ನಾಮಪತ್ರ ಸಲ್ಲಿಸಿದ  ವಿಜಯೇಂದ್ರ
ಶಿಕಾರಿಪುರ/ಶಿವಮೊಗ್ಗ:ಶಿಕಾರಿಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ  ವಿಜಯೇಂದ್ರ ಅವರು ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದರು.
ಶಿಕಾರಿಪುರ ತಾಲೂಕು ಕಚೇರಿಯಲ್ಲಿರುವ ಚುನಾವಣಾ ಅಧಿಕಾರಿಗಳಿಗೆ ಅವರು ನಾಮಪತ್ರವನ್ನು ಸಲ್ಲಿಸಿದರು. ಇದೇ ವೇಳೇ  ವಿಜಯೇಂದ್ರ ಅವರಿಗೆ ಸ್ಥಳೀಯ ಬಿಜೆಪಿ ನಾಯಕರುಗಳು ಸಾಥ್‌ ನೀಡಿದರು. ಮಾಜಿ ಸಿಎಂ ಬಿಎಸ್‌ ಯಡಿಯ್ಯೂರಪ್ಪನವರು ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ತಮ್ಮ ಪುತ್ರನಿಗೆ ಟೀಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
