ನೀತಿ ಸಂಹಿತೆ ಅಂತ್ಯವಾದ ಬಳಿಕ ತುಟ್ಟಿಭತ್ಯೆ ಮಂಜೂರು ಆದೇಶ ಜಾರಿ
ಬೆಂಗಳೂರು:ರಾಜ್ಯದಲ್ಲಿ ಪ್ರಸ್ತುತ ನೀತಿ ಸಂಹಿತೆ ಜಾರಿಯಲ್ಲಿದ್ದು, ಇದು ಅಂತ್ಯಗೊಂಡ ಬಳಿಕ ಕೇಂದ್ರ ಸರ್ಕಾರದ ಮಾದರಿ ಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಶೇ.4 ತುಟ್ಟಿಭತ್ಯೆ ಹೆಚ್ಚಳ ಮಂಜೂರು ಆದೇಶ ಹೊರಬೀಳಲಿದೆ ಎಂದುರಾಜ್ಯ ಸರ್ಕಾರಿ ನೌಕರರಿಗೆ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ತಿಳಿಸಿದ್ದಾರೆ.
ಮೇ 13 ರಂದು ಚುನಾವಣಾ ನೀತಿ ಸಂಹಿತೆ ಅಂತ್ಯಗೊಳ್ಳಲಿದ್ದು, ಇದಾದ ಬಳಿಕ ತುಟ್ಟಿಭತ್ಯೆ ಮಂಜೂರು ಆದೇಶ ಹೊರ ಬೀಳಲಿದೆ. ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಈ ಕುರಿತಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದು ಸಿ.ಎಸ್. ಷಡಕ್ಷರಿ ಹೇಳಿದ್ದಾರೆ.
ಶೇಕಡ 4 ಬಾಕಿ ತುಟ್ಟಿಭತ್ಯೆ ಆದೇಶವನ್ನು ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ತರಲು ಆದೇಶ ಹೊರಡಿಸುವು ದಾಗಿ ಹಣಕಾಸು ಇಲಾಖೆ ಭರವಸೆ ನೀಡಿದೆ ಎಂದು ತಿಳಿಸಿರುವ ಷಡಕ್ಷರಿ, ಏಳನೇ ವೇತನ ಆಯೋಗದ ಶೇಕಡ 17ರಷ್ಟು ಮಧ್ಯಂತರ ಪರಿಹಾರ ಮೊತ್ತವನ್ನು ಏಪ್ರಿಲ್ ವೇತನದಲ್ಲೇ ಪಡೆಯಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸ ಲಾಗಿದೆ.