ಬೆಂಗಳೂರಿನ ವೆಗಾ ಸಿಟಿ ಮಾಲ್‍ನಲ್ಲಿ ತಾಯಂದಿರ ದಿನದ ಸಂಭ್ರಮ
ಟಾಟಾ ಟೀ ಗೋಲ್ಡ್ ಕೇರ್ ಸಂವಾದಾತ್ಮಕ ಫೋಟೋ ಬೂತ್ ಮತ್ತು ವೈಯಕ್ತಿಕ ಅನುಭವ ಮೂಲಕ ಗ್ರಾಹಕ ತೊಡಗಿಸುವಿಕೆ
ಬೆಂಗಳೂರಿನ ವೆಗಾ ಮಾಲ್ ವಿಶೇಷ ಅನುಭವ ಉಡುಗೊರೆಯಾಗಿ ನೀಡುವ ಮೂಲಕ ನಿಮ್ಮ ತಾಯಿಗೆ ಪ್ರೀತಿ ವ್ಯಕ್ತಪಡಿಸಲು ಟಾಟಾ ಟೀ ಗೋಲ್ಡ್ ಕೇರ್ ಉತ್ತೇಜನ
ಬೆಂಗಳೂರು:ಜಗತ್ತಿನಲ್ಲಿ ಅತ್ಯಂತ ಸಹಜ ಮತ್ತು ನೈಜ ಕಾಳಜಿಯು ತಾಯಿಯ ಹೃದಯದಿಂದ ಮಾತ್ರವೇ ಬರುತ್ತದೆ ಎಂದು ಹೇಳಲಾಗುತ್ತದೆ. ಚಹಾ ವರ್ಗದಲ್ಲಿ ಮೊಟ್ಟ ಮೊದಲ ಬಾರಿಗೆ, ಈ ತಾಯಂದಿರ ದಿನದಂದು, ಟಾಟಾ ಟೀಯ ವೈವಿಧ್ಯಮಯ ಉತ್ಪನ್ನ ಶ್ರೇಣಿಯನ್ನು ಪ್ರಮುಖ ಬ್ರಾಂಡ್ ಆದ ಟಾಟಾ ಟೀ ಗೋಲ್ಡ್ ಕೇರ್ ತನ್ನ ಹೊಸ ಅಭಿಯಾನ #ಮೈಟರ್ನ್‍ಟೂಕೇರ್ ಮೂಲಕ ತಾಯಂದಿರ ದಿನವನ್ನು ಆಚರಿಸಲು ಉದ್ದೇಶಿಸಿದೆ.
ಇದರ ಭಾಗವಾಗಿ, ಬ್ರ್ಯಾಂಡ್ ಇಂದು ಬೆಂಗಳೂರಿನ ವೆಗಾ ಸಿಟಿ ಮಾಲ್‍ನಲ್ಲಿ ಸಂಪೂರ್ಣ ತಂತ್ರಜ್ಞಾನ ಚಾಲಿತ ತಳಹಂತದ ಮಾಲ್ ಸಕ್ರಿಯಗೊಳಿಸುವಿಕೆಯೊಂದಿಗೆ ಗ್ರಾಹಕರನ್ನು ತೊಡಗಿಸಿಳ್ಳುವ ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ ಫೋಟೋ ಬೂತ್ ಮತ್ತು ಕೆಫೆ ತರಹದ ಸೆಟ್ ಅಪ್ ಜೊತೆಗೆ ಕಿಯೋಸ್ಕ್ ಸ್ಥಾಪನೆ ಕೂಡಾ ಒಳಗೊಂಡಿತ್ತು. ತಮ್ಮ ತಾಯಂದಿರೊಂದಿಗೆ ಮಾಲ್‍ಗಳಿಗೆ ಭೇಟಿ ನೀಡಿದ ಗ್ರಾಹಕರು ಟಾಟಾ ಟೀ ಗೋಲ್ಡ್ ಕೇರ್ ಸ್ಟಾಲ್‍ನಲ್ಲಿ “ಚಾಯ್ ಪೆ ಚರ್ಚಾ” ಸಂವಾದ ನಡೆಸಿದರು ಮತ್ತು ಟಾಟಾ ಟೀ ಗೋಲ್ಡ್ ಕೇರ್ ಮದರ್ಸ್ ಡೇ ಸೀಮಿತ ಆವೃತ್ತಿಯ ಪ್ಯಾಕ್ ಅನ್ನು ಹೋಲುವ ಫೋಟೋ ಕ್ಲಿಕ್ ಮಾಡಿದರು.
ಇಂಥ ವಿಶಿಷ್ಟ ರೀತಿಯ ಸೀಮಿತ ಆವೃತ್ತಿಯ ಪ್ಯಾಕ್‍ಗಳು ತಾಯಿ ಮತ್ತು ಆಕೆಯ ಮಗುವಿನ ನಡುವಿನ ನಿಜವಾದ ಮತ್ತು ಸಹಜ ಕಾಳಜಿಯ ಬಂಧವನ್ನು ಸಂಭ್ರಮಿಸುವ ಗುರಿ ಹೊಂದಿದೆ ಮತ್ತು ಬ್ರ್ಯಾಂಡ್‍ನ ‘ಕಾಳಜಿ’ ಪ್ರತಿಪಾದನೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಟಾಟಾ ಟೀ ಗೋಲ್ಡ್ ಕೇರ್ ಪ್ರತಿಯೊಬ್ಬರ ಯೋಗಕ್ಷೇಮವನ್ನು ನೋಡಿಕೊಳ್ಳಲು ಸಹಾಯ ಮಾಡುತ್ತದೆ ಏಕೆಂದರೆ ಇದು ತುಳಸಿ, ಶುಂಠಿ, ಬ್ರಾಹ್ಮಿ, ಏಲಕ್ಕಿ ಮತ್ತು ಮೂಲೇಟಿ (ಅತಿಮಧುರ) ಯಂತಹ 5 ನೈಸರ್ಗಿಕ ಪದಾರ್ಥಗಳ ಉತ್ತಮತೆಯೊಂದಿಗೆ ಕಣಿವೆಯಲ್ಲಿ ಬೆಳೆದ ಚಹಾಗಳ ಸೊಗಸಾದ ಮಿಶ್ರಣವಾಗಿದೆ.
ತಾಯಂದಿರ ದಿನದ ಸಂದರ್ಭದಲ್ಲಿ, ಬ್ರ್ಯಾಂಡ್ ವಿಶೇಷ ಮೈಕ್ರೋಸೈಟ್ ಅನ್ನು (ತಿತಿತಿ.ಖಿಚಿಣಚಿಖಿeಚಿಉoಟಜಅಚಿಡಿ.ಛಿ) ನಿರ್ಮಿಸಿದೆ. ಇದರಲ್ಲಿ ಭಾಗವಹಿಸುವವರು ತಮ್ಮ ತಾಯಿಗಾಗಿ ವಿಶೇಷ ಸಂದೇಶದೊಂದಿಗೆ ತಮ್ಮ ಚಿತ್ರದ ಎಂಟ್ರಿ ಸಲ್ಲಿಸ ಬಹುದು. ಮೊದಲು ಸ್ವೀಕರಿಸಿದ ಅತ್ಯುತ್ತಮ 1000 ಎಂಟ್ರಿಗಳು ಟಾಟಾ ಟೀ ಗೋಲ್ಡ್ ಕೇರ್‍ನ ವಿಶೇಷ ಅಗತ್ಯತೆಗೆ ಅನುಗುಣವಾಗಿ ಸಿದ್ಧಪಡಿಸಿದ ಕಸ್ಟಮೈಸ್ಡ್ ಪ್ಯಾಕ್ ಅನ್ನು ಗೆಲ್ಲುತ್ತವೆ. ಈ ಪ್ಯಾಕ್‍ಗಳನ್ನು ನೇರವಾಗಿ ಗ್ರಾಹಕರ ಮನೆಗೆ ತಲುಪಿಸಲಾಗುತ್ತದೆ (2-4 ವಾರಗಳಲ್ಲಿ). ಪ್ರಚಾರವನ್ನು ಮತ್ತಷ್ಟು ವರ್ಧಿಸಲು, ಬ್ರ್ಯಾಂಡ್ ತಮ್ಮ ಸ್ನೇಹಿತರು ಮತ್ತು ಅನುಯಾಯಿಗಳ ನಡುವೆ ಉಪಕ್ರಮ ದ ಬಗ್ಗೆ ಪ್ರಚಾರ ಮಾಡಲು ಕಾಜಲ್ ಅಗರ್ವಾಲ್, ಸಮೀರಾ ರೆಡ್ಡಿ, ಅನುಷ್ಕಾ ಸೇನ್, ಜನ್ನತ್ ಜುಬೇರ್ ಮತ್ತು ಸಲೋನಿ ಗೌರ್ ಅವರಂತಹ ಚಲನಚಿತ್ರ ಮತ್ತು ಟಿವಿ ಸೆಲೆಬ್ರಿಟಿಗಳು ಸೇರಿದಂತೆ ಪ್ರಸಿದ್ಧ ಸಮಾಜ ಮಾಧ್ಯಮ ಪ್ರಭಾವಿಗಳ ಜತೆ ಸಹಯೋಗ ಹೊಂದಿದೆ.
