ದಂಪತಿ ಸಮೇತ ಆಗಮಿಸಿ ಮತ ಚಲಾಯಿಸಿದ ಸಚಿವ ವಿ.ಸೋಮಣ್ಣ
ಚಾಮರಾಜನಗರ:ಚಾಮರಾಜನಗರದಲ್ಲಿ ಮೊದಲ ಬಾರಿ ದಂಪತಿ ಸಮೇತ ಆಗಮಿಸಿ ಸಚಿವ ವಿ.ಸೋಮಣ್ಣ ಅವರು ಮತದಾನ ಮಾಡಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿ.ಸೋಮಣ್ಣ ಅವರು, ನಗರದ ಪೇಟೆ ಪ್ರೈಮರಿ ಶಾಲೆಯ ಬೂತ್ ನಂ 74ರಲ್ಲಿ ಮತ ದಾ‌ನ ಮಾಡಿದರು.
ಮತಗಟ್ಟೆಗೆ ಕುಟುಂಬ ಸಮೇತ ಆಗಮಿಸಿದ ವಿ.ಸೋಮಣ್ಣ ಸರದಿ‌ ಸಾಲಿನಲ್ಲಿ ನಿಂತು ಮತ ಚಲಾವಣೆ ‌ಮಾಡಿ ಗಮನ ಸೆಳೆದರು.
ಚಾಮರಾಜನಗರದ 74 ವರ್ಷದ ಮಧುಸೂಧನ್‌ ಎನ್ನುವ ಹೆಸರಿನ ವೃದ್ಧರೊಬ್ಬರು ನಡೆಯಲಾಗದೇ ವೀಲ್ ಚೇರ್‌ನಲ್ಲಿ ಮತದಾನ ಮಾಡಿ ಗಮನ ಸೆಳೆದಿದ್ದಾರೆ.
ಜಿಲ್ಲೆಯ ಸಂತೇಮರಹಳ್ಳಿ ವೃತ್ತ ಸಮೀಪದ ಮತಗಟ್ಟೆಯಲ್ಲಿ ಇವಿಎಂ ಕೈಕೊಟ್ಟಿದ್ದು, ಮತದಾರರು ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ.