ಅಮೆಜಾ಼ನ್ ಇಂಡಿಯಾದಿಂದ ಡೆಲಿವರಿ ಅಸೊಸಿಯೇಟ್‌ಗಳ ಮಕ್ಕಳ ಶಿಕ್ಷಣಕ್ಕೆ ಪ್ರತಿನಿಧಿ ಸ್ಕಾಲರ್‌ಶಿಪ್ ಫಲಾನುಭವಿಗಳಿಗೆ ಸನ್ಮಾನ
ಬೆಂಗಳೂರು:ಅಮೆಜಾ಼ನ್ ಇಂಡಿಯಾ ತನ್ನ ಪ್ರತಿಧಿ ಸ್ಕಾಲರ್‌ಶಿಪ್ ಪ್ರೋಗ್ರಾಮ್‌ನ ಫಲಾನುಭವಿಗಳಿಗೆ ಸನ್ಮಾನಿಸಿದ್ದು ಇದು ತನ್ನ ಡೆಲಿವರಿ ಅಸೋಸಿಯೇಟ್‌ಗಳ ಮಕ್ಕಳ ಶೈಕ್ಷಣಿಕ ಅಗತ್ಯಗಳಿಗೆ ಬೆಂಬಲ ನೀಡಲು ವಿನ್ಯಾಸಗೊಳಿಸಲಾಗಿದೆ.
೨೦೨೨ರಲ್ಲಿ ಪ್ರಾರಂಭವಾದ ಈ ಸ್ಕಾಲರ್‌ಶಿಪ್ ಭಾರತದಲ್ಲಿ ಡೆಲಿವರಿ ಸರ್ವೀಸ್ ಪಾರ್ಟ್ನರ್ ಮತ್ತು ಅಮೆಜಾ಼ನ್ ಫ್ಲೆಕ್ಸ್ ಪ್ರೋಗ್ರಾಮ್‌ಗಳ ಅಡಿಯಲ್ಲಿ ಎಲ್ಲ ಡೆಲಿವರಿ ಅಸೋಸಿಯೇಟ್‌ಗಳಿಗೂ ಈ ಸ್ಕಾಲರ್‌ಶಿಪ್ ಮುಕ್ತವಾಗಿರುತ್ತದೆ. ಇಂದು ಕರ್ನಾಟಕ ಸರ್ಕಾರದ ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ನಿರ್ದೇಶಕಿ ಶ್ರೀಮತಿ ಕೆ.ಎಸ್. ಲತಾಕುಮಾರಿ, ಐಎಎಸ್ ಮತ್ತು ಅಮೆಜಾ಼ನ್ ಇಂಡಿಯಾದ ಆಪರೇಷನ್ಸ್ನ ಎಚ್‌ಆರ್ ನಿರ್ದೇಶಕ ಲಿಜು ಥಾಮಸ್ ಬೆಂಗಳೂರಿ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳನ್ನು ಪುರಸ್ಕರಿಸಿದರು.
