ದುರ್ಗಂಧ ರಹಿತ ರಕ್ಷಣೆಗಾಗಿ ವೈಜ್ಞಾನಿಕವಾಗಿ ಸಾಬೀತಾಗಿರುವ ಮಾರ್ಟೀನ್ ಸ್ಮಾರ್ಟ್‌+ ಅನ್ನು ಬಿಡುಗಡೆ ಮಾಡಿದ ಮಾರ್ಟೀನ್
ಮಾರ್ಟೀನ್ ಸ್ಮಾರ್ಟ್‌+ ಭಾರತದ ಮೊಟ್ಟ ಮೊದಲ ಮತ್ತು ಅತ್ಯಂತ ಶಕ್ತಿಯುತ ಲಿಕ್ವಿಡ್ ವೇಪರೈಸರ್ ಫಾರ್ಮುಲಾ** ಅನ್ನು ಹೊಂದಿದೆ ಮತ್ತು ಯಾವುದೇ ರಾಸಾಯನಿಕದ ವಾಸನೆ ಇಲ್ಲದೇ ನಿರಂತರ ರಕ್ಷಣೆಯನ್ನು ಒದಗಿಸುತ್ತದೆ!
ಭಾರತದ ಅತ್ಯಂತ ಜನಪ್ರಿಯ ಕೌಟುಂಬಿಕ ಕೀಟನಾಶಕ ಬ್ರ್ಯಾಂಡ್ ಆಗಿರುವ ಮಾರ್ಟೀನ್‌ ತನ್ನ ಹೊಸ ವೈಜ್ಞಾನಿಕವಾಗಿ ಸುಧಾರಿತ ಲಿಕ್ವಿಡ್ ವೇಪರೈಸರ್ ಮಾರ್ಟೀನ್ ಸ್ಮಾರ್ಟ್‌+ ಅನ್ನು ಘೋಷಿಸಿದೆ. ಇದನ್ನು ವಿಆರ್‌ ಮಾಲ್ ಚೆನ್ನೈನಲ್ಲಿನ ಪಿವಿಆರ್ ಸಿನೆಮಾದಲ್ಲಿ ಗ್ರಾಹಕರ ಜೊತೆಗೆ ಮಧ್ಯ ಪ್ರವೇಶದ ಮೂಲಕ ಮಾರ್ಟೀನ್ ಸ್ಮಾರ್ಟ್‌+ ಅನ್ನು ಬಿಡುಗಡೆ ಮಾಡಲಾಗಿದೆ. ಭಾರತದ ಅತಿವೇಗದ ಮತ್ತು ಅತ್ಯಂತ ಶಕ್ತಿಶಾಲಿ ಫಾರ್ಮುಲಾದಿಂದ** ಮಾಡಿದ ಮಾರ್ಟೀನ್ ಸ್ಮಾರ್ಟ್‌+ ಲಿಕ್ವಿಡ್ ವೇಪರೈಸರ್, ಯಾವುದೇ ರಾಸಾಯನಿಕ ದುರ್ಗಂಧ ಇಲ್ಲದೇ ಸೊಳ್ಳೆಗಳಿಂದ ಅತ್ಯುತ್ತಮ ರಕ್ಷಣೆಯನ್ನು ಒದಗಿಸುತ್ತದೆ!
ಸೊಳ್ಳೆಗಳಿಂದ ಹರಡುವ ರೋಗಗಳ ಪ್ರಮಾಣ ಹೆಚ್ಚಳವಾಗುತ್ತಿದ್ದು, ಡೆಂಘೀ ಮತ್ತು ಮಲೇರಿಯಾದಂತಹ ರೋಗಗಳು ಪ್ರತಿ ವರ್ಷವೂ ಹೆಚ್ಚುತ್ತಿದೆ. ಇದರಿಂದಾಗಿ ಉತ್ತಮ ಸೊಳ್ಳೆ ನಿವಾರಕಗಳ ಅಗತ್ಯವೂ ನಮಗೆ ಹೆಚ್ಚಾಗಿದೆ. ಮಾರ್ಟೀನ್‌ ಎಂದಿಗೂ ತಾಂತ್ರಿಕವಾಗಿ ಸುಧಾರಿತ ಮತ್ತು ಪರಿಣಾಮಕಾರಿ ರಕ್ಷಣೆಯನ್ನು ಗ್ರಾಹಕರಿಗೆ ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ಹೊಸದಾಗಿ ಪರಿಚಯಿಸಿದ ಮಾರ್ಟೀನ್ ಸ್ಮಾರ್ಟ್‌+ ಅನ್ನು ಗುರುಗ್ರಾಮದಲ್ಲಿರುವ ಮಾರ್ಟೀನ್ ಸುಧಾರಿತ ಸಂಶೋಧನೆ ಲ್ಯಾಬ್‌ನಲ್ಲಿ ತಪಾಸಣೆ ಮಾಡಲಾಗಿದೆ. ಇದು ಅತ್ಯುತ್ತಮ ಸೊಲ್ಯುಶನ್ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದು 2 ಪಟ್ಟು ಹೆಚ್ಚು ಶಕ್ತಿಯುತವಾಗಿದೆ** ಮತ್ತು ಯಾವುದೇ ರಾಸಾಯನಿಕ ದುರ್ಗಂಧ ಇಲ್ಲದೇ ಸೊಳ್ಳೆಗಳಿಂದ ರಕ್ಷಣೆಯನ್ನು ಒದಗಿಸುತ್ತದೆ.
