ಅಪರೂಪದ ರಿಕೆಟ್ಸಿಯಲ್ ರೋಗ: ಬಾಲಕಿಗೆ ಬೆಂಗಳೂರಿನ ಸ್ಪೆಷಲಿಸ್ಟ್ ಹಾಸ್ಪಿಟಲ್‌ನಲ್ಲಿ ಯಶಸ್ವಿ ಚಿಕಿತ್ಸೆ
ಬೆಂಗಳೂರು:ಬೆಂಗಳೂರಿನ ಸ್ಪೆಷಲಿಸ್ಟ್ ಹಾಸ್ಪಿಟಲ್‌ನಲ್ಲಿ ಅಪರೂಪದ ರಿಕೆಟ್ಸಿಯಲ್ ರೋಗ ಹೊಂದಿದ್ದ 13 ವರ್ಷ ವಯಸ್ಸಿನ ಬಾಲಕಿಗೆ ಯಶಸ್ವಿಯಾಗಿ ಚಿಕಿತ್ಸೆಯಾಗಿದೆ.
ಈ ರೋಗಿಗೆ ಉನ್ನತ ತಾಪಮಾನದ ಜ್ವರ, ನಡುಕ ಇರುವ ಜ್ವರ, ತಲೆನೋವು, ವಾಂತಿ ಮತ್ತು ಹೊಟ್ಟೆನೋವು ಮುಂತಾದ ತೊಂದರೆಗಳಿದ್ದು, ಎಮರ್ಜೆನ್ಸಿ ವಾರ್ಡ್ಗೆ ಸೇರಿಸಲಾಗಿತ್ತು. ಆಕೆಗೆ ಇ-ಕೋಲಿ ಮೂತ್ರನಾಳದ ಸೋಂಕು ಕೂತ ಇತ್ತು. ಅಸಂಬದ್ಧ ಮಾತಿನ ತೊಂದರೆ ಹೊಂದಿದ್ದ ಅವಳಿಗೆ ಡಿಹೈಡ್ರೇಷನ್ ಅಂದರೆ ನಿರ್ಜಲಿಕರಣದ ತೊಂದರೆಯು ಕಾಡಿತ್ತಲ್ಲದೆ, ತುರ್ತು ಚಿಕಿತ್ಸಾ ವಾರ್ಡ್ನಲ್ಲಿ ಆಕೆ ಕುಸಿದು ಬಿದ್ದಿದ್ದಳು. ಸಮಗ್ರ ರಕ್ತ ಪರೀಕ್ಷೆಯಿಂದ ಆಕೆಗೆ ರಿಕೆಟ್ಸಿಯಲ್ ರೋಗ ಇರುವುದು ಕಂಡುಬ0ದಿತ್ತು.
ಮತ್ತಷ್ಟು ವೈದ್ಯಕೀಯ ತನಿಖೆಯ ನಂತರ ಆಕೆ ಇತ್ತೀಚೆಗೆ ಗುಡ್ಡಗಾಡು ಪ್ರದೇಶದಲ್ಲಿ ರಜೆಯ ನಂತರ ಹಿಂದಿರುಗಿದ್ದು, ತಿಳಿದುಬಂದಿತ್ತು. ಮೂತ್ರದ ಪರೀಕ್ಷೆಯಲ್ಲಿ ಆಕೆಗೆ ಇ-ಕೋಲಿ ಯುಟಿಐ ಸೋಂಕು ಇರುವುದು ಕಂಡಿತ್ತು. ಸೂಕ್ತ ಚಿಕಿತ್ಸೆ ನೀಡಿದ ನಂತರ 48 ಗಂಟೆಗಳ ಒಳಗೆ ಸಕಾರಾತ್ಮಕವಾಗಿ ಔಷಧಗಳಿಗೆ ಪ್ರತಿಕ್ರಿಯಿಸಿದ್ದಳಲ್ಲದೆ, ಚೇತರಿಸಿಕೊಳ್ಳಲು ಆರಂಭಿಸಿದ್ದಳು.
“ನಗರಗಳಲ್ಲಿ ಅಸಾಮಾನ್ಯವಾಗಿರುವ ಈ ರೋಗ ಗುಡ್ಡಗಾಡು ಪ್ರದೇಶಗಳಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ ಅಪರೂಪದ ಪ್ರಕರಣವಾಗಿರುತ್ತದೆ. ಸೂಕ್ತ ರೋಗನಿರ್ಣಯ ಕೈಗೊಳ್ಳುವಲ್ಲಿ ವಿಳಂಬವಾದಲ್ಲಿ ಈ ರೋಗಿಗೆ ಹೃದಯ ವೈಫಲ್ಯ, ಮೂತ್ರಪಿಂಡ ವೈಫಲ್ಯ, ಪಿತ್ತಜನಕಾಂಗ ಅಥವಾ ಯಕೃತ್ ವೈಫಲ್ಯ ಹಾಗೂ ಮೆದುಳಿನ ತೊಂದರೆಗಳಾದ ಗೊಂದಲ ಉಂಟಾಗುವುದು, ದಿಕ್ಕು ತೋರದಂತಾಗುವುದು ಅಥವಾ ಕಕ್ಕಾಬಿಕ್ಕಿಯಾಗುವುದು ಮುಂತಾದ ಸಂಕೀರ್ಣ ತೊಂದರೆಗಳಿಗೆ ದಾರಿಯಾಗಬಹುದಿತ್ತು.
