ಇಟ್ಟಿಗೆ ಫ್ಯಾಕ್ಟರಿ ಸ್ಥಳಾಂತರಿಸುವಂತೆ ದಲಿತ ಸಂಘರ್ಷ ಸಮಿತಿ ವತಿಯಿಂದ ಆಗ್ರಹ
ಗುಬ್ಬಿ:ತಾಲೂಕಿನ ಜಿ ಹರಿವೇಸಂದ್ರ ಗ್ರಾಮದಲ್ಲಿ ಮಂಜುನಾಥ್ ಎಂಬುವರಿಗೆ ಸೇರಿದ ಇಟ್ಟಿಗೆ ಫ್ಯಾಕ್ಟರಿ ಯಿಂದಾಗಿ ಸ್ಥಳೀಯ ನಿವಾಸಿಗಳು ಕಾಯಿಲೆ ಯಿಂದ ಬಳಲುತ್ತಿದ್ದು ಅನೇಕ ಬಾರಿ ತಾಲೂಕು ಮಟ್ಟದ ಅಧಿಕಾರಿ ಗಳಿಗೆ ಮನವಿ ಮಾಡಿದರು.
ಫ್ಯಾಕ್ಟರಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳದೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಜನಸಾಮಾನ್ಯರು ಕಾಯಿಲೆ ಯಿಂದ ಬಳಲುವ ಸ್ಥಿತಿ ನಿರ್ಮಾಣ ವಾಗಿದೆ. ಕೂಡಲೇ ಕ್ರಮ ಕೈಗೊಳ್ಳದೆ ಹೋದಲ್ಲಿ ಸ್ಥಳೀಯ ಗ್ರಾಮಸ್ಥರ ಜೊತೆಗೂಡಿ ದಲಿತ ಸಂಘರ್ಷ ಸಮಿತಿ ಇಟ್ಟಿಗೆ ಫ್ಯಾಕ್ಟರಿ ಸ್ಥಳದಲ್ಲಿ ಜಿಲ್ಲಾಧಿಕಾರಿ ಗಳು ಭೇಟಿ ನೀಡಿ ಕ್ರಮ ಕೈಗೊಳ್ಳು ವವರೆಗೂ ಅನಿದಿಷ್ಟ ಧರಣಿ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಿಟ್ಟೂರ್ ರಂಗಸ್ವಾಮಿ ತಿಳಿಸಿದರು.