ಅಭಿಯಾನ ಮತ್ತು ಅದರ ಉದ್ದೇಶದ ಕುರಿತು ಮಾತನಾಡಿದ ಟಾಟಾ ಗ್ರಾಹಕ ಉತ್ಪನ್ನಗಳ (ಭಾರತ ಮತ್ತು ದಕ್ಷಿಣ ಏಷ್ಯಾ) ಪ್ಯಾಕೇಜ್ಡ್ ಪಾನೀಯಗಳ ವಿಭಾಗದ ಅಧ್ಯಕ್ಷ ಪುನೀತ್ ದಾಸ್, “ಟಾಟಾ ಟೀ ಗೋಲ್ಡ್ ಕೇರ್‍ನ ಅಭಿಯಾನವು ಈ ಫೋಟೋ ವೈಯಕ್ತೀಕರಿಸಿದ ಟೀ ಪ್ಯಾಕ್‍ಗಳ ಮೂಲಕ ವಿಶೇಷ ತಾಯಿ-ಮಗುವಿನ ಕಾಳಜಿಯ ಬಾಂಧವ್ಯವನ್ನು ಸಂಭ್ರಮಿಸುತ್ತದೆ ಮತ್ತು ಈ ಬಾಂಡ್‍ಗಳ ಶಕ್ತಿ ಮತ್ತು ಕಥೆಗಳನ್ನು ಎತ್ತಿ ತೋರಿಸುತ್ತದೆ. ಪ್ರತಿಯೊಂದು ಪ್ಯಾಕ್ ವಿಶೇಷ ಗೌರವವಾಗಿದೆ ಮತ್ತು ಈ ತಾಯಂದಿರ ಅಚಲ ಶಕ್ತಿಗೆ ಸಲ್ಲಿಸುವ ಗೌರವದ ಪ್ರತೀಕವಾಗಿದೆ.
ಅವರ ಮಗುವಿನ ಬಗೆಗಿನ ಅವರ ಕಾಳಜಿಯು ನೈಜ ಮತ್ತು ಸಹಜ. ಟಾಟಾ ಟೀ ಗೋಲ್ಡ್ ಕೇರ್‍ನಲ್ಲಿ, ಇಂತಹ ಕ್ರಾಂತಿಕಾರಕ ಮತ್ತು ವೈಯಕ್ತೀಕರಿಸಿದ ಅನುಭವಗಳ ಮೂಲಕ ಗ್ರಾಹಕರೊಂದಿಗೆ ತೊಡಗಿಸಿಕೊಳ್ಳುವ ಪ್ರಾಮುಖ್ಯತೆಯನ್ನು ನಾವು ಗುರುತಿಸುತ್ತೇವೆ. ಅನನ್ಯ ವೇರಿಯಬಲ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ಸಂಯೋಜಿಸುವುದು ನಮ್ಮ ಬ್ರ್ಯಾಂಡ್‍ಗೆ ಪ್ರಮುಖ ಕಾರ್ಯವಾಗಿದೆ, ಈ ನಾವೀನ್ಯತೆಯ ಬಗ್ಗೆ ನಾವು ಹೆಮ್ಮೆಪಡುತ್ತದೆ.
