ಅಕ್ರಮವಾಗಿ ಕೆರೆ ಮಣ್ಣು ಸಾಗಾಟ ಕ್ರಮ ಕೈಗೊಳ್ಳುವಂತೆ ಆಗ್ರಹ
ಗುಬ್ಬಿ:ತಾಲೂಕಿನ ಮಾರಶೆಟ್ಟಿ ಹಳ್ಳಿ ಗ್ರಾಮದ ಹೊಸ ಕೆರೆ  ಎಂದು  ಪ್ರಸಿದ್ಧಿಯಾದ  ಕೆರೆಯಲ್ಲಿ ಸರ್ಕಾರದ ಯಾವುದೇ ಹೂಳೆತ್ತುವ ಆದೇಶವಿಲ್ಲದಿದ್ದರೂ  ಕೆಲವರು ತೋಟಕ್ಕೆ ಮಣ್ಣು ಹೊಡೆಯುವ ನೆಪದಲ್ಲಿ  ಲಕ್ಷಾಂತರ ರೂ ಮಣ್ಣಿನ ಮಾರಾಟ ದಲ್ಲಿ ತೊಡಗಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದ್ದು ಅವರ ವಿರುದ್ಧ ಅಧಿಕಾರಿಗಳು ಕೂಡಲೇ  ಕ್ರಮ ಕೈಗೊಳ್ಳ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.