ಭಾರತದಲ್ಲಿ 60 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಿದ ಅಮೆಜಾನ್‌ ಫ್ರೆಶ್‌
• ಈ ನಗರಗಳ ಗ್ರಾಹಕರು ಹಣ್ಣುಗಳು, ತರಕಾರಿಗಳು ಮತ್ತು ದೈನಂದಿನ ದಿನಸಿ ಸಾಮಗ್ರಿಗಳ ವಿಶಾಲ ವಿಧದ ಉತ್ಪನ್ನಗಳನ್ನು ತಮ್ಮ ಆದ್ಯತೆಯ ಸಮಯದಲ್ಲಿ ಡೆಲಿವರಿ ಪಡೆದುಕೊಳ್ಳಬಹುದು• ರೂ. 249 ಕ್ಕಿಂತ ಹೆಚ್ಚಿನ ಎಲ್ಲ ಆರ್ಡರ್‌ಗಳ ಮೇಲೆ ಉಚಿತ ಶಿಪ್ಪಿಂಗ್*• ಎಲ್ಲ ದಿನಸಿ ಅಗತ್ಯಗಳ ಮೇಲೆ ಸೂಪರ್ ವ್ಯಾಲ್ಯೂ ಆಫರ್‌ಗಳು• ವೈಯಕ್ತಿಕಗೊಳಿಸಿದ ವಿಜೆಟ್‌ಗಳು, ಪುನಃ ಖರೀದಿಸಿ ಆಯ್ಕೆ, ಉಳಿಸಿದ ಆದ್ಯತೆಗಳು ಇತ್ಯಾದಿ ಅನುಕೂಲಕರ ವೈಶಿಷ್ಟ್ಯಗಳು
ಬೆಂಗಳೂರು:ಭಾರತದಾದ್ಯಂತ 60 ಕ್ಕೂ ಹೆಚ್ಚು ನಗರಗಳಿಗೆ ಫುಲ್ ಬಾಸ್ಕೆಟ್ ದಿನಸಿ ಸೇವೆಯನ್ನು ಅಮೆಜಾನ್‌ ಫ್ರೆಶ್ ವಿಸ್ತರಿಸಿರುವುದಾಗಿ ಅಮೆಜಾನ್ ಇಂಡಿಯಾ ಇಂದು ಪ್ರಕಟಿಸಿದೆ. ಅಮೆಜಾನ್‌ ಫ್ರೆಶ್ ಆಪ್ ಇನ್ ಆಪ್‌ ಅನುಭವವು ಹಣ್ಣುಗಳು, ತರಕಾರಿಗಳು ಶೈತ್ಯೀಕರಿಸಿದ ಉತ್ಪನ್ನಗಳು, ಬ್ಯೂಟಿ, ಬೇಬಿ, ವೈಯಕ್ತಿಕ ಪ್ರಸಾದನ ಮತ್ತು ಸಾಕು ಪ್ರಾಣಿ ಉತ್ಪನ್ನಗಳು ಸೇರಿದಂತೆ ದಿನಸಿ ಉತ್ಪನ್ನಗಳ ವಿಶಾಲ ಶ್ರೇಣಿಯನ್ನು ಒದಗಿಸಲಿದೆ. ಈ ನಗರಗಳ ಗ್ರಾಹಕರು ಆಕರ್ಷಕ ವಾರಾಂತ್ಯದ ಮಾರಾಟದ ಮೂಲಕ ಎಲ್ಲ ದಿನಸಿ ಅಗತ್ಯಗಳ ಮೇಲೆ ವ್ಯಾಲ್ಯೂ ಆಫರ್‌ಗಳನ್ನು ಆನಂದಿಸಬಹುದಾಗಿದೆ. ಪ್ರತಿ ತಿಂಗಳ 1 ರಿಂದ 7 ರ ವರೆಗೆ ಸೂಪರ್ ವ್ಯಾಲ್ಯೂ ಡೇಸ್ ನಡೆಯಲಿದ್ದು, ತಮ್ಮ ಆದ್ಯತೆಯ ಸಮಯದಲ್ಲಿ ಡೆಲಿವರಿ ಪಡೆಯಬಹುದು.
