ಬೆಂಗಳೂರಿನಲ್ಲಿ ತನ್ನ 100ನೇ ಎಥರ್ ಗ್ರಿಡ್ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಎಥರ್ ಎನರ್ಜಿ
• ಬನಶಂಕರಿಯ ಥರ್ಡ್ ವೇವ್ ಕಾಫಿಯಲ್ಲಿ 100ನೇ ಎಥರ್ ಗ್ರಿಡ್ ಫಾಸ್ಟ್ ಚಾರ್ಜರ್ ಅನ್ನು ಸ್ಥಾಪಿಸಲಾಗಿದೆ• ಎಥರ್ ಎನರ್ಜಿ ಬೆಂಗಳೂರಿನಲ್ಲಿ 100 ಫಾಸ್ಟ್ ಚಾಜಿರ್ಂಗ್ ಸ್ಟೇಷನ್ಗಳನ್ನು ಸ್ಥಾಪಿಸಿದ ಮೊದಲ ಓಇಎಂ ಆಗಿದೆ
ಬೆಂಗಳೂರು:ಭಾರತದ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಸಂಸ್ಥೆಯಾದ ಎಥರ್ ಎನರ್ಜಿ ಬೆಂಗಳೂರಿನಲ್ಲಿ ತನ್ನ 100 ನೇ ಎಥರ್ ಗ್ರಿಡ್ ಸ್ಥಾಪನೆಯನ್ನು ಘೋಷಿಸಿದೆ. ಎಥರ್ ಈಗ ನಗರದಲ್ಲಿ ಅತಿ ಹೆಚ್ಚು ಎಥರ್ ಗ್ರಿಡ್ನ ಇವಿ ಫಾಸ್ಟ್ ಚಾಜಿರ್ಂಗ್ ಸ್ಟೇಷನ್ಗಳನ್ನು ಹೊಂದಿದಂತಾಗಿದೆ. ಬನಶಂಕರಿಯಲ್ಲಿರುವ ಥರ್ಡ್ ವೇವ್ ಕಾಫಿಯಲ್ಲಿ ಫಾಸ್ಟ್ ಚಾಜಿರ್ಂಗ್ ಸ್ಟೇಷನ್ ಅಳವಡಿಸಲಾಗಿದೆ. ಇದರ ಜತೆಗೆ ಎಥರ್ ಎನರ್ಜಿಯು ಥರ್ಡ್ ವೇವ್ ಕಾಫಿ ರೋಸ್ಟರ್ಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಭಾರತದಲ್ಲಿನ ತಮ್ಮ ಮಳಿಗೆಗಳಲ್ಲಿ ಫಾಸ್ಟ್ ಚಾಜಿರ್ಂಗ್ ಸ್ಟೇಷನ್ಗಳನ್ನು ಸ್ಥಾಪಿಸುತ್ತದೆ.
