ಮೈಗ್ರೇನ್‌ ಎಂದುಕೊಂಡಿದ್ದ ವ್ಯಕ್ತಿಯಲ್ಲಿ ಅಪರೂಪದ ವಿಪ್ಪಲ್‌ ಕಾಯಿಲೆ (ನರಮಂಡಲದ) ಪತ್ತೆ: ಫೋರ್ಟಿಸ್‌ ವೈದ್ಯರಿಂದ ಯಶಸ್ವಿ ಚಿಕಿತ್ಸೆ
ಬೆಂಗಳೂರು:ಒಂದು ಮಿಲಿಯನ್‌ ಜನರ ಪೈಕಿ ಒಬ್ಬರಲ್ಲಿ ಮಾತ್ರ ಕಂಡು ಬರುವ “ಸೆಂಟ್ರಲ್ ನರ್ವಸ್ ಸಿಸ್ಟಮ್ (ಸಿಎನ್‌ಎಸ್‌) ವಿಪ್ಪಲ್‌ ಕಾಯಿಲೆಯಿಂದ ಬಳಲುತ್ತಿದ್ದ 66 ವರ್ಷದ ವ್ಯಕ್ತಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡ ಲಾದೆ.
ಕೋಲ್ಕತ್ತಾ ಮೂಲಕ 66 ವರ್ಷದ ವ್ಯಕ್ತಿಯು ಸುಮಾರು ವರ್ಷಗಳಿಂದ ಈ ಕಾಯಿಲೆಯಿಂದ ತಲೆನೋವಿಗೆ ಒಳಗಾಗಿ ಬಳಲು ತ್ತಿದ್ದರು. ಮೈಗ್ರೇನ್‌ಗೆ ಬೇಕಾದ ಚಿಕಿತ್ಸೆಪಡೆದರೂ ಪ್ರಯೋಜನವಾಗಿರಲಿಲ್ಲ. ಫೊರ್ಟಿಸ್‌ ಆಸ್ಪತ್ರೆಯಲ್ಲಿ ನರವಿಜ್ಞಾನಿ ಡಾ. ಚಂದ್ರನ್ ಜ್ಞಾನಮುತ್ತು ಅವರ ತಂಡ ಈ ರೋಗದ ಮೂಲವನ್ನು ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡಲಾಗಿದೆ.
ಈ ಕುರಿತು ಮಾತನಾಡಿದ ಡಾ. ಚಂದ್ರನ್‌, ಮೆದುಳಿನ ಕೇಂದ್ರ ನರಮಂಡದಲ್ಲಿ ವಿಪ್ಪಲ್‌ ಎನ್ನುವ ಒಂದು ವೈರಸ್‌ ಈ ನರಮಂಡಲದ ಮೇಲೆ ದಾಳಿ ಮಾಡಿ ವಿಪ್ಪಲ್‌ ಕಾಯಿಲೆ ಉಂಟು ಮಾಡಲಿದೆ. ಇದು ಅತ್ಯಂತ ಅಪರೂಪದ ಕಾಯಿಲೆಯಾಗಿದ್ದು, ಒಂದು ಮಿಲಿಯನ್‌ ಜನರಲ್ಲಿ ಕೇವಲ ಒಬ್ಬರಲ್ಲಿ ಮಾತ್ರ ಕಂಡು ಬರಲಿದೆ. ಈ ಕಾಯಿಲೆ ಕುರಿತು ಸಾಕಷ್ಟು ಆಸ್ಪತ್ರೆ ಹಾಗೂ ವೈದ್ಯರಿಗೆ ಮಾಹಿತಿ ಇಲ್ಲ. ಹೀಗಾಗಿ ಈ ಕಾಯಿಲೆಯನ್ನು ಪತ್ತೆ ಹಚ್ಚುವುದು ಸಹ ಸವಾಲಿನ ಕೆಲಸ. 66 ವರ್ಷದ ವ್ಯಕ್ತಿಯೊಬ್ಬರು, ತಮ್ಮ ಮೆದುಳಿನಲ್ಲಾಗುತ್ತಿರುವ ಬದಲಾವಣೆ ಹಾಗೂ ನೋವಿನಿಂದ ಆಸ್ಪತ್ರೆ ಸೇರಿದ್ದರೂ ಇದು ವಿಪ್ಪಲ್‌ ಕಾಯಿಲೆ ಎಂದು ತಿಳಿಯಲು ಸಾಧ್ಯವಾಗಿಲ್ಲ. ತಲೆ ನೋವು ಹೆಚ್ಚಾಗುತ್ತಿದ್ದರಿಂದ ಇದು ಮೈಗ್ರೇನ್‌ ಎಂದು ತಪ್ಪಾಗಿ ಅರ್ಥೈಸಲಾಗಿತ್ತು.
ಆದರೆ, ಈ ಕಾಯಿಲೆ ಕಾಲಕ್ರಮೇಣ ಹೇಚ್ಚಾಗುತ್ತಾ, ಮೆದುಳನ್ನು ಆವರಿಸಿಕೊಳ್ಳಲು ಆರಂಭಿಸಿದೆ. ವಿಪರೀತ ತಲೆ ನೋವು, ದೈಹಿಕ ದೌರ್ಬಲ್ಯದಿಂದ ಕುಗ್ಗುತ್ತಾ ಹೋಗಿದ್ದಾರೆ. ಸುಮಾರು ೮ ವರ್ಷಗಳ ನರಳಾಟದ ಬಳಿಕ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ನಾವುಗಳು ಸೂಕ್ತ ಪರೀಕ್ಷೆ ನಡೆಸಿದ ಬಳಿಕ ಈ ವಿಲಕ್ಷಣ ಕಾಯಿಲೆ ಕಂಡು ಬಂದಿದೆ.
ಕೂಡಲೇ ಅವರಿಗೆ ಇಂಟ್ರಾವೆನಸ್‌ ಸೇಫ್ಟ್ರಿಯಾಕ್ಸೋನ್‌ ವೈರಲ್‌ ಇಂಕ್ಷನ್‌ನನ್ನು ಪ್ರತಿ ೧೨ ಗಂಟೆಗೊಮ್ಮೆ ನೀಡುತ್ತಾ ಬರಲಾಗಿದೆ. ಈ ಇಂಜಕ್ಷನ್‌ನನ್ನು ಭಯಾನಕ ವೈರಸ್‌ಗಳ ಕೊಲ್ಲುವಿಕೆಗೆ ನೀಡಲಾಗುತ್ತದೆ. ಹೀಗೆ ನಾಲ್ಕು ದಿನಗಳ ಕಾಲ ಸತತವಾಗಿ ನೀಡಲಾ ಯಿತು. ೮ ವರ್ಷಗಳಿಂದ ಈ ಸೋಂಕಿನಿಂದ ಬಳಲುತ್ತಿದ್ದ ಇವರು, ಈ ಗುಣಮುಖರಾಗುತ್ತಿದ್ದಾರೆ. ಈ ಸೋಂಕನ್ನೂ ಪತ್ತೆ ಹಚ್ಚದೇ ಹಾಗೇ ಬಿಟ್ಟಿದ್ದರೆ ಜೀವಕ್ಕೆ ಮಾರಕವಾಗುತ್ತಿತ್ತು ಎಂದು ವಿವರಿಸಿದರು.