ಈ ಸೀಸನ್‌ನ ಮೆಚ್ಚಿನ ಮ್ಯಾಂಗೋ ಫಿಯೆಸ್ಟಾ ಘೋಷಣೆ ಮಾಡಿದ ಅಮೆಜಾನ್‌ ಫ್ರೆಶ್‌
ಅಮೆಜಾನ್ ಫ್ರೆಶ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಮ್ಯಾಂಗೋ ಫಿಯೆಸ್ಟಾದಲ್ಲಿ ಅದ್ಭುತ ಬೆಲೆಗಳಲ್ಲಿ ವಿವಿಧ ರೀತಿಯ ಮಾವಿನ ಹಣ್ಣುಗಳನ್ನು ಸವಿಯಿರಿ
ಬೆಂಗಳೂರು:ಬೇಸಿಗೆ ಕಾಲದಲ್ಲಿ ಎಲ್ಲರ ಮೆಚ್ಚಿನ ಹಣ್ಣು ಎಂದರೆ ಅದು ಹಣ್ಣುಗಳ ರಾಜ ಮಾವು. ಈ ರುಚಿಕರ ಹಣ್ಣುಗಳನ್ನು ಆನಂದಿಸುವುದಕ್ಕೆ ಅಮೆಜಾನ್‌ ಫ್ರೆಶ್‌ನ ಮ್ಯಾಂಗೋ ಫಿಯೆಸ್ಟಾಕ್ಕಿಂತ ಉತ್ತಮ ಅವಕಾಶ ಸಿಗುವುದು ಸಾಧ್ಯವೇ ಇಲ್ಲ. ವಿವಿಧ ವಲಯಗಳಿಂದ ಅತ್ಯಧಿಕ ಗುಣಮಟ್ಟದ ತಾಜಾ ಮಾವಿನ ಹಣ್ಣುಗಳನ್ನು ಈ ಫಿಯೆಸ್ಟಾ ಒಟ್ಟಿಗೆ ತರುತ್ತಿದೆ. ಪ್ರತಿಯೊಂದು ವಿಧವೂ ತನ್ನದೇ ಆದ ವಿಶಿಷ್ಟ ರುಚಿ ಮತ್ತು ಸ್ವಾದವನ್ನು ಹೊಂದಿರುತ್ತವೆ.ಅದ್ಭುತ ಡೀಲ್‌ಗಳನ್ನೂ ಇವು ಹೊಂದಿವೆ.
ನೀವು ಸಿಹಿಯಾದ ಮತ್ತು ರಸಭರಿತ ರತ್ನಗಿರಿ ಆಲ್ಫೋನ್ಸೋ, ಹುಳಿಯಾದ ಮತ್ತು ಸ್ವಾಧಭರಿತ ಬಂಗನಪಲ್ಲಿ ಅಥವಾ ವೈವಿಧ್ಯಮಯವಾದ, ನಾರಿನಂಶ ಇಲ್ಲದ ತೋತಾಪುರಿ, ರಸಭರಿತ ಬಾದಾಮಿ ಮಾವು, ವಿಟಾಮಿನ್‌ ಹೇರಳವಾಗಿರುವ ಸಫೇದಾ/ಬಂಗನಪಲ್ಲಿ ಮಾವು, ಸಿಹಿಯಾದ ಸಿಂಧೂರ (ಲಾಲ್‌ಬಾಗ್‌) ಮಾವಿನ ಹಣ್ಣಿನ ಅಭಿಮಾನಿಯಾಗಿರಬಹುದು, ಅಮೆಜಾನ್‌ ಫ್ರೆಶ್‌ನ ಮ್ಯಾಂಗೋ ಫಿಯೆಸ್ಟಾದಲ್ಲಿ ನಿಮಗೆ ಎಲ್ಲವೂ ಲಭ್ಯವಿದೆ.
ಈ ಜನಪ್ರಿಯ ವೈವಿಧ್ಯಗಳ ಜೊತೆಗೆ ಅಮೆಜಾನ್‌ ಫ್ರೆಶ್‌ನಲ್ಲಿ ಪ್ರಾದೇಶಿಕ ವೈವಿಧ್ಯಗಳಾದ ಪೇಢಾ ರಸಮ್, ಕಲಪಡ್‌ ಮತ್ತು ಚೆರುಕುರಸಮ್ ಅನ್ನು ಬೆಂಗಳೂರಿಗರಿಗೆ ಹಾಗೂ ತೋತಾಪುರಿ ಮತ್ತು ಸಿಂಧೂರ ಅನ್ನು ಮುಂಬೈ ಗ್ರಾಹಕರಿಗೆ ಒದಗಿಸುತ್ತಿದೆ. ಅಮೆಜಾನ್‌ ಫ್ರೆಶ್‌ನ ಮ್ಯಾಂಗೋ ಫಿಯೆಸ್ಟಾ ಜೊತೆಗೆ ಕಾರ್ಬೈಡ್‌ ಇಲ್ಲದ, ಸುರಕ್ಷಿತವಾಗಿ ಹಣ್ಣು ಮಾಡಿದ ಮಾವಿನ ಹಣ್ಣು ಗಳನ್ನೂ ಆನಂದಿಸಬಹುದು. ಇವುಗಳನ್ನು 4 ಹಂತದ ಗುಣಮಟ್ಟ ತಪಾಸಣೆ ಮಾಡಿ ನಿಮ್ಮ ಮನೆ ಬಾಗಿಲಿಗೆ ಒದಗಿಸಲಾಗುತ್ತದೆ. ಹೀಗಾಗಿ, ನಿಮ್ಮ ಮೆಚ್ಚಿನ ಮಾವಿನ ಹಣ್ಣುಗಳನ್ನು ಸಂಗ್ರಹಿಸಿಕೊಳ್ಳಿ ಮತ್ತು ಇಡೀ ಬೇಸಿಗೆಯಲ್ಲಿ ರುಚಿಕರವಾದ ಮಾವಿನ ಹಣ್ಣುಗಳನ್ನು ಸವಿಯಿರಿ.
ಈ ಫಿಯೆಸ್ಟಾದಲ್ಲಿ, ಬ್ಯಾಂಕ್‌ ಕೊಡುಗೆಗಳು, ಕ್ಯಾಶ್‌ಬ್ಯಾಕ್‌ ಮತ್ತು ರಿವಾರ್ಡ್‌ಗಳ ಮೇಲೆ 10% ವರೆಗೆ ರಿಯಾಯಿತಿಗಳನ್ನು ಗ್ರಾಹಕರು ಆನಂದಿಸಬಹುದು. ಬೆಂಗಳೂರು, ದೆಹಲಿ, ಫರೀದಾಬಾದ್, ಗುರ್‌ಗಾಂವ್‌, ಗಾಜಿಯಾಬಾದ್, ನೋಯ್ಡಾ, ಅಹಮ ದಾಬಾದ್, ಮೈಸೂರು, ಜೈಪುರ, ಮುಂಬೈ, ಹೈದರಾಬಾದ್, ಚೆನ್ನೈ, ಪುಣೆ, ಕೋಲ್ಕತಾ, ಇಂದೋರ್‌ ಮತ್ತು ಚಂಡೀಗಢ ಸೇರಿದಂತೆ 50 ಕ್ಕೂ ಹೆಚ್ಚು ನಗರಗಳಲ್ಲಿ ವಾಸಿಸುವ ಗ್ರಾಹಕರು ಉತ್ತಮ ಗುಣಮಟ್ಟದ ತಾಜಾ ಮಾವಿನ ಹಣ್ಣುಗಳನ್ನು ಆನಂದಿಸಬಹುದು. ಈ ಮಾವಿನ ಹಣ್ಣುಗಳು ಎರಡರಿಂದ ಮೂರು ಗಂಟೆಗಳ ಡೆಲಿವರಿ ಸ್ಲಾಟ್‌ಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿಯವರೆಗೆ ಲಭ್ಯವಿರುತ್ತವೆ.
