ಗುತ್ತಿಗೆದಾರರಿಂದ ಕಮಿಷನ್- ಕುಟುಕು ಕಾರ್ಯಾಚರಣೆ: ಲೋಕಾಯುಕ್ತಕ್ಕೆ ದೂರು
ತುಮಕೂರು:ಖಾಸಗಿ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಮಧುಗಿರಿ ಕ್ಷೇತ್ರದ ಶಾಸಕ ರಾದ ಎಂ.ವಿ.ವೀರಭದ್ರಯ್ಯ ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಶಾಸಕರ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಮಧುಗಿರಿ ಕ್ಷೇತ್ರದ ಮತದಾರರಾದ ವೀರಣ್ಣ ಬಿನ್ ಈರಮರಿಯಣ್ಣ ಸಿದ್ದಾಪುರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಸೋಮವಾರ ಲೋಕಾಯುಕ್ತ ಕಚೇರಿಗೆ ಮಧುಗಿರಿ ತಾಲೂಕಿನ ಹಲವು ಮತದಾರರೊಂದಿಗೆ ಲೋಕಾಯುಕ್ತ ಕಚೇರಿಗೆ ತೆರಳಿ ಮನವಿ ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಮನವಿ ಸಲ್ಲಿಸಿ, ಕಾಮಗಾರಿಯೊಂದನ್ನು ಕ್ಷೇತ್ರದಲ್ಲಿ ನಡೆಸಿಕೊಂಡು ಹೋಗಲು ಅನುಕೂಲ ಮಾಡಿಕೊಡಲು ಐದು ಲಕ್ಷ ರೂ. ಕಮಿಷನ್ ಬೇಡಿಕೆ ಇಟ್ಟಿದ್ದು, ಇದರಲ್ಲಿ ಒಂದು ಲಕ್ಷ ರೂ. ಸಂಬAಧಿಸಿದ ವ್ಯಕ್ತಿಯಿಂದ ಪಡೆಯುವ ಕುಟುಕು ಕಾರ್ಯಾಚರಣೆಯಲ್ಲಿ ಕ್ಷೇತ್ರದ ಶಾಸಕರು ಸಿಕ್ಕಿಬಿದ್ದಿರುವುದು ಸಾಮಾಜಿಕ ಜಾಲತಾಣ ಹಾಗೂ ಖಾಸಗಿ ವಾಹಿನಿಯಲ್ಲಿ ಹರಿದಾಡುತ್ತಿರುವ ದೃಶ್ಯಗಳೆ ಸಾಕ್ಷಿಯಾಗಿವೆ. ಹಾಗಾಗಿ ಶಾಸಕರ ವಿರುದ್ದ ಸ್ವಯಂ ಪ್ರೇರಿತ ದೂರನ್ನು ಲೋಕಾಯುಕ್ತದವರು ದಾಖಲಿಸಿ, ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮಧುಗಿರಿಯ ಇತಿಹಾಸದಲ್ಲಿಯೇ ಇಂತಹ ಘಟನೆ ನಡೆದಿಲ್ಲ. ಇದು ಕ್ಷೇತ್ರದ ಮತದಾರರಿಗೆ ಎಸಗಿದ ದ್ರೋಹವಾಗಿದೆ. ಕೂಡಲೇ ಶಾಸಕ ಎಂ.ವಿ. ವೀರಭದ್ರಯ್ಯ ಮಧುಗಿರಿ ಕ್ಷೇತ್ರದ ಮತದಾರರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು. ರಾಮಾಂಜನಪ್ಪ, ರಾಜಗೋಪಾಲ್, ಜೆ.ಪಿ.ಮಂಜುನಾಥ್, ಹೇಮಂತ್, ಲೋಕೇಶ್, ಬಾಬಾ ಪಕೃದ್ದೀನ್, ಗಂಗಾಧರ್, ನವರತ್ನಕುಮಾರ್, ಶಿವಣ್ಣ ಐಡಿಹಳ್ಳಿ, ಪುರುಷೋತ್ತಮ್, ನಾರಾಯಣಗೌಡ, ಲಕ್ಷಿö್ಮ ನಾರಾಯಣ್, ಟಿ.ಪಿ.ಮಂಜುನಾಥ್ ಮತ್ತಿತರರಿದ್ದರು.