ಎಲ್ಲ ಗ್ರಾಮಗಳಲ್ಲೂ ನೀರಿನ ಎಟಿಎಂ ಅಳವಡಿಕೆಗೆ ಬೋಸನ್ ವೈಟ್ ವಾಟರ್ ಮತ್ತು ಎಸ್ ಜಿಬಿಎಸ್ ಉನ್ನತಿ ಪ್ರತಿಷ್ಠಾನ ಸಹಭಾಗಿತ್ವ
– ಎಕ್ಸಾನ್ ಮೊಬಿಲ್ ಸರ್ವಿಸಸ್ ಆಂಡ್ ಟೆಕ್ನಾಲಜಿ ಪ್ರೈ.ಲಿ. ಮತ್ತು ಬ್ರಾಡ್ರಿಡ್ಜ್ ಸಂಸ್ಥೆಯ ಸಿಎಸ್ಆರ್ ಉಪಕ್ರಮದಡಿ ಈ ಯೋಜನೆಗೆ ಹಣಕಾಸು ನೆರವು– ಎನ್ ಜಿಒ ಎಸ್ ಜಿಬಿಎಸ್ ಉನ್ನತಿ ಪ್ರತಿಷ್ಠಾನ ಮತ್ತು ನೀರಿನ ಸ್ಟಾರ್ಟಪ್ ಬೋಸನ್ ವೈಟ್ ವಾಟರ್ ನಿಂದ ಅನುಷ್ಠಾನ
ಬೆಂಗಳೂರು:ಬೆಂಗಳೂರು ಮೂಲದ ಬೋಸನ್ ವೈಟ್ ವಾಟರ್, ರಾಜ್ಯದ ಮೂಲೆ ಮೂಲೆಗೂ ಸುರಕ್ಷಿತ ಮತ್ತು ಸ್ವಚ್ಛ ಕುಡಿಯುವ ನೀರನ್ನು ಒದಗಿಸುವ ಮಹದುದ್ದೇಶದಿಂದ ಎನ್ ಜಿಒ ಎಸ್ ಜಿಬಿಎಸ್ ಉನ್ನತಿ ಪ್ರತಿಷ್ಠಾನದೊಂದಿಗೆ ಪಾಲುದಾರಿಕೆ ಮಾಡಿಕೊಂಡು, ಕರ್ನಾಟಕದ ಗ್ರಾಮಗಳಾದ್ಯಂತ ನೀರಿನ ಎಟಿಎಂಗಳನ್ನು ಅಳವಡಿಸುವ ಕಾರ್ಯವನ್ನು ಮಾಡುತ್ತಿದೆ.
ಈ ಯೋಜನೆಗೆ ಎಕ್ಸಾನ್ ಮೊಬಿಲ್ ಮತ್ತು ಬ್ರಾಡ್ರಿಡ್ಜ್ ಸಂಸ್ಥೆಗಳು ತಮ್ಮ ಸಿಎಸ್ಆರ್(ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಉಪಕ್ರಮದ ಅನ್ವಯ ಹಣಕಾಸು ನೆರವನ್ನು ಒದಗಿಸುತ್ತಿವೆ. ಈವರೆಗೆ, ಬೆಂಗಳೂರು ಹೊರವಲಯದ ಮಾಲೂರು ಮತ್ತು ದೊಡ್ಡಬಳ್ಳಾಪುರದ ಗ್ರಾಮಗಳಲ್ಲಿ 10 ನೀರಿನ ಎಟಿಎಂ ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಸುಮಾರು 1500+ ಕುಟುಂಬ ಗಳು ಶುದ್ಧ ಕುಡಿಯುವ ನೀರನ್ನು ಹೊಂದಲು ಸಾಧ್ಯವಾಗಿದೆ.