ಟ್ರಿಗಾನ್ ಡಿಜಿಪ್ಯಾಕ್ ಪ್ರೈವೇಟ್ ಲಿಮಿಟೆಡ್ ಮತ್ತು ಟ್ರೀ ಡಿಸೈನ್ಸ್‍ನೊಂದಿಗೆ ನಮ್ಮ ತಾಯಂದಿರ ದಿನದ ಅಭಿಯಾನಕ್ಕಾಗಿ ತಮ್ಮ ತಾಯಂದಿರೊಂದಿಗೆ ನೇರ ಗ್ರಾಹಕರ ವಿಶೇಷ ಕ್ಷಣಗಳನ್ನು ತರಲು ಸಹಾಯ ಮಾಡಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಉತ್ಪನ್ನ ಪ್ಯಾಕೇಜಿಂಗ್ ಗ್ರಾಹಕರು ಹೊಂದಿರುವ ಮೊದಲ ಮತ್ತು ಅತ್ಯಂತ ಪ್ರಭಾವಶಾಲಿ ಅಂತರ್ ಕ್ರಿಯೆಯಾಗಿದೆ ಮತ್ತು ಅಂತಹ ದೊಡ್ಡ ಪ್ರಮಾಣದಲ್ಲಿ ಇದನ್ನು ಆವಿಷ್ಕರಿಸುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ ಎನ್ನಲು ನಾವು ಹೆಮ್ಮೆಪಡುತ್ತೇವೆ.
ತಾಯಂದಿರು ತಮ್ಮ ಮಗುವಿನ (ಮಕ್ಕಳ) ನಿಜವಾದ ಮತ್ತು ನೈಸರ್ಗಿಕ ‘ಆರೈಕೆ’ಯನ್ನು ಸಂಭ್ರಮಿಸುವುದು ನಮ್ಮ ತಾಯಂದಿರ ದಿನದ ಅಭಿಯಾನದ ಮುಖ್ಯ ಭಾಗವಾಗಿದೆ ಮತ್ತು ನಮ್ಮ ಸೃಜನಶೀಲತೆಗಳಾದ ಮುದ್ರಣ, ಡಿಜಿಟಲ್, ಸಾಮಾಜಿಕ-ಮಾಧ್ಯಮ, ಹೊರಾಂಗಣ ಅಥವಾ ನೆಲದ ಸಕ್ರಿಯಗೊಳಿಸುವಿಕೆಯ ಸಮ್ಮಿಳನವಾಗಿರುವ ಇದನ್ನು ವಿವಿಧ ಗ್ರಾಹಕ ಟಚ್‍ಪಾಯಿಂಟ್‍ಗಳಲ್ಲಿ ಆಚರಿಸಲಾಗುತ್ತಿದೆ.
ತಳಹಂತದ ಚಟುವಟಿಕೆಯಲ್ಲಿನ ಪ್ರಗತಿಯ ಆವಿಷ್ಕಾರ ಮತ್ತು ಮುಖ್ಯಾಂಶವೆಂದರೆ ಅದು ಸಂಪೂರ್ಣ ವಾಗಿ ತಂತ್ರಜ್ಞಾನ ಚಾಲಿತವಾಗಿದೆ ಮತ್ತು ಯಾವುದೇ ಮಾನವ ಇಂಟರ್ಫೇಸ್ ಫಲಿತಾಂಶವನ್ನು ನಿರ್ದೇಶಿಸುವುದಿಲ್ಲ. ಕಸ್ಟಮೈಸ್ ಮಾಡಿದ ಪ್ಯಾಕ್ ಚಿತ್ರ ಮತ್ತು ಸಂದೇಶವನ್ನು ಎಲ್ಲರಿಗೂ ಗೋಚರಿಸುವಂತೆ ನಂತರ ಮಾಲ್‍ನಲ್ಲಿರುವ ದೊಡ್ಡ ಎಲ್‍ಇಡಿ ಪರದೆಯ ಮೇಲೆ ಸಿಮ್ಯುಲ್‍ಕಾಸ್ಟ್ ಮಾಡಲಾಗುತ್ತದೆ.
ತಾಯಂದಿರ ದಿನದಂದು ಅವರ ತಾಯಂದಿರು ಸೆಲೆಬ್ರಿಟಿಗಳಂತೆ ಭಾವಿಸಲ್ಪಡುತ್ತಾರೆ. ಗ್ರಾಹಕರು ಈ ವಿಶೇಷ ಕ್ಷಣದ ಫೋಟೋ ಗಳು ಮತ್ತು ವೀಡಿಯೊಗಳನ್ನು ತೆಗೆಯಬಹುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳ ಬಹುದು.