ಕಲ್ಲೇಟಿಗೆ ಜಗ್ಗುವುದಿಲ್ಲ: ಪರಮೇಶ್ವರ್
ಸತ್ಯಾಸತ್ಯತೆ ಹೊರಬರಲಿರಾಜ್ಯ, ಜಿಲ್ಲೆ, ಕ್ಷೇತ್ರದ ಜನಕ್ಕೆ ಇದು ಪ್ರಶ್ನೆಯಾಗಿ ಉಳಿಯಬಾರದು ಹಾಗಾಗಿ ಇದರ ನಿಷ್ಪಕ್ಷಪಾತ ತನಿಖೆಯಾಗಬೇಕು, ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ದೂರು ನೀಡಿದ್ದು ಇದರ ಹಿಂದಿನ ಸತ್ಯಾಸತ್ಯತೆಯು ಹೊರಬರಲಿ ಎಂಬುದೇ ನಮ್ಮ ಉದ್ದೇಶವಾಗಿದೆ. ಹೂ ಎಸೆಯುವವರಿಗೆ ಕಲ್ಲು ಇರೋದು ಗೊತ್ತಾಗುತ್ತೆ, ಪೊಲೀಸರಿಗೆ ತನಿಖೆ ಮಾಡುವಂತೆ ತಿಳಿಸಿದ್ದೇನೆ ಎಂದು ಪರಮೇಶ್ವರ್ ಹೇಳಿದರು.
ಡ್ರಾಮಾ ಮಾಡುವ ಅಗತ್ಯವಿಲ್ಲಪರಮೇಶ್ವರ್ ಅವರಿಗೆ ಕಲ್ಲೇಟು ಬಿದ್ದಿಲ್ಲ ಅದು ಡ್ರಾಮಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಒಂದೂವರೆ ಇಂಚು ಗಾಯವಾಗಿದೆ. ಏಟು ತಿಂದಿರೋನು ನಾನು. ವೈದ್ಯರು ಅನುಮತಿ ಕೊಟ್ಟರೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ನನಗೆ ಡ್ರಾಮಾ ಮಾಡುವ ಅಗತ್ಯವಿಲ್ಲ,ಕುಮಾರಸ್ವಾಮಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು ಅದಕ್ಕೆ ಹಾಗೆ ಹೇಳಿದ್ದಾರೆ ಎಂದು ಎಚ್‌ಡಿಕೆಗೆ ತಿರುಗೇಟು ನೀಡಿದರು.
ಮಠಾಧೀಶರ ಭೇಟಿಕಲ್ಲೆಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪರಮೇಶ್ವರ ಅವರು ನಿವಾಸಕ್ಕೆ ರಾಮಕೃಷ್ಣ ಮಠದ ಶ್ರೀ ವಿರೇಶಾನಂದ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ವೀರಬಸವ ಮಹಾಸ್ವಾಮೀಜಿ ಸೇರಿ ಅನೇಕ ಸ್ವಾಮೀಜಿಗಳು, ತುಮಕೂರು ಜಿಲ್ಲೆಯ ಕಾಂಗ್ರೆಸ್ ನಾಯಕರಾದ ರಾಜಣ್ಣ, ಷಡಕ್ಷರಿ, ಇಕ್ಬಾಲ್ ಅಹಮ್ಮದ್, ಗ್ರಾಮಾಂತರ ಅಭ್ಯರ್ಥಿ ಷಣ್ಮಖಪ್ಪ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.