ಅಮೆಜಾನ್‌ ಫ್ರೆಶ್‌ನ ಮುಖ್ಯಸ್ಥ ಶ್ರೀಕಾಂತ್‌ ಶ್ರೀ ರಾಮ್ ಮಾತನಾಡಿ “ಗ್ರಾಹಕರಿಗೆ ವಿಶಾಲವಾದ ಆಯ್ಕೆ, ಹೋಲಿಕೆ ಇಲ್ಲದ ಮೌಲ್ಯ ಮತ್ತು ಅನುಕೂಲವನ್ನು ಒದಗಿಸುವ ಒನ್ ಸ್ಟಾಪ್ ಆನ್‌ಲೈನ್ ಡೆಸ್ಟಿನೇಶನ್ ಅಮೆಜಾನ್‌ ಫ್ರೆಶ್ ಆಗಿದೆ. ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಲು ನಾವು ಬದ್ಧವಾಗಿದ್ದೇವೆ ಮತ್ತು ‘ಎಲ್ಲವೂ’ ಮತ್ತು ‘ಎಲ್ಲ ದಿನವೂ’ ಸ್ಟೋರ್‌ ಆಗುವುದಕ್ಕೆ ನಾವು ಬದ್ಧತೆಯನ್ನು ಹೊಂದಿದ್ದೇವೆ. ಈ ವಿಸ್ತರಣೆಯೊಂದಿಗೆ, ಭಾರತದಾದ್ಯಂತ ಇರುವ ಗ್ರಾಹಕರು ಉತ್ತಮ ಗುಣಮಟ್ಟದ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿ ಮಾಡಬಹುದು ಮತ್ತು ತಮ್ಮ ಮನೆ ಬಾಗಿಲಿನಲ್ಲೇ ಡೆಲಿವರಿ ಪಡೆಯಬಹುದು. ಮಾವಿನ ಹಣ್ಣುಗಳು ಮತ್ತು ಬೇಸಿಗೆ ಕಾಲದ ಅಗತ್ಯ ಉತ್ಪನ್ನಗಳಿಗೆ ಈ ಋತುವಿನಲ್ಲಿ ನಾವು ಭಾರಿ ಬೇಡಿಕೆಯನ್ನು ಸ್ವೀಕರಿಸಿದ್ದೇವೆ ಮತ್ತು ಇಡೀ ದೇಶದಲ್ಲಿ ಗ್ರಾಹಕರಿಗೆ ಉತ್ತಮ ಆನ್‌ಲೈನ್‌ ಶಾಪಿಂಗ್ ಅನುಭವವನ್ನು ಒದಗಿಸಲು ನಾವು ಹೀಗೆಯೇ ಗಮನ ಕೇಂದ್ರೀಕರಿಸಿರುತ್ತೇವೆ.”
. ಉಚಿತ ಶಿಪ್ಪಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಅಂದರೆ, ರೂ. 249 ಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ ಉಚಿತ* ಡೆಲಿವರಿ ನೀಡುತ್ತದೆ. ಗ್ರಾಹಕರು ಸೂಪರ್‌ ಸೇವರ್ ಡೀಲ್‌ಗಳ ಪ್ರಯೋಜನವನ್ನೂ ಪಡೆಯಬಹುದಾಗಿದೆ. ಇಡೀ ತಿಂಗಳಿಗೆ ಸಂಗ್ರಹ ಮಾಡಿಕೊಳ್ಳಲು ಗ್ರಾಹಕರು ಯೋಜಿಸಿದಾಗ ಅವರಿಗೆ ಹೆಚ್ಚು ಉಳಿತಾಯವಾಗುತ್ತದೆ. ಅಪಾರ ಉಳಿತಾಯಗಳ ಜೊತೆಗೆ, ಒಂದೇ ಆನ್‌ಲೈನ್ ಡೆಸ್ಟಿನೇಶನ್‌ನಲ್ಲಿ ವಿವಿಧ ಉತ್ಪನ್ನಗಳ ಆಯ್ಕೆ, ತ್ವರಿತ ಮತ್ತು ಅನುಕೂಲಕರ ಡೆಲಿವರಿ ಆಯ್ಕೆಗಳನ್ನು ಅಮೆಜಾನ್‌ ಫ್ರೆಶ್ ಹೊಂದಿದ್ದು, ಸರಳೀಕರಿಸಿದ ಶಾಪಿಂಗ್ ಅನುಭವವನ್ನು ನೀಡುತ್ತದೆ. ಅಲ್ಲದೆ, ದಿನಸಿಗೆ ನಿಗದಿತ ಆಪ್ ಇನ್ ಆಪ್ ಮತ್ತು ವೈಯಕ್ತಿಕಗೊಳಿಸಿದ ವಿಜೆಟ್‌ಗಳಂತಹ ಅನುಕೂಲಕರ ವೈಶಿಷ್ಟ್ಯಗಳು, ಮರಳಿ ಖರೀದಿ ಆಯ್ಕೆ ಮತ್ತು ಪದೇ ಪದೇ ಖರೀದಿ ಮಾಡಿದ ಐಟಂಗಳು ಚೆಕೌಟ್ ಸಮಯದಲ್ಲಿ ಮರೆತುಹೋಗುವುದನ್ನು ತಪ್ಪಿಸಲು ರಿಮೈಂಡರ್‌ಗಳ ಸೌಲಭ್ಯವೂ ಇದೆ. ಗ್ರಾಹಕರಿಗೆ ಸುಲಭ ಆಯ್ಕೆ ಮತ್ತು ನ್ಯಾವಿಗೇಶನ್‌ ಅನ್ನು ಇಷ್ಟಪಡುತ್ತಾರೆ ಮತ್ತು ಮ್ಯಾಂಗೋ ಫಿಯೆಸ್ಟಾ, ಸಮ್ಮರ್ ಎಸೆನ್ಷಿಯಲ್ಸ್ ಸ್ಟೋರ್, ಸ್ನ್ಯಾಕ್ ಮತ್ತು ಸ್ಟ್ರೀಮ್ ಸ್ಟೋರ್ ಇತ್ಯಾದಿ ಥೀಮ್ ಸ್ಟೋರ್‌ಗಳು ಮತ್ತು ಈವೆಂಟ್‌ಗಳನ್ನು ನಾವು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಎಲ್ಲ ಆಯ್ಕೆ ಮತ್ತು ಉನ್ನತ ಗುಣಮಟ್ಟದ ದಿನಸಿಗಳಲ್ಲಿ ಉತ್ತಮ ಮೌಲ್ಯವನ್ನು ಪಡೆಯಲು ಅನುವು ಮಾಡಲಿದೆ.