ದಾರಿತಪ್ಪಿಸುವ ಜಾಹೀರಾತು: ಗೇಮಿಂಗ್ ಕಂಪನಿಗೆ ನೋಟಿಸ್ ಜಾರಿ
ಬೆಂಗಳೂರು:ಪತ್ರಿಕೆಗಳಲ್ಲಿ ಪ್ರಕಟವಾದ ಜಾಹೀರಾತು ಕುರಿತು ಸ್ವಯಂಪ್ರೇರಿತವಾಗಿ ದೂರು ಸ್ವೀಕರಿಸಿದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ , ಲೋಟಸ್ 365 ಎಂಬ ಗೇಮಿಂಗ್ ಕಂಪನಿಗೆ ನೋಟಿಸ್ ಜಾರಿ ಮಾಡಿದೆ.
ಸಂಸ್ಥೆಯು ‘2015ರಿಂದ ಭಾರತದ ಅತ್ಯಂತ ವಿಶ್ವಾಸಾರ್ಹ ಕ್ರೀಡಾ ವಿನಿಮಯ’ ಎಂದು ಜಾಹೀರಾತು ನೀಡಿತ್ತು. ಈ ಬ್ರ್ಯಾಂಡ್ ಅನುಮೋದಿಸುವ ನವಾಜುದ್ದೀನ್ ಸಿದ್ದಿಕಿ ಮತ್ತು ಊರ್ವಶಿ ರೌಟೇಲಾ ಅವರಿಗೂ ದಾರಿ ತಪ್ಪಿಸಿದ್ದಕ್ಕಾಗಿ ನೋಟಿಸ್ ನೀಡಿದೆ.
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳಲು ಸೆಲೆಬ್ರಿಟಿಗಳ ಪ್ರತಿಕ್ರಿಯೆಗೆ ಕಾಯುತ್ತಿದೆ.
ನವಾಜುದ್ದೀನ್ ಈಗಾಗಲೇ ವಿವಾದಗಳಿಂದ ಸುತ್ತುವರೆದಿದ್ದು, ಅವರು ತಮ್ಮ ಪತ್ನಿ ಆಲಿಯಾ ಸಿದ್ದಿಕಿ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ನವಾಜುದ್ದೀನ್ ಮತ್ತು ಊರ್ವಶಿ ಗೇಮಿಂಗ್ ಕಂಪನಿಯೊಂದಿಗೆ ಅವರ ಸಂಬಂಧದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.