ಬಸವೇಶ್ವರ ಜಯಂತಿ ಅದ್ದೂರಿ, ಭಕ್ತಿ ಪೂರ್ವಕ ಆಚರಣೆ
ತಿಪಟೂರು:ನಗರದ ಕೋಡಿಸರ್ಕಲ್ ಬಳಿ ನಿರ್ಮಾಣವಾಗುತ್ತಿರುವ ಆಶ್ವರೂಢ ಬಸವೇಶ್ವರ ಪುತ್ಥಳಿಯ ಸ್ಥಳದಲ್ಲಿ ತಾಲ್ಲೂಕಿನವೀರಶೈವ ಲಿಂಗಾಯಿತ ಸಮಾಜ ಹಾಗೂ ಬಸವ ಬಳಗ ಮತ್ತು ಯುವ ವೇಧಿಕೆಯ ವತಿಯಿಂದ ಬಸವೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ಬಸವೇಶ್ವರ ಮಂಟಪಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸಮಾಜದ ಮುಖಂಡ ಲೋಕೇಶ್ವರ್ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಬಸವೇಶ್ವರರು ಒಬ್ಬರು, ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗದೆ ಅಂದು ೧೨ ನೇ ಶತಮಾನದಲ್ಲಿ ಸಮಾಜದ ಬದಲಾವಣೆಗೆ ಹೋರಾಟಿದ ಮಹಾಪುರಷರಾಗಿದ್ದು ಅವರು ನೀಡಿದ ವಚನಸಾಹಿತ್ಯ ಜಗತ್ತಿಗೆ ಮಾದರಿಯಾಗಿದ್ದು ಅವರ ಕಾಯಕ ನಿಷ್ಠೆಯನ್ನು ನಾವೆಲ್ಲರೂ ಸಹ ಮೈಗೂಡಿಸಿಕೊಂಡು ಹೊಗಬೇಕು ಎಂದು ತಿಳಿಸಿದರು.
ಕರ‍್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಮಾಜಿ ಶಾಸಕ ಕೆ ಷಡಕ್ಷರಿ ಸಮಾಜದ ಅಂಕು ಡೊ0ಕುಗಳನ್ನು ಸುಧಾರಣೆ ತರಲು ಬಹಳಷ್ಟು ಶ್ರಮಿಸಿದ ಬಸವೇಶ್ವರರು ಅಂದು ಇಡೀ ಜಗತ್ತಿಗೆ ಅನುಭವ ಮಂಟಪವನ್ನು ಸ್ಥಾಪಿಸಿ, ಸಮಾಜದ ಎಲ್ಲಾ ವರ್ಗ ದವರಿಗೆ ಒಂದೇ ವೇದಿಕೆಯಲ್ಲಿ ಕಾಣುವಂತೆ ಮಾಡಿದವರು ಬಸವಣ್ಣನವರು ಎಂದರು.
ಬಸವೇಶ್ವರ ಪುತ್ಥಳಿಯ ಕಾಮಗಾರಿಯು ನೆಡೆಯುತ್ತಿದ್ದ ಸ್ಥಳದ ಮಂಟಪಕ್ಕೆ ತಳಿರು ತೋರಣಗಳಿಂದ, ಕೇಸರಿ ಧ್ವಜಗಳಿಂದ ಶೃಂಗಾರ ಮಾಡಲಾಯಿತು. ನಂತರ ಕಾರ್ಯಕ್ರಮದಲ್ಲಿ ಪಾನಕ, ಫಲಾಹಾರ, ಮಜ್ಜಿಗೆಯನ್ನು ವಿತರಿಸಲಾಯಿತು.
ಜಯಂತಿಯಲ್ಲಿ ವೀರಶೈವ ಲಿಂಗಾಯಿತ ಯುವ ವೇಧಿಕೆಯ ತಾ ಅದ್ಯಕ್ಷ ಲೋಹಿತ್‌ಬನ್ನಿಹಳ್ಳಿ, ಹಳ್ಳಿಕಾರ್ ವಿನಯ್, ರೇಣು, ಮಧುಸೂಧನ್, ದಕ್ಷೀಣ ಮೂರ್ತಿ, ಶಂಕರಮೂರ್ತಿ ರಂಗಾಪುರ, ಶಿಕ್ಷಕ ಆನಂದ್, ನಿಖಿಲ್ ರಾಜ್, ಮಡೆನೂರು ಕಾಂತರಾಜು, ಪ್ರಸನ್ನಬೆಳಗರಹಳ್ಳಿ, ಉದಯ್‌ಕುಮಾರ್, ಯೋಗನಂದ್ ಹೋಗವನಘಟ್ಟ, ವಕೀಲ ನಟರಾಜು, ಬೆನಿ, ಉಮೇಶ್, ನಾಗಣ್ಣ ಹಾಗೂ ಸಮಾಜದ ಮುಖಂಡರು ವಿವಿಧ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.