ಉನ್ನತಿ ಪ್ರತಿಷ್ಠಾನ ಎನ್ನುವುದು ವಿವಿಧ ರಾಜ್ಯಗಳಲ್ಲಿನ ಹಿಂದುಳಿದಿರುವ ಯುವಕರಿಗೆ ಕೌಶಲ್ಯ ನೀಡುವಂಥ ಸಂಸ್ಥೆಯಾಗಿದೆ. ಈ ಸಂಸ್ಥೆಯು ಯುವಕರಿಗೆ ಅತ್ಯುತ್ತಮ ಕೌಶಲ್ಯವನ್ನು ಒದಗಿಸಿ ಅವರನ್ನು ವೃತ್ತಿಪರರನ್ನಾಗಿ ಸಜ್ಜುಗೊಳಿಸುತ್ತದೆ ಮಾತ್ರವಲ್ಲ, 35 ದಿನಗಳೊಳಗಾಗಿ ಕಾರ್ಪೊರೇಟ್ ಕಂಪನಿಗಳಲ್ಲಿ ಖಚಿತ ಉದ್ಯೋಗವನ್ನು ಕಲ್ಪಿಸಿಕೊಡುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2022-23ರಲ್ಲಿ ಈ ಸಂಸ್ಥೆಯು ಸುಮಾರು 28,000 ಯುವಕರಿಗೆ ತರಬೇತಿ ನೀಡಿದೆ.
ಇದಿಷ್ಟೇ ಅಲ್ಲದೆ, ಗ್ರಾಮೀಣ ಸಮುದಾಯಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ನೀರಿನ ಎಟಿಎಂಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆಯೂ ಗ್ರಾಮಗಳಿಗೆ ಮಾಹಿತಿ, ನೆರವು ಒದಗಿಸುತ್ತದೆ. ಇತ್ತೀಚೆಗಷ್ಟೇ, ಮಾಲೂರು ಮತ್ತು ದೊಡ್ಡಬಳ್ಳಾಪುರದ ಕೆಲವು ಗ್ರಾಮ ಪಂಚಾಯತ್ ಗಳು ಉನ್ನತಿ ಪ್ರತಿಷ್ಠಾನವನ್ನು ಸಂಪರ್ಕಿಸಿ, ತಮ್ಮ ಸಮುದಾಯಗಳಿಗೆ, ಊರುಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸಲು ಸಹಾಯ ಮಾಡುವಂತೆ ಕೋರಿಕೊಂಡವು.
ಇಲ್ಲಿನ ಕೆಲವೊಂದು ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಫ್ಲೋರೈಡ್ ನಿಂದಾಗಿ ನೀರು ಕಲುಷಿತಗೊಂಡಿದ್ದು, ಹಲವಾರು ಕುಟುಂಬಗಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ, ಉನ್ನತಿ ಪ್ರತಿಷ್ಠಾನವು ಕೂಡಲೇ, ಇಂಥ ಪ್ರಾಜೆಕ್ಟ್ ಗಳಲ್ಲಿ ವಿಶೇಷವಾಗಿ ಶಾಲೆಗಳಲ್ಲಿ ಜಲ ಎಟಿಎಂ ಅಳವಡಿಕೆಯ ಅನುಭವ ಹೊಂದಿರುವಂಥ ಬೋಸನ್ ವೈಟ್ ವಾಟರ್ ಕಂಪನಿಯನ್ನು ಸಂಪರ್ಕಿಸಿ, ಮಾಹಿತಿ ತಿಳಿಸಿತು.
ತಕ್ಷಣವೇ ಸ್ಪಂದಿಸಿದ ಬೋಸನ್ ವೈಟ್ ವಾಟರ್, ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಸುರಕ್ಷಿತ ನೀರು ಒದಗಿಸುವ ತಮ್ಮ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮತ್ತು ಈ ಪ್ರಯತ್ನದಲ್ಲಿ ತನ್ನದೇ ಆದ ಕೊಡುಗೆ ನೀಡಲು ನಿರ್ಧರಿಸಿತು. ಉನ್ನತಿ ಪ್ರತಿಷ್ಠಾನವು ಪ್ರಸ್ತಾಪಿಸಿದ ಸ್ಥಳವನ್ನು ಪರಿಶೀಲನೆ ನಡೆಸಿದ ಬಳಿಕ, ಬೋಸನ್ ವೈಟ್ ವಾಟರ್ ಸಂಸ್ಥೆಯು ಆಯಾ ಪಂಚಾಯತ್ ಗಳಲ್ಲಿ ನೀರಿನ ಎಟಿಎಂಗಳನ್ನು ಅಳವಡಿಸಿ, ವಾಟರ್ ಎಟಿಎಂ ಕಾರ್ಡ್ ಗಳನ್ನು ಒದಗಿಸುತ್ತದೆ.
ಪ್ರತಿಯೊಂದು ಕುಟುಂಬಕ್ಕೂ 50 ರೂ.ಗಳನ್ನು ಮುಂಚಿತವಾಗಿಯೇ ಹಾಕಿರುವಂಥ ವಾಟರ್ ಕಾರ್ಡ್ ಗಳನ್ನು ವಿತರಿಸಲಾಗು ತ್ತದೆ. ಆ ಕಾರ್ಡನ್ನು ಸ್ವೈಪ್ ಮಾಡಿ, 20 ಲೀಟರ್ ಗಳಷ್ಟು ನೀರನ್ನು ಪಡೆಯಬಹುದು. ಈ ಕಾರ್ಯಕ್ರಮದ ಸುಸ್ಥಿರತೆಯನ್ನು ದೃಢಪಡಿಸಿಕೊಳ್ಳುವ ಉದ್ದೇಶದಿಂದ, 20 ಲೀಟರ್ ನೀರಿನ ಒಂದು ಕ್ಯಾನ್ ಗೆ ತಲಾ 5 ರೂ.ಗಳ ಕನಿಷ್ಠ ಶುಲ್ಕ ವಿಧಿಸಲಾಗುತ್ತದೆ. ಈ ಯೋಜನೆಗೆ ಎಕ್ಸಾನ್ ಮೊಬಿಲ್ ಮತ್ತು ಬ್ರಾಡ್ರಿಡ್ಜ್ ಹಣಕಾಸು ಬೆಂಬಲವನ್ನು ಒದಗಿಸಿದೆ.
ಈ ಉಪಕ್ರಮದ ಕುರಿತು ಮಾತನಾಡಿದ ಉನ್ನತಿ ಪ್ರತಿಷ್ಠಾನದ ನಿರ್ದೇಶಕರಾದ ರಮೇಶ್ ಸ್ವಾಮಿ ಅವರು, “ಈ ಯೋಜನೆಗೆ ಆರ್ಥಿಕ ನೆರವು ನೀಡಿರುವ ಎಕ್ಸಾನ್ ಮೊಬಿಲ್ ಮತ್ತು ಬ್ರಾಡ್ರಿಡ್ಜ್ ಗೆ ನಾವು ಧನ್ಯವಾದಗಳನ್ನು ಹೇಳಬಯಸುತ್ತೇವೆ. ಒಂದು ಸಮುದಾಯದ ಮತ್ತು ಸಮಾಜದ ಒಳಿತಿಗಾಗಿ ಸಾಮಾಜಿಕ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ಹೇಗೆ ಕೈಜೋಡಿಸಿಕೊಂಡು ಕೆಲಸ ಮಾಡಬಹುದು ಎನ್ನುವುದಕ್ಕೆ ಈ ಯೋಜನೆಯೇ ಅತ್ಯುತ್ತಮ ಉದಾಹರಣೆಯಾಗಿದೆ.
ನಮ್ಮ ಈ ಸಹಭಾಗಿತ್ವದ ಪ್ರಯತ್ನದಿಂದಾಗಿ, ಗ್ರಾಮೀಣ ಸಮುದಾಯಗಳ ಹೆಚ್ಚು ಹೆಚ್ಚು ಜನರು ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರನ್ನು ಪಡೆಯುವಂತಾಗಿದೆ. ಇದು ಅವರ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಗೂ ಅತ್ಯಗತ್ಯವಾದದ್ದು. ಭಾರತ ದಾದ್ಯಂತ ಮತ್ತಷ್ಟು ಗ್ರಾಮೀಣ ಪ್ರದೇಶಗಳಿಗೆ ಈ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬೋಸನ್ ವೈಟ್ ವಾಟರ್ ನೊಂದಿಗೆ ಕೈಜೋಡಿಸಿ ಕೆಲಸ ಮಾಡಲು ನಾವು ಎದುರುನೋಡುತ್ತಿದ್ದೇವೆ” ಎಂದರು.
ಯೋಜನೆ ಕುರಿತು ಮಾತನಾಡಿದ ಬೋಸನ್ ವೈಟ್ ವಾಟರ್ ಸಿಇಒ ಮತ್ತು ಸಹ-ಸ್ಥಾಪಕರಾದ ವಿಕಾಸ್ ಬ್ರಹ್ಮಾವರ್, “ಬೋಸನ್ ವೈಟ್ ವಾಟರ್ ನಲ್ಲಿ, ನಮ್ಮ ತಂತ್ರಜ್ಞಾನಗಳನ್ನು ಬಳಸಿಕೊಂಡು ಜನರೆಲ್ಲರಿಗೂ ಶುದ್ಧ ಕುಡಿಯುವ ನೀರು ಸುಲಭವಾಗಿ ಸಿಗುವಂತೆ ಮಾಡುವುದೇ ನಮ್ಮ ಪ್ರಮುಖ ಗುರಿಯಾಗಿದೆ. ಸ್ವಚ್ಛ ಕುಡಿಯುವ ನೀರನ್ನು ಪಡೆಯಲು ಕಷ್ಟಪಡುತ್ತಿರುವಂಥ ಸಮುದಾಯಗಳಲ್ಲಿ ಹೊಸ ಬದಲಾವಣೆಯನ್ನು ತರುವಂಥ ಅವಕಾಶಗಳಿಗಾಗಿ ನಾವು ಎದುರು ನೋಡುತ್ತಿರುತ್ತೇವೆ.
ಉನ್ನತಿ ಪ್ರತಿಷ್ಠಾನದೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದು ನಮಗೆ ಬಹಳ ಸಂತೋಷವಾಗಿದೆ. ಭವಿಷ್ಯದಲ್ಲೂ ಇಂತಹ ಇನ್ನಷ್ಟು ಯೋಜನೆಗಳನ್ನು ಜಂಟಿಯಾಗಿ ಅನುಷ್ಠಾನ ಮಾಡಲು ನಾವು ಬಯಸುತ್ತೇವೆ. ಮುಂದಿನ ಕೆಲವೇ ತಿಂಗಳು ಗಳಲ್ಲಿ, ಕರ್ನಾಟಕದ ಅನೇಕ ಗ್ರಾಮಗಳಲ್ಲಿ ಮತ್ತಷ್ಟು ನೀರಿನ ಎಟಿಎಂಗಳನ್ನು ಅಳವಡಿಸಲಾಗುತ್ತದೆ” ಎಂದು ತಿಳಿಸಿದರು.
ಬೋಸನ್ ವೈಟ್ ವಾಟರ್ ಬಗ್ಗೆಬೋಸನ್ ವೈಟ್ ವಾಟರ್ ಎನ್ನುವುದು ನೀರಿನ ಉಪಯುಕ್ತತೆಗೆ ಸಂಬಂಧಿಸಿದ ಕಂಪನಿಯಾಗಿದೆ. ಕೈಗಾರಿಕೆಗಳು, ಐಟಿ ಪಾರ್ಕ್ ಗಳು ಮತ್ತು ಅಪಾರ್ಟ್ ಮೆಂಟ್ ಸಮುದಾಯಗಳು ತಮ್ಮ ತ್ಯಾಜ್ಯದ ನೀರನ್ನು ಮರುಬಳಕೆ ಮಾಡುವ ವಿಧಾನಗಳನ್ನು ಬದಲಾಯಿಸುವ ಉದ್ದೇಶದಿಂದಲೇ ಈ ಕಂಪನಿಯನ್ನು ಸ್ಥಾಪಿಸಲಾಯಿತು.
ಈ ಕಂಪನಿಯು 2011ರಲ್ಲಿ ವಿಕಾಸ್ ಬ್ರಹ್ಮಾವರ ಮತ್ತು ಗೌತಮನ್ ದೇಸಿಂಗ್ ಅವರಿಂದ ಅಸ್ತಿತ್ವಕ್ಕೆ ಬಂತು. ಬೋಸನ್ ವೈಟ್ ವಾಟರ್ ಸಂಸ್ಥೆಯು ತ್ಯಾಜ್ಯ ಸಂಸ್ಕರಣಾ ಘಟಕಗಳ ನೀರನ್ನು ಕುಡಿಯಲು ಯೋಗ್ಯವಾದ ಉತ್ತಮ ಗುಣಮಟ್ಟದ ನೀರಾಗಿ ಪರಿವರ್ತಿಸುತ್ತದೆ. ಈ ನೀರನ್ನು ಗೃಹಬಳಕೆಗೆ, ವಾಣಿಜ್ಯ ಕಟ್ಟಡಗಳಲ್ಲಿನ ಕೇಂದ್ರೀಕೃತ ಹವಾ ನಿಯಂತ್ರಣ ವ್ಯವಸ್ಥೆಗೆ ಹಾಗೂ ಕುಡಿಯಲು ಕೂಡ ಬಳಸಬಹುದಾಗಿದೆ.