ನಾಳೆ ಶಿಲಾ ವಿಗ್ರಹ ಪ್ರತಿಷ್ಠಾಪನೆ, ಧಾರ್ಮಿಕ ಸಮಾರಂಭ
ಗುಬ್ಬಿ:ತಾಲೂಕಿನ ನಿಟ್ಟೂರು ಹೋಬಳಿಯ ಅದಲಗೆರೆ ಗ್ರಾಮದ ಅರಳಿ ಮರದ ಶ್ರೀ ಆಂಜನೇಯ ಸ್ವಾಮಿಯವರ ನೂತನ ದೇವಾಲಯ ಹಾಗೂ ಶಿಲಾ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ಅದಲಗೆರೆ ಗ್ರಾಮಸ್ಥರಿಂದ ದಿನಾಂಕ ಮೇ13ರಂದು ಬೆಳಗ್ಗೆ 7:30ಕ್ಕೆ  ಗ್ರಾಮ ದೇವತೆ ಶ್ರೀ ಆದಿಶಕ್ತಿ ಮಾರಮ್ಮ ದೇವಿಯ ಕಳಸ. ಶ್ರೀ ಕಲ್ಲೇಶ್ವರ ಸ್ವಾಮಿ. ಶ್ರೀ ಕದುರೆ ನರಸಿಂಹ ಸ್ವಾಮಿ ಹಾಗೂ ಬಂಡನಹಳ್ಳಿ ಶ್ರೀ ಕಾಳಘಟ್ಟಮ್ಮ ದೇವಿ ಆಗಮನದೊಂದಿಗೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.