ಗೋಲ್ಡನ್ ಗ್ಲೀಮ್ಸ್ ಕಾಲೇಜು ಸಂಸ್ಥಾಪಕ ಮುನಿಕೃಷ್ಣಗೆ ಪಿತೃವಿಯೋಗ
ಚಿಕ್ಕಬಳ್ಳಾಪುರ:ನಗರದ ಗೋಲ್ಡನ್ ಗ್ಲೀಮ್ಸ್ ಪಿಯು ಮತ್ತು ಪದವಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರು, ಕಾಲೇಜಿನ ಪ್ರಾಂಶುಪಾಲರಾದ ಸಿಎಂ.ಮುನಿಕೃಷ್ಣ ಅವರ ತಂದೆ ಚಿಕ್ಕಮುನಿಯಪ್ಪ(೮೪) ವಯೋಸಹಜ ಖಾಯಿಲೆಯಿಂದ ವಿಧಿವಶವಾಗಿದ್ದಾರೆ.
ತಾಲೂಕಿನ ಅಂಗಟ್ಟ ಗ್ರಾಮದಲ್ಲಿ ಗುರುವಾರ ಹಿಂದೂ ಧಾರ್ಮಿಕ ಪದ್ಧತಿಯಂತೆ ಸಂಜೆ ಅಂತ್ಯಸಂಸ್ಕಾರ ಮಾಡಲಾಯಿತು. ಸ್ನೇಹಿತರು,ಬಂಧುಬಳಗ,ವಿದ್ಯಾರ್ಥಿಗಳು, ಉಪನ್ಯಾಸಕರು,ಹಾಗೂ ಗ್ರಾಮಸ್ಥರು ಅಂತಿಮ ದರ್ಶನ ಪಡೆದರು.