ಅಮೆಜಾನ್‌ ಫ್ರೆಶ್‌ನಲ್ಲಿ ರಸಭರಿತ ಮಾವಿನ ಹಣ್ಣುಗಳನ್ನು ಸವಿಯಿರಿ ಮತ್ತು ಬಾಯಿ ಚಪ್ಪರಿಸುವ ಬೇಸಿಗೆ ಕಾಲದ ತಾಜಾ ರೆಸಿಪಿಗಳನ್ನು ಮಾಡಿ:
•ತಾಜಾ ಆಲ್ಫೋನ್ಸೋ ಮಾವಿನ ಜೊತೆಗೆ ಸಾಲ್ಸಾ ಸಲಾಡ್‌:ತಾಜಾ ಮಾವಿನ ಹಣ್ಣು, ಆಲ್ಫೋನ್ಸೋ – ಆಲ್ಫೋನ್ಸೋ ಮಾವಿನಹಣ್ಣುಗಳು ಅತ್ಯಂತ ಸುಗಂಧಭರಿತವಾಗಿವೆ ಮತ್ತು ರುಚಿ, ಆಹ್ಲಾದ ಮತ್ತು ಸ್ವಾದದ ವಿಚಾರದಲ್ಲಿ ಅತ್ಯುತ್ತಮ ಗುಣಮಟ್ಟದ ಹಣ್ಣು ಎಂದು ಪರಿಗಣಿಸಲಾಗಿದೆ. ಸಾಲ್ಸಾ ಸಲಾಡ್‌ ರೆಸಿಪಿ: ತಾಜಾ ಕತ್ತರಿಸಿದ ಕೊತ್ತಂಬರಿ ಸೊಪ್ಪು, ನಿಂಬೆ ರಸ, ಬಾಯಿ ಸುಡುವ ಖಾರದ ಹಸಿ ಮೆಣಸು, ಜೀರಿಗೆ, ಯುಜು ಮತ್ತು ತುರಿದ ಶುಂಟಿಯನ್ನು ಮಿಶ್ರಣ ಮಾಡಿ. ಇದಕ್ಕೆ ಕತ್ತರಿಸಿದ ಆಲ್ಫೋನ್ಸೋ ಮಾವಿನ ಹಣ್ಣುಗಳನ್ನು (ಸಿಪ್ಪೆ ತೆಗೆದ) ಹಾಕಿ, ಕತ್ತರಿಸಿದ ಜಲಪ್ಪೆನೋಗಳು ಹಾಗೂ ತೆಂಗಿನ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಾದ ಚೆನ್ನಾಗಿ ಮಿಶ್ರಣವಾಗಲು 10 ರಿಂದ 12 ಗಂಟೆಗಳವರೆಗೆ ಇದನ್ನು ಹಾಗೆಯೇ ಬಿಡಿ. ಅಂತಿಮ ವಾಗಿ ಸಾಲ್ಸಾ ಸಲಾಡ್‌ಗೆ ತಾಜಾ ಹೆಚ್ಚಿದ ಪುದೀನಾ ಸೊಪ್ಪನ್ನು ಹಾಕಿ, ಕಾರ್ನ್‌ಗಳನ್ನು ಸೇರಿಸಿ ಸರ್ವ್‌ ಮಾಡಿ.
• ಗೋಲ್ಡನ್ ಬ್ಯೂಟಿ ತೋತಾಪುರಿ ಮಾವಿನ ಹಣ್ಣಿನ ಉಪ್ಪಿನಕಾಯಿ:ಈ ಮಾವಿನ ಕಾಯಿಗಳು ದೊಡ್ಡದಾಗಿರುತ್ತವೆ ಮತ್ತು ತಿಳಿ ಹಳದಿ ಬಣ್ಣವನ್ನು ಹೊಂದಿರುತ್ತವೆ. ಅವು ವಿಶಿಷ್ಟ ಆಕಾರದಲ್ಲಿರುತ್ತವೆ ಮತ್ತು ತುದಿಯಲ್ಲಿ ಹಕ್ಕಿಯ ಕೊಕ್ಕಿನಂತಿರುತ್ತವೆ. ಉಪ್ಪಿನಕಾಯಿಗಳನ್ನು ತಯಾರಿಸಲು ಇವು ಪರಿಪೂರ್ಣವಾಗಿರುತ್ತವೆ. ಮಾವಿನ ಉಪ್ಪಿನಕಾಯಿ ರೆಸಿಪಿ: ಸಮುದ್ರ ಉಪ್ಪನ್ನು ರೋಸ್ಟ್ ಮಾಡುವುದರೊಂದಿಗೆ ಆರಂಭಿಸಿ. ಅದನ್ನು ತಣ್ಣಗಾಗಲು ಬಿಡಿ. ನಂತರ, ಸೀಸನಿಂಗ್‌ಗೆ ಸಿದ್ಧ ಮಾಡಲು ಇನ್ನೊಂದು ಪ್ಯಾನ್‌ ತೆಗೆದುಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಕಾಳುಗಳು ಮತ್ತು ಕರಿಬೇವು ಎಲೆಗಳನ್ನು ಹುರಿದುಕೊಳ್ಳಿ, ಕಚ್ಚಾ ಮಾವಿನ ಹೋಳುಗಳನ್ನು ಸೇರಿಸಿ ಮತ್ತು ಮೇಲ್ಭಾಗ ಹಳದಿಯಾಗುವವರೆಗೆ ಬೇಯಿಸಿ. ಡ್ರೈ ರೋಸ್ಟ್‌ ಮಾಡಿದ ಉಪ್ಪಿನ ಜೊತೆಗೆ ಮಿಶ್ರಣ ಮಾಡಿ ಮತ್ತು ಪಕ್ಕಕ್ಕೆ ಇಡಿ. ನಂತರ, ಸಾಸಿವೆ, ಎಳ್ಳು, ಪೆಪ್ಪರ್‌ಕಾರ್ನ್‌ಗಳು ಮತ್ತು ಇಂಗನ್ನು ಡ್ರೈ ರೋಸ್ಟ್ ಮಾಡಿ. ಕೆಂಪು ಮೆಣಸುಗಳನ್ನು ಒಂದು ಚಮಚ ಎಣ್ಣೆಯನ್ನು ಬಳಸಿ ಫ್ರೈ ಮಾಡಿ. ತಂಪಾದ ನಂತರ ಮೆಣಸಿನ ಜೊತೆಗೆ ಅರಿಶಿಣ ಹಾಗೂ ಇತರ ರೋಸ್ಟ್‌ ಮಾಡಿದ ಪದಾರ್ಥಗಳನ್ನು ಹಾಕಿ, ಪೌಡರ್‌ ಮಾಡಿ. ಇದನ್ನು ಮಾವಿನ ಹೋಳುಗಳ ಜೊತೆಗೆ ಮಿಶ್ರಣ ಮಾಡಿ ಮತ್ತು ಶುಚಿಗೊಳಿಸಿದ ಜಾರ್‌ಗೆ ಉಪ್ಪಿನಕಾಯಿಯನ್ನು ಹಾಕಿಡಿ. ಮೊಸರನ್ನ, ರೋಟಿ ಅಥವಾ ತಿಂಡಿಯ ಜೊತೆಗೆ ಈ ಉಪ್ಪಿನಕಾಯಿಯನ್ನು ಸವಿಯಬಹುದು.
• ಶುಗರ್‌ ಬೇಬಿ ಮ್ಯಾಂಗೋ ಜಾಮ್:ಈ ಮಾವಿನ ಹಣ್ಣು ವೃತ್ತಾಕಾರದಲ್ಲಿರುತ್ತದೆ ಮತ್ತು ಹೊಳೆಯುವ ಹಳದಿ ಹಾಗೂ ಹಸಿರು ಬಣ್ಣದಲ್ಲಿರುತ್ತದೆ. ಇದು ತುಂಬಾ ಸಿಹಿಯಾಗಿರುತ್ತದೆ. ಕರ್ನಾಟಕದ ಈ ಶುಗರ್ ಬೇಬಿ ಜಾಮ್‌ ಮಾಡುವುದಕ್ಕೆ ಅತ್ಯುತ್ತಮ ವಾದ್ದಾಗಿದೆ.
ಮ್ಯಾಂಗೋ ಜಾಮ್ ರೆಸಿಪಿ:ಮಾವಿನ ಹಣ್ಣಿನ ಸಿಪ್ಪೆ ತೆಗೆಯಿರಿ. ಮಾವಿನ ಹಣ್ಣುಗಳನ್ನು ಹಿಚುಕಿ. ಸ್ವಲ್ಪ ನೀರು ಸೇರಿಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ದಪ್ಪ ತಳ ಇರುವ ಕಡಾಯಿ ಅಥವಾ ಪ್ಯಾನ್‌ ಬಿಸಿ ಮಾಡಿ, ಬೆಲ್ಲ ಹಾಗೂ ನೀರನ್ನು ಅಗತ್ಯವಿದ್ದಷ್ಟು ಹಾಕಿ, ಅದು ಚೆನ್ನಾಗಿ ಮಿಶ್ರಣವಾಗುವವರೆಗೆ ಬಿಡಿ. ಬೆಲ್ಲ ನಿಧಾನವಾಗಿ ಕರಗಿ ಚಿನ್ನದ ಬಣ್ಣದ ಸಿರಪ್ ಆಗಲು ಬಿಡಿ. ಹಿಚುಕಿದ ಮಾವಿನ ಹಣ್ಣನ್ನು ಅದರ ರಸದ ಜೊತೆಗೆ ಇದಕ್ಕೆ ಸೇರಿಸಿ. ಎಲ್ಲವೂ ಕಡಿಮೆ ಉಷ್ಣತೆಯನ್ನು ಸುಮಾರು 30 ರಿಂದ 40 ನಿಮಿಷಗಳ ವರೆಗೆ ಬಿಸಿಯಾಗಲಿ. ಸಿರಪ್‌ ನಿಮ್ಮ ಇಷ್ಟದ ಮಟ್ಟಿಗೆ ದಪ್ಪಗಾಗುವವರೆಗೆ ಬೇಯಿಸಿ.
• ರುಮಾನಿ ಜೊತೆಗೆ ಮ್ಯಾಂಗೋ ಕುಲ್ಫಿ:ರುಮಾನಿ ಮಾವಿನಹಣ್ಣುಗಳು ಅತ್ಯುತ್ತಮ ಸ್ವಾದ ಮತ್ತು ರಸವತ್ತಾಗಿರುತ್ತವೆ. ಇದನ್ನು ಐಸ್‌ ಕ್ರೀಮ್ ಮಾವು ಅಥವಾ ಆಪಲ್ ಮಾವು ಎಂದೂ ಇದನ್ನು ಕರೆಯಲಾಗುವ ಈ ರುಮಾನಿ, ಸಿಹಿಯಾದ ಕುಲ್ಫಿ ಗಳನ್ನು ಮಾಡಲು ಉತ್ತಮವಾಗಿವೆ. ಭಾರತದ ಹಣ್ಣುಗಳ ರಾಜ ಮಾವಿನ ಹಣ್ಣಿನ ರುಚಿಕರವಾದ ಪದಾರ್ಥವನ್ನು ಸವಿಯಲು ಸಿದ್ಧರಾಗಿ!
ಮ್ಯಾಂಗೋ ಕುಲ್ಫಿ ರೆಸಿಪಿ:ಹಾಲು, ಸಿಹಿ ಹಾಕಿದ ಕಂಡೆನ್ಸ್‌ ಮಾಡಿದ ಹಾಲು ಮತ್ತು ಕಳಿತ ಮಾವಿನ ಹಣ್ಣುಗಳನ್ನು ಮೆತ್ತನೆಯ ಪೇಸ್ಟ್ ಆಗುವವರೆಗೂ ಮಿಶ್ರಣ ಮಾಡಿ. ನಂತರ, ಸಾಕಷ್ಟು ಪ್ರಮಾಣದ ವಿಪ್ಡ್ ಕ್ರೀಮ್ ಸೇರಿಸಿ ಮತ್ತು ತಿರುಗಿಸಿ. ಇನ್ನಷ್ಟು ಸುಂದರ ವಾಗಿ ಕಾಣಿಸಬೇಕು ಎಂದಾದರೆ, ಕಾಳುಮೆಣಸಿನ ಪುಡಿ ಮತ್ತು ಕೇಸರಿಯನ್ನು ಹಾಕಿ. ಸ್ವಾದ ಚೆನ್ನಾಗಿ ಮಿಶ್ರಣ ಆಗುವವರೆಗೂ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕುಲ್ಫಿ ಮೌಲ್ಡ್‌ಗೆ ಹಾಕಿ, ಮುಚ್ಚಳವನ್ನು ಬಿಗಿಯಾಗಿ ಹಾಕಿ. ರಾತ್ರಿಯಿಡೀ ಫ್ರೀಜರ್‌ನಲ್ಲಿ ಇಡಿ. ಮರುದಿನ ಈ ಕುಲ್ಫಿಯನ್ನು ಸವಿಯಿರಿ.
ಅಮೆಜಾನ್‌ ಫ್ರೆಶ್‌ನಲ್ಲಿ ಲಭ್ಯವಿರುವ ವಿವಿಧ ಮಾವಿನ ಹಣ್ಣುಗಳನ್ನು ನೋಡಲು ಇಲ್ಲಿನ ಲಿಂಕ್‌ ಕ್ಲಿಕ್ ಮಾಡಿ.
ಹಕ್ಕುಹೇಳಿಕೆ:ಉತ್ಪನ್ನ ವಿವರಗಳು, ವಿವರಣೆ ಮತ್ತು ಬೆಲೆ ನಿಗದಿಯನ್ನು ಸೆಲ್ಲರ್‌ಗಳು ನೀಡಿದಂತೆಯೇ ಇದೆ. ಬೆಲೆ ನಿಗದಿ ಅಥವಾ ಉತ್ಪನ್ನಗಳ ವಿವರಣೆಯಲ್ಲಿ ಅಮೆಜಾನ್ ತೊಡಗಿಸಿಕೊಂಡಿಲ್ಲ ಮತ್ತು ಸೆಲ್ಲರ್‌ಗಳು ಒದಗಿಸಿದ ಉತ್ಪನ್ನ ಮಾಹಿತಿ ನಿಖರತೆಗೆ ಜವಾಬ್ದಾನಲ್ಲ.