೨ರಿಂದ ೧೨ನೇ ತರಗತಿಗಳಲ್ಲಿ ಕಲಿಯುತ್ತಿರುವ ಡೆಲಿವರಿ ಅಸೋಸಿಯೇಟ್‌ಗಳ ನೂರಾರು ಮಕ್ಕಳು ಅವರ ಶಾಲಾ ಶುಲ್ಕ; ಹೆಚ್ಚುವರಿ ಕೋಚಿಂಗ್ ತರಗತಿಗಳು, ಪುಸ್ತಕಗಳ ಹಾಗೂ ಇತರೆ ಶೈಕ್ಷಣಿಕ ವಸ್ತುವಿನ ಖರೀದಿ ಮತ್ತು ಗ್ರಂಥಾಲಯ ಸದಸ್ಯತ್ವ, ಬಸ್ ಅಥವಾ ಟ್ರೆöÊನ್ ಪಾಸ್‌ಗಳು ಇತ್ಯಾದಿ ಶೈಕ್ಷಣಿಕ ಸಂಬಂಧಿತ ವೆಚ್ಚಗಳಿಗೆ ಬಳಸಿಕೊಳ್ಳಬಹುದು. ಈ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಮಗುವೂ ಶೈಕ್ಷಣಿಕ ವರ್ಷಕ್ಕೆ ಸ್ಕಾಲರ್‌ಶಿಪ್ ಪಡೆಯುತ್ತಾರೆ ಮತ್ತು ಅವರ ಸಾಧನೆ ಆಧರಿಸಿ ವಾರ್ಷಿಕವಾಗಿ ಈ ಸ್ಕಾಲರ್‌ಶಿಪ್ ನವೀಕರಣಗೊಳ್ಳುತ್ತದೆ. ಈ ಸ್ಕಾಲರ್‌ಶಿಪ್ ಪಡೆಯಲು ಡೆಲಿವರಿ ಅಸೋಸಿಯೇಟ್‌ಗಳು ಅವರ ನಾಮ ನಿರ್ದೇಶನಗಳನ್ನು ಕಳುಹಿಸುತ್ತಾರೆ, ಅವುಗಳನ್ನು ಎಫ್‌ಇಇ(ಈouಟಿಜಚಿಣioಟಿ ಜಿoಡಿ ಇxಛಿeಟಟeಟಿಛಿ) ಸ್ವತಂತ್ರವಾಗಿ ಪೂರ್ವ ನಿಗದಿತ ಮಾನದಂಡದ ಅನ್ವಯ ಆಯ್ಕೆ ಮಾಡುತ್ತಾರೆ, ಅದು ಮಗುವಿನ ಶೈಕ್ಷಣಿಕ ಸಾಧನೆ ಮತ್ತು ಪೋಷಕರ ಆರ್ಥಿಕ ಪರಿಸ್ಥಿತಿಗೆ ಸೀಮಿತವಾಗಿರುವುದಿಲ್ಲ.
ಪ್ರತಿಧಿ ಸ್ಕಾಲರ್‌ಶಿಪ್ ತನ್ನ ಡೆಲಿವರಿ ಅಸೋಸಿಯೇಟ್‌ಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅವಕಾಶ ದೊರೆಯುವಂತೆ ಮಾಡಲು ಅಮೆಜಾ಼ನ್ ಇಂಡಿಯಾದ ಬದ್ಧತೆಯ ಭಾಗವಾಗಿದೆ.
ಈ ಉಪಕ್ರಮ ಕುರಿತು ಅಮೆಜಾ಼ನ್ ಇಂಡಿಯಾದ ಆಪರೇಷನ್ಸ್ನ ಎಚ್‌ಆರ್ ನಿರ್ದೇಶಕ ಶ್ರೀ ಲಿಜು ಥಾಮಸ್, “ನಾವು ಸತತವಾಗಿ ನಮ್ಮ ಗ್ರಾಹಕರಿಗೆ ಮಹತ್ತರ ಶಾಪಿಂಗ್ ಅನುಭವ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಡೆಲಿವರಿ ಅಸೋಸಿಯೇಟ್‌ಗಳಿಗೆ ಬೆಂಬಲಿಸಲು ಮಾರ್ಗಗಳನ್ನು ಹುಡುಕುತ್ತಿರುತ್ತೇವೆ. ನಮ್ಮ ಪ್ರತಿಧಿ ಸ್ಕಾಲರ್‌ಶಿಪ್ ಕಾರ್ಯಕ್ರಮದ ಮೂಲಕ ನಾವು ನಮ್ಮ ಡೆಲಿವರಿ ಅಸೋಸಿಯೇಟ್‌ಗಳ ಮಕ್ಕಳಿಗೆ ಅವರ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಮತ್ತು ಸ್ಪಷ್ಟವಾದ ದೃಷ್ಟಿಕೋನದಿಂದ ಅವರ ಮಹತ್ವಾಕಾಂಕ್ಷೆಯನ್ನು ಅನುಸರಿಸಲು ನೆರವಾಗುವ ಗುರಿ ಹೊಂದಿದ್ದೇವೆ. ನಮ್ಮ ಡೆಲಿವರಿ ಅಸೋಸಿಯೇಟ್‌ಗಳ ಕುಟುಂಬಗಳಿಗೆ ಸದೃಢ ಮತ್ತು ಉಜ್ವಲ ಭವಿಷ್ಯ ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ” ಎಂದರು.ಅಮೆಜಾ಼ನ್‌ನ ಡೆಲಿವರಿ ಸರ್ವೀಸ್ ಪಾರ್ಟ್ನರ್‌ನ ಡೆಲಿವರಿ ಅಸೋಸಿಯೇಟ್ ಆಗಿರುವ ಅನಿತಾ ಮುನಿವೇಲು, “ಅಮೆಜಾ಼ನ್ ನನ್ನ ಮಗುವಿಗೆ ಆತನ ಶಿಕ್ಷಣ ಮುಂದುವರಿಸಲು ಈ ಸ್ಕಾಲರ್‌ಶಿಪ್ ನೀಡುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ಈ ಸ್ಕಾಲರ್‌ಶಿಪ್ ನನ್ನ ಮಗುವಿನ ಶಿಕ್ಷಣಕ್ಕೆ ನೆರವಾಗುವುದೇ ಅಲ್ಲದೆ ಚೆನ್ನಾಗಿ ಅಧ್ಯಯನ ನಡೆಸಲು ಮತ್ತು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತದೆ” ಎಂದರು.
