ಸೋಲನುಭವಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ತಿಪಟೂರು:ರಾಜ್ಯ ಸರ್ಕಾರದಲ್ಲಿ ಹಿಜಾಬ್, ಪಠ್ಯ ಪುಸ್ತಕದಂತಹ ವಿಚಾರದಲ್ಲಿ ಅತೀ ಹೆಚ್ಚು ಚರ್ಚೆಗೆ ಕಾರಣವಾಗಿದ್ದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅತಿ ಹೆಚ್ಚು ಅಂತರಗಳಿoದ ಸೋಲನುಭವಿಸದ್ದಾರೆ.
ಬೊಮ್ಮಾಯಿ ಸರ್ಕಾರದಲ್ಲಿ ಶಿಕ್ಷಣ ಸಚಿªರಾಗಿದ್ದÀ ಬಿ.ಸಿ ನಾಗೇಶ್ ಮುಖ್ಯಮಂತ್ರಿ ನಂತರದಲ್ಲಿ ಚರ್ಚೆಗೆ ಕಾರಣವಾಗಿದ್ದ ಸಚಿವ. ಸಚಿವ ಸ್ಥಾನ ದೊರೆತ ನಂತರ ರಾಜ್ಯಕ್ಕೆ ಹೆಚ್ಚು ಆದ್ಯತೆ ನೀಡಿ ಕ್ಷೇತ್ರದ ಜನತೆಯೊಂದಿಗೆ ಸಂಪರ್ಕ ಕಡಿಮೆ ಆದ ಹಿನ್ನಲೆ ಯೊಂದಿಗೆ ತಾಲ್ಲೂಕಿನ ಹಿಂದೂ ಪರ ಸಂಘಟನೆಗಳ ಕಡೆಗಣನೆ, ವೀರಶೈವ ಲಿಂಗಾಯಿತ ಸಮಾಜದ ವಿರೋಧ, ತೆಂಗು ಬೆಳೆಗಾರರ ವಿರೋಧ, ಬಸವೇಶ್ವರ ಪುತ್ಥಳಿ ಸ್ಥಾಪನೆ ವಿಚಾರ, ಭಾಜಪ ಕಾರ್ಯಕರ್ತರ ಕಡೆಗಣನೆ ಹಾಗೂ ನಗರ ಪ್ರಾಥಿಕಾರಕ್ಕೆ (ಟೂಡಾ) ಅಧ್ಯಕ್ಷ ಸ್ಥಾನ ಖಾಲಿಯಿರುವುದು ಪ್ರಮುಖ ಕಾರಣವಾಗಿದೆ. ಬಿ.ಸಿ ನಾಗೇಶ್ ಅಪ್ತ ಸಹಾಯಕ ಮುರುಳಿ ವರ್ತನೆ, ಕಾರ್ಯಕರ್ತರ ಜೊತೆ ಹೊಂದಾಣಿಕೆ ಕೊರತೆ ಸೋಲಿಗೆ ಕಾರಣವಾಗಿದೆ.