ಆರಂಭದಿಂದಲೂ, ಇವಿ ದ್ವಿಚಕ್ರ ವಾಹನಗಳ ಉತ್ಪಾದನೆಯೊಂದಿಗೆ, ಎಥರ್ ಎನರ್ಜಿಯು ದೃಢವಾದ ಚಾಜಿರ್ಂಗ್ ನೆಟ್ವರ್ಕ್ ಅನ್ನು ನಿರ್ಮಿಸುವತ್ತ ಗಮನಹರಿಸಿದೆ. ಕಂಪನಿಯು 85 ಕ್ಕೂ ಅಧಿಕ ನಗರಗಳಲ್ಲಿ 1300 ಕ್ಕೂ ಹೆಚ್ಚು ಚಾಜಿರ್ಂಗ್ ಸ್ಟೇಷನ್ಗಳನ್ನು ಸ್ಥಾಪಿಸಿದೆ, ಈ ಮೂಲಕ ಇದು ದ್ವಿಚಕ್ರ ವಾಹನಗಳಿಗೆ ಭಾರತದ ಅತಿದೊಡ್ಡ ವೇಗದ ಚಾಜಿರ್ಂಗ್ ನೆಟ್ವರ್ಕ್ ಎನಿಸಿದೆ. ಎಥರ್ ಎನರ್ಜಿಯ ಮೊಟ್ಟಮೊದಲ ಗ್ರಿಡ್ ಅನ್ನು ಅವರ ತವರು ನೆಲವಾದ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು ಮತ್ತು 100 ನೇ ಚಾಜಿರ್ಂಗ್ ಮೂಲ ಸೌಕರ್ಯವನ್ನು ಪ್ರಾರಂಭಿಸುವುದು ಎಥರ್ ಎನರ್ಜಿಯ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ನಗರದ ಎಲ್ಲ ವಲಯಗಳು ಮತ್ತು ಪ್ರದೇಶಗಳನ್ನು ಒಳಗೊಳ್ಳುವ ರೀತಿಯಲ್ಲಿ ಚಾಜಿರ್ಂಗ್ ಮೂಲಸೌಕರ್ಯ ವನ್ನು ಸ್ಥಾಪಿಸಲಾಗಿದೆ. ಎಥರ್ ಗ್ರಿಡ್ ಬೆಂಗಳೂರಿನಿಂದ ವಾರಾಂತ್ಯದ ಜನಪ್ರಿಯ ತಾಣವಾದ ನಂದಿ ಹಿಲ್ಸ್ಗೆ ಕೂಡಾ ವಿಸ್ತರಿಸಿದೆ. ನಂದಿ ಬೆಟ್ಟಕ್ಕೆ ಹೋಗುವ ಮಾರ್ಗದ ಉದ್ದಕ್ಕೂ ನಾಲ್ಕು ಚಾಜಿರ್ಂಗ್ ಪಾಯಿಂಟ್ಗಳನ್ನು ಸ್ಥಾಪಿಸಲಾಗಿದೆ.
ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಎಥರ್ ಎನರ್ಜಿಯ ಮುಖ್ಯ ವ್ಯಾಪಾರ ಅಧಿಕಾರಿ ರವನೀತ್ ಫೋಕೆಲಾ, “ನಮ್ಮ ತವರು ನಗರವಾದ ಬೆಂಗಳೂರಿನಲ್ಲಿ ನಮ್ಮ 100ನೇ ಎಥರ್ ಗ್ರಿಡ್ ಫಾಸ್ಟ್ ಚಾರ್ಜರ್ ಅನ್ನು ಸ್ಥಾಪಿಸಲು ಮತ್ತು ಇವಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮುನ್ನಡೆ ಸಾಧಿಸಿರುವುದಕ್ಕೆ ನಾವು ಸಂತೋಷಪಡುತ್ತೇವೆ. ನಮ್ಮ ವೇಗವಾಗಿ ಬೆಳೆಯುತ್ತಿರುವ ಚಾಜಿರ್ಂಗ್ ನೆಟ್ವರ್ಕ್ ಅಥರ್ ಸಮುದಾಯಕ್ಕೆ ಮಾತ್ರವಲ್ಲದೆ ದೊಡ್ಡ ಪ್ರಮಾಣದಲ್ಲಿ ಇವಿ ಪರಿಸರ ವ್ಯವಸ್ಥೆಗೆ ತಡೆ ರಹಿತ ಚಾಜಿರ್ಂಗ್ ಅನುಭವವನ್ನು ಒದಗಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಬೆಂಗಳೂರು ಇವಿ ಅಳವಡಿಕೆಯಲ್ಲಿ ಮುಂಚೂಣಿ ಯಲ್ಲಿದೆ ಮತ್ತು ಚಾಜಿರ್ಂಗ್ ಮೂಲಸೌಕರ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮುನ್ನಡೆ ಸಾಧಿಸಿದೆ. ಬೆಂಗಳೂರಿ ನಲ್ಲಿ ಎಥರ್ ಗ್ರಿಡ್ನ ಅಸ್ತಿತ್ವವನ್ನು ಸ್ಥಾಪಿಸುವಲ್ಲಿ ನಮ್ಮನ್ನು ನಂಬಿದ ಮತ್ತು ನಮಗೆ ಬೆಂಬಲ ನೀಡಿದ ಯುಟಿಲಿಟಿ ಪೂರೈಕೆ ದಾರರು, ಹೋಸ್ಟ್ಗಳು ಮತ್ತು ವ್ಯವಹಾರಗಳಿಗೆ ನಾವು ಅಪಾರವಾಗಿ ಕೃತಜ್ಞರಾಗಿರುತ್ತೇವೆ” ಎಂದು ಹೇಳಿದರು.
ಆರಂಭದಿಂದ ಇದುವರೆಗೆ ನಗರದಾದ್ಯಂತ ಚಾಜಿರ್ಂಗ್ ಗ್ರಿಡ್ಗಳು ಒಟ್ಟು 250,000 ಗಂಟೆಗಳ ಚಾಜಿರ್ಂಗ್ ಸಮಯವನ್ನು ಸುಗಮಗೊಳಿಸಿವೆ, ಪ್ರತಿ ಚಾಜಿರ್ಂಗ್ ಸ್ಟೇಷನ್ನಲ್ಲಿ ಸರಾಸರಿ 40 ನಿಮಿಷಗಳನ್ನು ಕಳೆಯಲಾಗುತ್ತದೆ. 13,000 ಅನನ್ಯ ಸ್ಕೂಟರ್ಗಳನ್ನು ಚಾರ್ಜ್ ಮಾಡಲಾಗಿದೆ ಮತ್ತು ಎಥರ್ ಮಾಲೀಕರು ಹೆಚ್ಚಾಗಿ ಭೇಟಿ ನೀಡುವ ಅಗ್ರ ಐದು ಗ್ರಿಡ್ ಸ್ಥಳಗಳೆಂದರೆ ಗೋ ನೇಟಿವ್, ಸ್ಮಾರ್ಟ್ಟ್ರಾನ್ ಆಟೊಮೇಷನ್ಸ್, ಫ್ಯಾಬ್ ಕೆಫೆ, ಇನ್ಫಿನಿಟಿಯಾ ಮತ್ತು ದಿ ಚಾಕೊಲೇಟ್ ರೂಮ್
ಜೊತೆಗೆ, ಎಥರ್ ಎನರ್ಜಿ ಹಲವಾರು ಬ್ರ್ಯಾಂಡ್ಗಳೊಂದಿಗೆ ಸುಸ್ಥಿರ ಚಲನಶೀಲತೆಯನ್ನು ಉತ್ತೇಜಿಸಲು ಒಪ್ಪಂದ ಮಾಡಿ ಕೊಂಡಿದೆ. ಬೆಸ್ಕಾಮ್, ಸಂಗೀತಾ ಮೊಬೈಲ್ಸ್, ಡೆಕಾಥ್ಲಾನ್, ಮೆಟ್ರೋ ಕ್ಯಾಶ್ ಮತ್ತು ಕ್ಯಾರಿ, ಥರ್ಡ್ ವೇವ್ ಕಾಫಿ ರೋಸ್ಟರ್ಸ್, ಎಚ್ಪಿಸಿಎಲ್, ಚಾಯ್ ಪಾಯಿಂಟ್, ಮತ್ತು ಪ್ರೆಸ್ಟೀಜ್ ಗ್ರೂಪ್ – ಯುಬಿ ಸಿಟಿ ಈ ಪೈಕಿ ಹೆಗ್ಗುರುತುಗಳಾಗಿವೆ. ಭಾರತದಲ್ಲಿ ವಿನ್ಯಾಸಗೊಳಿಸಲಾದ ಮತ್ತು ನಿರ್ಮಿಸಲಾಗಿದ ಎಥರ್ ಗ್ರಿಡ್ ಇಂದು, ಇದು ದೇಶದಲ್ಲಿ ಇವಿ ದ್ವಿಚಕ್ರ ವಾಹನಗಳ ಗಳಿಗೆ ಅತ್ಯಂತ ವ್ಯಾಪಕವಾದ ವೇಗದ ಚಾಜಿರ್ಂಗ್ ನೆಟ್ವರ್ಕ್ ಆಗಿದೆ, ಪ್ರಸ್ತುತ ಸ್ಥಾಪನೆಗಳಲ್ಲಿ ಶೇಕಡ 60 ರಷ್ಟು ಶ್ರೇಣಿ- 2 ಮತ್ತು ಶ್ರೇಣಿ- 3 ನಗರಗಳಲ್ಲಿದೆ. ಕಂಪನಿಯ ಚಾಜಿರ್ಂಗ್ ನೆಟ್ವರ್ಕ್ ವೇಗದ ಚಾರ್ಜರ್ಗಳನ್ನು ಹೊಂದಿದ್ದು, ಎಥರ್ 450 ಎಕ್ಸ್ ಸ್ಕೂಟರ್ ಅನ್ನು ಕೇವಲ 50 ನಿಮಿಷಗಳಲ್ಲಿ ಶೇಕಡ 80 ವರೆಗೆ ಚಾರ್ಜ್ ಮಾಡಬಹುದು.
ಎಥರ್ ಎನರ್ಜಿ ತನ್ನ ಪ್ರಮುಖ ಸ್ಕೂಟರ್ಗಳ ಸುಲಭ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ವಿಸ್ತರಣೆಯ ಹುಮ್ಮಸ್ಸಿನಲ್ಲಿದೆ ಮತ್ತು ಶ್ರೇಣಿಯ ವಿಶ್ವಾಸವನ್ನು ಹೆಚ್ಚಿಸಲು ಮತ್ತು ಇವಿ ಗಳಿಗೆ ತೊಂದರೆ- ಮುಕ್ತ ಪರಿವರ್ತನೆಗೆ ಅನುಕೂಲವಾಗುವಂತೆ 2023 ರ ಅಂತ್ಯದ ವೇಳೆಗೆ 2500 ಕ್ಕೂ ಅಧಿಕ ವೇಗದ ಚಾಜಿರ್ಂಗ್ ಗ್ರಿಡ್ಗಳನ್ನು ಸ್ಥಾಪಿಸಲು ಯೋಜಿಸಿದೆ. ಎಥರ್ ಎನರ್ಜಿ ಇತ್ತೀಚೆಗೆ ಎಥರ್ ನೈಬರ್ಹುಡ್ ಚಾಜಿರ್ಂಗ್ ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿತು. ಈ ವಿಶಿಷ್ಟ ಚಾಜಿರ್ಂಗ್ ಪರಿಹಾರವು ಕಾರ್ಪೊರೇಟ್ ಕಟ್ಟಡಗಳು, ತಂತ್ರಜ್ಞಾನ ಉದ್ಯಾನವನಗಳು ಮತ್ತು ವಸತಿ ಸಂಕೀರ್ಣಗಳಂತಹ ಅರೆ ಸಾರ್ವಜನಿಕ ಸ್ಥಳಗಳಲ್ಲಿ ಚಾಜಿರ್ಂಗ್ ಸ್ಟೇಷನ್ಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ. ಇದು ಗ್ರಾಹಕರಿಗೆ ಎಲ್ಲ ಸಂಭಾವ್ಯ ಸ್ಥಳಗಳಲ್ಲಿ ಚಾಜಿರ್ಂಗ್ ಅನ್ನು ಸುಲಭ ಗೊಳಿಸುತ್ತದೆ ಮತ್ತು ಲಭ್ಯವಾಗುವಂತೆ ಮಾಡುತ್ತದೆ ಹಾಗೂ ವಿದ್ಯುತ್ ಚಲನಶೀಲತೆಗೆ ಬದಲಾಯಿಸುವ ವಿಶ್ವಾಸವನ್ನು ನೀಡುತ್ತದೆ.