“ಯಶಸ್ಸು ಮತ್ತು ವ್ಯಾಪ್ತಿ ವಿಸ್ತಾರ ಜವಾಬ್ದಾರಿ ತರುತ್ತದೆ” ಎಂಬ ನಾಯಕತ್ವ ಸಿದ್ಧಾಂತಕ್ಕೆ ಪೂರಕವಾಗಿ ಅಮೆಜಾ಼ನ್ ತನ್ನ ಜವಾಬ್ದಾರಿಯನ್ನು ಸಮುದಾಯದಲ್ಲಿ ಅಸೋಸಿಯೇಟ್‌ಗಳ ಪ್ರಗತಿಗೆ ಸಕಾರಾತ್ಮಕವಾಗಿ ಪರಿಣಾಮ ಬೀರುವಲ್ಲಿ ಗುರುತಿಸಿದೆ. ೨೦೧೪ರಲ್ಲಿ ಅಮೆಜಾ಼ನ್ ಮುಂಬೈ ಮತ್ತು ದೆಹಲಿ ಎನ್‌ಸಿಆರ್‌ನ ತನ್ನ ಫುಲ್‌ಫಿಲ್‌ಮೆಂಟ್ ಸೆಂಟರ್‌ಗಳಲ್ಲಿ ಕಮ್ಯುನಿಟಿ ಎಂಗೇಜ್‌ಮೆAಟ್ ಪ್ರೋಗ್ರಾಮ್ ಪ್ರಾರಂಭಿಸಿತು. ಅಂದಿನಿAದ ಈ ಕಾರ್ಯಕ್ರಮವು ಅಮೆಜಾ಼ನ್‌ನ ಫುಲ್‌ಫಿಲ್‌ಮೆಂಟ್ ಮತ್ತು ಸಾರ್ಟೇಷನ್ ಸೆಂಟರ್‌ಗಳು, ಡೆಲಿವರಿ ಸ್ಟೇಷನ್‌ಗಳು ಮತ್ತು ಯುಎಫ್‌ಎಫ್‌ಗಳ ೩೦೦ ತಾಣಗಳಲ್ಲಿ ಕ್ರಮೇಣ ವಿಸ್ತರಿಸಿದೆ. ತನ್ನ ಗುಡ್ ನೈಬರ್ ಪ್ರೋಗ್ರಾಮ್ ಭಾಗವಾಗಿ ಅಮೆಜಾ಼ನ್ ಹಲವಾರು ಪ್ರಮುಖ ನಗರಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ, ಮಹಿಳಾ ಸಬಲೀಕರಣ, ಕೌಶಲ್ಯ ಮತ್ತು ಉದ್ಯಮಶೀಲತೆ, ಪರಿಸರ, ರಸ್ತೆ ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆಯ ಕುರಿತಾಗಿ ಕಾರ್ಯಕ್ರಮಗಳ ಆಯೋಜನೆ ಮುಂದುವರಿಸಿದೆ.