ಡಿ.ಬಿ ಇನಾಮ್ದಾರ್‌ ನಿಧನ: ಕಿತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಸಿಎಂ ರೋಡ್‌ ಶೋ ರದ್ದು
ಬೆಂಗಳೂರು :ಕಾಂಗ್ರೆಸ್‌ ಮಾಜಿ ಸಚಿವ ಡಿ.ಬಿ ಇನಾಮ್ದಾರ್‌ ನಿಧನ ಹೊಂದಿನ ಹಿನ್ನೆಲೆ ಮಂಗಳವಾರ ಕಿತ್ತೂರು ವಿಧಾನ ಸಭೆ ಕ್ಷೇತ್ರದಲ್ಲಿ ನಿಗದಿಯಾಗಿದ್ದ ಸಿಎಂ ಬೊಮ್ಮಾಯಿ ರೋಡ್‌ ಶೋ ರದ್ದುಗೊಳಿಸಲಾಗಿದೆ.
ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಣತಂತ್ರ ರೂಪಿಸುವ ನಿಟ್ಟಿ ನಲ್ಲಿ ರಾಜ್ಯದಲ್ಲಿ ಸಿಎಂ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಿಟ್ಟಿನಲ್ಲಿ ಬೆಳಗಾ ವಿ ಜಿಲ್ಲೆಯ ಕಿತ್ತೂರು ವಿಧಾನ ಸಭೆ ಕ್ಷೇತ್ರದಲ್ಲಿ ಸಿಎಂ ರೋಡ್‌ ಶೋ ನಿಗದಿ ಯಾಗಿತ್ತು.
ಕಾಂಗ್ರೆಸ್‌ ಮಾಜಿ ಸಚಿವ ಡಿ.ಬಿ ಇನಾಮ್ದಾರ್‌ ನಿಧನ ಹೊಂದಿನ ಹಿನ್ನೆಲೆ ಕಿತ್ತೂರು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ನಿಗದಿಯಂತೆ ಸಿಎಂ ಪ್ರಚಾರ ನಡೆಸಲಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ, ಹಿರೇಬಾಗೇವಾಡಿ, ಬೆಳಗಾವಿ ನಗರ, ಬೈಲಹೊಂಗಲದಲ್ಲಿ  ರೋಡ್‌ ಶೋ ಎಂದಿನಂತೆ ನಿಗದಿಯಂತೆ ನಡೆಸಲಾಗುತ್ತದೆ.
