ದೇಶದ ಜನರು ನೆಮ್ಮದಿ, ಸುಖ ನಿದ್ರೆ, ಅನುಭವಿಸಿದರೆ ದೇಶ ಕಾಯುವ ಸೈನಿಕರೇ ಕಾರಣ
ತಿಪಟೂರು:ಹಗಲಿರುಳು, ಚಳಿ ಮಳೆ ಎನ್ನದೆ ದೇಶ ಸೇವೆ ಮಾಡಿ, ದೇಶದ ಜನರು ನೆಮ್ಮದಿ, ಸುಖ ನಿದ್ರೆ, ಅನುಭವಿಸಿದರೆ ದೇಶ ಕಾಯುವ ಸೈನಿಕರೇ ಕಾರಣ. ಚುನಾವಣಾ ಸಮಯದಲ್ಲಿ ನಮ್ಮ ರಾಜ್ಯದ, ಗ್ರಾಮಗಳಲ್ಲಿ ಬಂದಿರುವುದು, ಆ ಯೋಧರನ್ನು ಸೈನಿಕ ವೇಷದಲ್ಲಿ ನೋಡುವುದು ನಮ್ಮ ನಿಮ್ಮೆಲ್ಲರ ಪುಣ್ಯ ಇಂತಹ ಸಮಯದಲ್ಲಿ ಯಾವುದೇ ತೊಂದರೆ ನೀಡದೆ ಊಟೋ ಪಚಾರ ನೀಡುವುದು ಗ್ರಾಮಸ್ಥರ ಕರ್ತವ್ಯ, ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ ತಿಳಿಸಿದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಸೇವೆ ಸಲ್ಲಿಸಲು ಆಗಮಿಸಿರುವ ಕೇಂದ್ರದ ಬಿಎಸ್ಎಫ್ ಯೋಧರು ಬಿಡುವಿನ ವೇಳೆ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾದ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ದೇವಿಯ ವಿಶೇಷ ದರ್ಶನ ಮಾಡಿಸಿ ಆಶೀರ್ವದಿಸಿ, ನಿಮ್ಮ ಅಮೂಲ್ಯ ಅನನ್ಯ ದೇಶ ಸೇವೆಗೆ ಶ್ರೀ ಚೌಡೇಶ್ವರಿ ದೇವಿಯವರ ಆಶೀರ್ವಾದವಿರಲಿ, ತಮ್ಮ ನಿತ್ಯ ಪ್ರಸಾದಕ್ಕೆ ಶಾಖಾ ಮಠಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿ ಎಂದು ಆಶೀರ್ವದಿಸಿದರು. ಈ ಸಮಯದಲ್ಲಿ ಬಿಎಸ್ ಎಫ್ ಯೋಧರು, ಸ್ಥಳೀಯ ಪೊಲೀಸರು ಇದ್ದರು.