ಬಿಡುಗಡೆ ಬಗ್ಗೆ ಮಾತನಾಡಿದ ರೆಕಿಟ್ ದಕ್ಷಿಣ ಏಷ್ಯಾದ ನೈರ್ಮಲ್ಯ ವಿಭಾಗದ ಪ್ರಾದೇಶಿಕ ಮಾರ್ಕೆಟಿಂಗ್‌ ನಿರ್ದೇಶಕ ಸೌರಭ್‌ ಜೈನ್ “ಅನ್ವೇಷಣೆಯು ಮಾರ್ಟೀನ್‌ನ ಡಿಎನ್‌ಎಯ ಭಾಗವಾಗಿದೆ ಮತ್ತು ಸೊಳ್ಳೆಗಳಿಂದ ಹರಡುವ ರೋಗಗಳಿಂದ ಇಡೀ ಕುಟುಂಬಕ್ಕೆ ರಕ್ಷಣೆಯನ್ನು ನೀಡಲು ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸುತ್ತೇವೆ. ಹೊಸದಾಗಿ ಬಿಡುಗಡೆ ಮಾಡಿದ, ವೈಜ್ಞಾನಿಕವಾಗಿ ಸುಧಾರಿತ ಮಾರ್ಟೀನ್ ಸ್ಮಾರ್ಟ್‌+ ಸುಧಾರಿತ ಸೊಳ್ಳೆ ನಿವಾರಕ ಸೌಲಭ್ಯವನ್ನು ಹೊಂದಿದ್ದು, ರಕ್ಷಣೆಯ ಮಾನದಂಡವನ್ನು ಎತ್ತರಿಸಿದೆ. ಇದು ಭಾರತದ ಅತ್ಯಂತ ವೇಗದ ಫಾರ್ಮುಲಾ** ಆಗಿದ್ದು, ಯಾವುದೇ ರಾಸಾಯನಿಕ ದುರ್ಗಂಧ ಇಲ್ಲದೇ ಸೊಳ್ಳೆಗಳಿಂದ ನಮ್ಮ ಕುಟುಂಬಗಳನ್ನು ರಕ್ಷಿಸುತ್ತದೆ. ಸುಧಾರಿತ ವೈಜ್ಞಾನಿಕ ತಂತ್ರಜ್ಞಾನದ ಬೆಂಬಲವನ್ನು ಹೊಂದಿರುವ ಗ್ರಾಹಕರ ರಕ್ಷಣೆಯನ್ನು ಒದಗಿಸಲು ನಾವು ಎಂದಿಗೂ ಬದ್ಧವಾಗಿದ್ದೇವೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಇದು 2030 ರ ವೇಳೆ ಭಾರತವನ್ನು ಮಲೇರಿಯಾ ಮುಕ್ತವನ್ನಾಗಿಸುವ ಗುರಿಯ ಕಡೆಗೆ ನಾವು ಇನ್ನೊಂದು ಹೆಜ್ಜೆ ಇಟ್ಟಂತಾಗಿದೆ.”
