ಡಾ.ಸಿ. ರಾಘವೇಂದ್ರ ರಾವ್ ನಿಧನ
ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲದಲ್ಲಿ ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾಗಿದ್ದ  (ನಿವೃತ್ತ) ಡಾ.ಸಿ. ರಾಘವೇಂದ್ರ ರಾವ್, (84) ಸೋಮವಾರ ನಿಧನರಾಗಿದ್ದಾರೆ.
ಭೌತಶಾಸ್ತ್ರದಲ್ಲಿ ಪರಿಣಿತ ಹೊದಿದ್ದ ಇವರು ವಿದ್ಯಾರ್ಥಿಗಳಿಗೆ  ಪ್ರೀತಿ ಮತ್ತು ಉತ್ಸಾಹದಿಂದ ಬೋಧನೆ ಮಾಡುತ್ತಿದ್ದರು. ಪಿಎಚ್‌ಡಿ ಮಾಡುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು.
ಹಲವಾರು ನಿಯತಕಾಲಿಕಗಳಿಗೆ  ವೈಜ್ಞಾನಿಕ ವಿಷಯಗಳ ಕುರಿತು ಹಲವು ಲೇಖನಗಳನ್ನು ಬರೆದಿದ್ದಾರೆ.
ಮೃತರು ಪತ್ನಿ ಓರ್ವ ಪತ್ರನನ್ನು ಅಗಲಿದ್ದಾರೆ. ಮೃತರ ಅತ್ಯಕ್ರಿಯೆ  ಚಾಮರಾಜಪೇಟೆಯ ಚಿತಾಗಾರದಲ್ಲಿ ಇಂದು  ಮಧ್ಯಾಹ್ನ 2 ಗಂಟೆಗೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.