದೂರು ನೀಡಲು ಸಿದ್ಧತೆ ನಡೆದಿದೆ ನಾಲಿಗೆ ಸಡಿಲ ಬಿಟ್ಟು ಮಾತನಾಡಿದರೆ ನಿನ್ನ ಅಕ್ರಮ 50 ಆಸ್ತಿಗಳನ್ನು ಧ್ವಂಸ ಮಾಡಬೇಕಾಗು ತ್ತದೆ ಎಂದು ಎಚ್ಚರಿಸಿದರು.
ಮುಂದಿನ ಚುನಾವಣೆಯಲ್ಲಿ 1,50 ಲಕ್ಷ ಮತಗಳಿಂದ ಜಯಗಳಿಸುತ್ತೇನೆ, ಇಲ್ಲವಾದರೆ ಮತ್ತೆ ರಾಜೀನಾಮ ನೀಡುತ್ತೇನೆ ಎಂದು ಹೇಳಿದ ನೀನು ಸವಾ ಲನ್ನು ಜಿಲ್ಲಾ ಜಾದಳ ಪಕ್ಷ ಸ್ವೀಕರಿಸಿದೆ. ಮುಂದಿನ ಚುನಾವಣೆಯಲ್ಲಿ ದೇವದುರ್ಗ ಕ್ಷೇತ್ರದಲ್ಲಿ ನಿನ್ನನ್ನು ಸೋಲಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಹೇಳಿದವರು.
ಈ ಸಂದರ್ಭದಲ್ಲಿ ಯುಸೂಫ್ ಖಾನ್. ಎನ್. ಶಿವಶಂರ್ಕ, ಲಕ್ಷ್ಮೀಪತಿ ಗಾಣದಾಳ, ದಾನಪ್ಪಯಾದವ, ರಾಮಕೃಷ್ಣ ,ವಿಶ್ವನಾಥ್ ಪಟ್ಟಿ ಉಪಸ್ಥಿತರಿದ್ದರು.