ಹೊಸ ಕೊಡುಗೆಯ ಹೆಚ್ಚಿನ ದಕ್ಷತೆಯನ್ನು ಪ್ರದರ್ಶಿಸುವುದಕ್ಕಾಗಿ, ಪಿವಿಆರ್ ಥಿಯೇಟರ್‌ನಲ್ಲಿ ಆಡಿಯೋ ಎಫೆಕ್ಟ್‌ ಜೊತೆಗೆ ಸ್ಕ್ರೀನ್‌ ಮೇಲೆ ಸೊಳ್ಳೆ ದಾಳಿಯನ್ನು ಅನುಕರಿಸುವ ಒಂದು ಪ್ರಯೋಗವನ್ನು ಮಾರ್ಟೀನ್ ಮಾಡಿತ್ತು. ನಂತರ ಹೊಸ ಮಾರ್ಟೀನ್ ಸ್ಮಾರ್ಟ್‌+ ಬಳಸಿ ಥಿಯೇಟರ್ ಅನ್ನು ರಕ್ಷಿಸಲಾಗಿದೆ ಎಂದು ಸ್ಕ್ರೀನ್‌ ಮೇಲೆ ಅನಾವರಣಗೊಳಿಸಲಾಯಿತು. ಅತಿ ಹೆಚ್ಚಿನ ದಕ್ಷತೆಯೊಂದಿಗೆ ಮತ್ತು ಯಾವುದೇ ರಾಸಾಯನಿಕ ದುರ್ಗಂಧ ಇಲ್ಲದೇ ಕುಟುಂಬಗಳನ್ನು ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿರುವ ಮಾರ್ಟೀನ್ ಸ್ಮಾರ್ಟ್‌+** ನಲ್ಲಿ ಬಳಸಿದ ಅತ್ಯುತ್ತಮ ಫಾರ್ಮುಲಾವನ್ನು ತಿಳಿಸುವುದಕ್ಕೆ ಇದು ವಿಶಿಷ್ಟ ಗ್ರಾಹಕರ ತೊಡಗಿಸಿಕೊಳ್ಳುವಿಕೆ ಉಪಕ್ರಮವಾಗಿತ್ತು.
ಈ ಋತುವಿನಲ್ಲಿ ಕೀಟಗಳಿಂದ ಹರಡುವ ರೋಗಗಳನ್ನು ತಡೆಯಲು, ಇಡೀ ಕುಟುಂಬದ ರಕ್ಷಣೆಗೆ ದಕ್ಷವಾದ ಸೊಳ್ಳೆ ನಿವಾರಕವನ್ನು ಬಳಸುವುದರ ಅಗತ್ಯದ ಕುರಿತು ಜಾಗೃತಿ ಮೂಡಿಸುವಲ್ಲಿ ಮಾರ್ಟೀನ್ ಗಮನ ಹರಿಸಿದೆ. ಹೊಸ ಮಾರ್ಟೀನ್ ಸ್ಮಾರ್ಟ್‌+ ಸ್ಟೋರ್‌ಗಳಲ್ಲಿ ಸಿಂಗಲ್‌ ರೀಫಿಲ್‌ ವಿಧದಲ್ಲಿ ಲಭ್ಯವಿದೆ. ಸಿಂಗಲ್ ರೀಫಿಲ್‌ಗೆ ಬೆಲೆಯು ರೂ. 85/- ಆಗಿದೆ.
* ಪ್ರಮಾಣಿತ ಲ್ಯಾಬ್‌ ಪರೀಕ್ಷೆ ಸ್ಥಿತಿಗಳಲ್ಲಿ 60 ನಿಮಿಷಗಳವರೆಗೆ ಹೈ ಮೋಡ್‌ನಲ್ಲಿ ಉತ್ಪನ್ನವನ್ನು ಬಳಸಿದ ನಂತರ ಏಡೆಸ್‌ ಈಜಿಪ್ಟಿ ಮತ್ತು ಅನಾಫಿಲಿಸ್ ಸ್ಟೆಫೆನ್ಸಿ ಸೊಳ್ಳೆಗಳ ಮೇಲೆ ಹೆಚ್ಚುವರಿ 2 ಗಂಟೆಗಳ ರಕ್ಷಣೆ ಲಭ್ಯವಿದೆ.** ಕ್ಯುಲೆಕ್ಸ್‌ ಕ್ವಿಂಖೆಫಾಸಿಯಾಟಸ್‌ ಸೊಳ್ಳೆಗಳ ಮೇಲೆ ಮಾರ್ಟೀನ್‌ ಸಾಧನದಲ್ಲಿ ಪ್ರಮುಖ ಪ್ರತಿಸ್ಫರ್ಧಿ ರಿಫಿಲ್‌ಗಳ ಮೇಲೆ ಪರೀಕ್ಷೆ ಮಾಡಿದಂತೆ.! ಮಾರ್ಟೀನ್ ಸ್ಮಾರ್ಟ್‌+ ಲಿಕ್ವಿಡ್ ವೇಪರೈಸರ್‌ ರಿಫಿಲ್‌ನ ದುರ್ಗಂಧ ರಹಿತ ಶ್ರೇಣಿಯನ್ನು ಉಲ್ಲೇಖಿಸುತ್ತದೆ.