ಇದರಿಂದ ಕೋಮ ಸ್ಥಿತಿ ಉಂಟಾಗಬಹುದು ಅಥವಾ ಮರಣ ಸಂಭವಿಸಬಹುದಿತ್ತು. ಮಲೇರಿಯಾ, ಡೆಂಗ್ಯೂ, ಕೋವಿಡ್ ಮತ್ತು ಫ್ಲೂಗಳಲ್ಲಿ ಇರುವಂತಹ ಲಕ್ಷಣಗಳನ್ನೇ ಹೊಂದಿರುವ ರಿಕೆಟ್ಸಿಯಲ್ ರೋಗವನ್ನು ಗುರುತಿಸಿ ರೋಗನಿರ್ಣಯ ಕೈಗೊಳ್ಳುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಈ ರೋಗ ನಗರಗಳಲ್ಲಿ ಕಾಣಿಸದ ಕಾರಣ ಇದಕ್ಕೆ ನಗರದಲ್ಲಿ ಬಹುತೇಕ ಪ್ರಯೋಗಾಲಯ ಗಳು ರೋಗನಿರ್ಣಯದ ಪರೀಕ್ಷೆಗಳನ್ನು ಪೂರೈಸುವುದಿಲ್ಲ. ಆಕೆಯ ಪ್ರವಾಸ ಇತಿಹಾಸವನ್ನು ಆಧರಿಸಿ ರಿಕೆಟ್ಸಿಯಲ್ ರೋಗಕ್ಕಾಗಿ ನಿರ್ದಿಷ್ಟ ಪರೀಕ್ಷೆಗಳು ಮತ್ತು ಹಲವು ಕಾರಣಗಳನ್ನು ವರ್ಜಿಸುವ ಪ್ರಕ್ರಿಯೆಯ ಮೂಲಕ ಬ್ಯಾಕ್ಟಿರಿಯಾ ಸೋಂಕನ್ನು ನಾವು ಗುರುತಿಸಲು ಸಾಧ್ಯವಾಗಿತ್ತು’’ ಎಂದು ಸ್ಪೆಷಲಿಸ್ಟ್ ಹಾಸ್ಪಿಟಲ್‌ನ ಮಕ್ಕಳ ರೋಗತಜ್ಞರಾದ ಡಾ. ಶ್ರೀರಾಮ್ ಬೋನು ಅವರು ಹೇಳಿದರು.
ಜಪಾನಿ ಮೂಲದ ಓರಿಯಂಟಿಯಾ ತ್ಸುತ್ಸುಗಮುಶಿ ಎಂಬ ಬ್ಯಾಕ್ಟಿರಿಯಾ ಪ್ರಕಾರದಿಂದ ಉಂಟಾಗುವ ತೊಂದರೆ ಸ್ಕçಬ್ ಟೈಫಸ್ ಆಗಿರುತ್ತದೆ. ತ್ಸುತ್ಸುಗ ಎಂದರೆ ಅಸ್ವಸ್ಥತೆ ಮತ್ತು ಮುಶಿ ಎಂದರೆ ಕೀಟಗಳು ಎಂಬ ಅರ್ಥ ಬರುತ್ತದೆ. ಉನ್ನತ ತಾಪಮಾನದ ಜ್ವರ, ಗಂದೆಗಳು ಮುಂತಾದ ಲಕ್ಷಣಗಳನ್ನು ಇದು ಹೊಂದಿರುತ್ತದೆ ಅಲ್ಲದೆ, ಕೇಂದ್ರ ನರವ್ಯವಸ್ಥೆ, ಹೃದಯ ರಕ್ತನಾಳ ವ್ಯವಸ್ಥೆ, ಮೂತ್ರಪಿಂಡ, ಉಸಿರಾಟ, ಪಚನಾಂಗ ವ್ಯವಸ್ಥೆಗಳ ಮೇಲೆ ಇದು ಪರಿಣಾಮ ಉಂಟು ಮಾಡುತ್ತದೆ. ಸೋಂಕು ಹೊಂದಿರುವ ಕೀಟಗಳು ಕಚ್ಚುವುದರಿಂದ ಈ ರೋಗ ಹರಡುತ್ತದೆ. ಸ್ಕçಬ್ ಟೈಫಸ್ ತೊಂದರೆಯನ್ನು ಹೊಂದಿರುವ ಲಾರ್ವಾಗಳು ಇಲಿಗಳ ದೇಹದ ಮೇಲ್ಮೆöÊನಲ್ಲಿ ಕಂಡುಬರುತ್ತವೆ. ಭಾರತದಲ್ಲಿ ರಿಕೆಟ್ಸಿಯಲ್ ರೋಗದಿಂದ ಮೃತಪಡುವವರ ದರ ಶೇ.38ರಷ್ಟು ಇರುತ್ತದೆ.
ಈ ರೋಗಿಯನ್ನು ಈಗ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಅವರು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.