ತುಮಕೂರು ನಗರದಲ್ಲಿ ಮತದಾನ ಮಾಡಿದ ಘಟಾನುಘಟಿಗಳು….
ತುಮಕೂರು:ಸಂಸದ ಜಿ.ಎಸ್.ಬಸವರಾಜು ತುಮಕೂರು ನಗರದಲ್ಲಿ ತಮ್ಮ ಪತ್ನಿಯೊಂದಿಗೆ ಮತದಾನ ಮಾಡಿದರು.
ನಗರದ ಸ್ವತಂತ್ರ ಅಭ್ಯರ್ಥಿ ಸೊಗಡು ಶಿವಣ್ಣ ತಮ್ಮ ಪತ್ನಿಯೊಂದಿಗೆ ತಮ್ಮ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್ ತಮ್ಮ ಮತವನ್ನು ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ತಮ್ಮ ಮತವನ್ನು ಚಲಾಯಿಸಿದರು.
ತುಮಕೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್‌ಗೌಡ ತಮ್ಮ ಮತ ಚಲಾಯಿಸಿದರು. ತುಮಕೂರಿನ ಜೆಡಿಎಸ್ ಮುಖಂಡ ಎಸ್.ಷಫಿಅಹಮದ್ ತಮ್ಮ ಮತವನ್ನು ಚಲಾಯಿಸಿದರು. ತುಮಕೂರು ತಾಲೂಕು ಗೂಳೂರಿನ ಪಿಂಕ್ ಮತಕೇಂದ್ರದಲ್ಲಿ ವಯೋವೃದ್ಧ ತಾಯಿಯನ್ನು ಮಗ ಎತ್ತಿಕೊಂಡು ಬಂದು ಮತಚಲಾಯಿಸಿದರು.
ತುಮಕೂರಿನ ಮತ ಕೇಂದ್ರದಲ್ಲಿ ವಿಕಲಚೇತನ ಮಗನನ್ನು ತಂದೆ ಕರೆತಂದು ಮತ ಚಲಾಯಿಸಿದರು. ಚಿಕ್ಕನಾಯಕನಹಳ್ಳಿ ತಾಲೂಕಿನ ಸ್ವಗ್ರಾಮ ಜೆ.ಸಿ.ಪುರದ ಮತಗಟ್ಟೆ ಸಂಖ್ಯೆ ೨೫೪ ರಲ್ಲಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ.ಸಿ. ಮಾಧುಸ್ವಾಮಿಯವರು ತಮ್ಮ ಕುಟುಂಬದವ ರೊಡನೆ ಮತ ಚಲಾಯಿಸಿದರು.
ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಮತಚಲಾವಣೆ ಮಾಡಿದರು. ತಿಪಟೂರಿನ ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮೀಜಿ ಬುಧವಾರ ತಮ್ಮ ಮತಗಟ್ಟೆ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಿದರು.
ತಿಪಟೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ. ನಾಗೇಶ್ ಕುಟುಂಬ ಸಮೇತರಾಗಿ ಬಂದು ಮತಚಲಾಯಿಸಿದರು.ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಷಡಕ್ಷರಿ ಕುಟುಂಬ ಸಮೇತರಾಗಿ ನಗರದ ಬಾಲಕಿಯರ ಪ್ರೌಢಶಾಲೆ ಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.ತಿಪಟೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್ ತಮ್ಮ ಹುಟ್ಟೂರಾದ ತಾಲೂಕಿನ ಕೊನೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬುಧವಾರ ಮತ ಚಲಾಯಿಸಿದರು.


