ಒಳ ಮೀಸಲಾತಿ ಜಾರಿಗೊಳಿಸಲು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ
ತಿಪಟೂರು:ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ಕಾಯಿದೆಯನ್ನು ಜಾರಿಗೆ ಮಾಡಿದ್ದು ಇದನ್ನು ನಾವುಗಳು ನಮ್ಮೆಲ್ಲರ ಸಹಕಾರ ಹಾಗೂ ಬದ್ದತೆಯಿಂದ ಕೇಂದ್ರ ಸರ್ಕಾರದಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವ ಎ ನಾರಯಣಸ್ವಾಮಿ ತಿಳಿಸಿದರು.
ನಗರದ ಹಾಸ್ಯಚಕ್ರವರ್ತಿ ನರಸಿಂಹರಾಜು ರಂಗಮAದಿರದಲ್ಲಿ ಆದಿಜಾಂಬವ ಮಹಾಸಬಾ ಸಮಾಜ ದಿಂದ ಆಯೋಜನೆ ಮಾಡಿದ್ದ ಸಂವಿಧಾನ ಉಳಿಸಿ ಜನಾಂದೋಲನ ಹಾಗೂ ಜನಜಾಗೃತಿ ಸಮಾ ವೇಶದ ಉದ್ಗಾಟನೆ ನೇರವೇರಿಸಿ ಮಾತನಾಡಿದರು.
ಸಮಾಜದ ೩೦ ವರ್ಷಗಳ ಹೋರಾಟ, ಜಾಗೃತಿ, ಚಿಂತನೆಗಳು, ಚಳುವಳಿಗಳ ಮೂಲಕ ಪರಿಶಿಷ್ಟ ಜಾತಿಯ ಒಳಮೀಸಲಾತಿಯನ್ನು ರಾಜ್ಯಸರ್ಕಾರ ಅನುಮೋದಿಸಿದ್ದು ಇದರಿಂದ ಎಲ್ಲಾ ವ್ಯಕ್ತಿಗಳು ಇದರ ಅನುಕೂಲದಿಂದ ಸ್ವಾಭಿಮಾನಿಗಳಾಗಿ, ವಿಧ್ಯಾವಂತರಾಗಿ, ಶಕ್ತರಾಗಿ ಸಮಾಜದಲ್ಲಿ ಬೆಳೆದಾಗ ಮಾತ್ರ ಇದಕ್ಕೆ ಸಾಮಾಜಿಕ ನ್ಯಾಯ ತಲುಪುತ್ತದೆ ಎಂದರು.
ಚಿ0ತಕರು ರಾಜ್ಯ ಸಭಾ ಸದಸ್ಯ ಎಲ್ ಹನುಮಂತಯ್ಯ ಮಾತನಾಡಿ ಮೊದಲ ಹೋರಾಟದ ಮೂಲಕ ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ನೀಡಿದ್ದು ಇನ್ನೂ ಕೇಂದ್ರ ಸರಕಾರದಲ್ಲಿ ಸಂವಿಧಾನದ ೩೪೧ನೇ ವಿಧಿಯು ತಿದ್ದುಪಡಿಯಾಗಿ ಬದಲಾವಣೆ ಹೊಂದಿದಾಗ ಮಾತ್ರ ಇದರ ಪ್ರಯೋಜನ ವಾಗುತ್ತದೆ. ಅದುದರಿಂದ ನಮ್ಮ ಸಮಾಜದವರು ಮತ್ತೊಮ್ಮೆ ಹೋರಾಟಗಳನ್ನು ಚಳುವಳಿಯನ್ನು ಮಾಡಬೇಕಾಗುತ್ತದೆ ಇಲ್ಲವಾದರೆ ಕನಸಿನಲ್ಲಿ ಸಿಹಿ ತಿನ್ನುವ ರೀತಿಯಲ್ಲಿ ಆಗುತ್ತದೆ. ತಿದ್ದುಪಡಿಯು ಅಗದೇ ಇದ್ದರೇ ಎಲ್ಲಾ ಅವಕಾಶಗಳಿಂದ ವಂಚಿತರಾಗುತ್ತೇವೆ ಎಂದರು.
ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಜಿ ಆದಿ ಜಾಂಬವ ಸಮಾಜದವರು ಸಂಘಟಿತರಾಗಿ, ಸರ್ಕಾರದ ಮೀಸಲಾತಿ ಹಾಗೂ ಸವಲತ್ತುಗಳನ್ನು ಬಳಸಿಕೊಂಡು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಾಗ ಸಮಾಜವು ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ. ನಮ್ಮ ಸಮಾಜಕ್ಕೆ ಸಾಮಾಜಿಕವಾಗಿ, ಶೈಕ್ಷಣೀಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ ಸಬಲತೆಯನ್ನು ಪಡೆದಾಗ ಸಮಾಜದ ಒಳ ಮೀಸಲಾತಿಯು ಸಾರ್ಥಕವಾಗುತ್ತದೆ ಎಂದರು.
ಶಿಕ್ಷಣ ಸಚಿವ ಬಿಸಿ ನಾಗೇಶ್ ಮಾತನಾಡಿ ಸಮಾಜವು ಸಂಘಟಿತರಾಗಿ ಜಾಗೃತಿಗೊಂಡಾಗ ಮಾತ್ರ ಸಮುದಾಯದ ಏಳಿಗೆ ಸಾಧ್ಯ ಎಂದರು.
ಕರ‍್ಯಕ್ರಮದ ಅದ್ಯಕ್ಷತೆಯನ್ನು ಸಮಾಜದ ಗೌರವಧ್ಯಕ್ಷ ಕೆ ರಾಮಯ್ಯ ವಹಿಸಿದ್ದು,ಕರ‍್ಯಕ್ರಮದಲ್ಲಿ ವೈಧ್ಯ ಶ್ರೀಧರ್, ಮಾಜಿ ಜಿ ಪಂ ಸದಸ್ಯ ಹುಚ್ಚಯ್ಯ, ಅಶ್ವಥ್ ನಾರಯಣ್, ಲಕ್ಷಿö್ಮಕಾಂತ್, ನರಸಿಂಹಮೂರ್ತಿ, ಕೃಷಿಕ ಸಮಾಜದ ಸದಾಶಿವಯ್ಯ, ಕೆಂಚಮಾರಯ್ಯ, ಮಾಜಿ ಶಾಸಕ ಗಂಗರಾಮಯ್ಯ, ಸುಧಾ ರಂಗಸ್ವಾಮಿ, ಸಮಾಜ ಭಾಂಧವರಾದ ನರಸಿಂಹಯ್ಯ, ಹರೀಶ್‌ಗೌಡಮತ್ತಿಹಳ್ಳಿ, ತಿಪಟೂರು ಕೃಷ್ಣ, ಕೆಂಚಮಾರಯ್ಯ, ರಂಗಸ್ವಾಮಿ, ಕಾಂತರಾಜು, ಮತ್ತಿತ್ತರು ಹಾಜರಿದ್ದರು.