ಅಧಿಕಾರಿಗಳ ನಿರ್ಲಕ್ಷಕ್ಕೆ ತುತ್ತಾದ ಅಮೃತ್ ಮಹಲ್ ಜಾನುವಾರು ತಳಿ
ಎಲ್ಲಾಯಿದ್ದು ಏನು ಇಲ್ಲದಂತೆ ಆಗಿರುವ ಕೊನೇಹಳ್ಳಿ ಜಾನುವಾರು ಸಂಶೋದನಾ  ಕೇಂದ್ರ
ರಾಜ-ಮಹಾರಾಜರು ಉಳಸಿದ ತಳಿಯು ನಾಶವಾಗುವ ಮುನ್ನ ಉಳಿ ಸುವ ಕೆಲಸವಾಗಬೇಕು.
ವರದಿ : ಪ್ರಶಾಂತ್ ಕರೀಕೆರೆ.
ತಿಪಟೂರು:ತಾಲ್ಲೂಕಿನ ಹಾಗೂ ತುಮಕೂರು ಜಿಲ್ಲೆಯ ಗಡಿಭಾಗವಾದ ಕೊನೆಹಳ್ಳಿಯಲ್ಲಿ 1342 ಎಕರೆಯ ವಿವಿಧ ರೀತಿಯ ವೈಶಿಷ್ಟತೆಯಿಂದ ಕೂಡಿದ ಭೌಗೋಳಿಕ ವಿಸ್ತೀರ್ಣದ ಭೂಮಿಯಲ್ಲಿ ಸುಮಾರು 80 ಎಕರೆಯಲ್ಲಿ ಸಾಗುವಳಿ ಮಾಡುತ್ತಿದ್ದು ಈ ಪ್ರದೇಶದಲ್ಲಿರುವ ಅಮೃತ್ ಮಹಲ್ ಜಾನುವಾರುಗಳ ಉಳಿವೆಗೆ ಹಾಗೂ ಅದರ ಅಸ್ಮೀತೆಗೆ ಪಣ ತೊಡಬೇಕಾಗಿದೆ.
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್‌ಗೆ ಒಳಪಟ್ಟಿರುವ ಅಮೃತ್ ಮಹಲ್ ಜಾನುವಾರು ಸಂಶೋಧನಾ ಕೇಂದ್ರದಲ್ಲಿ ಸುಮಾರು 93 ಅಮೃತ್ ಮಹಲ್ ಜಾನುವಾರುಗಳು (73 ರಾಸು 20 ಕರುಗಳು) ಸಾಕಲ್ಪಟ್ಟಿದ್ದು ಹಗಲಿನ ವೇಳೆಯಲ್ಲಿ ಹೊಲದಲ್ಲಿ ಹಸಿವಿನನ್ನು ನೇಗಿಸಿಕೊಂಡರೆ ಮಾತ್ರ ಮೇವು, ರಾತ್ರಿ ವೇಳೆಯಲ್ಲಿ ಖಾಲಿಹೊಟ್ಟೆಯಲ್ಲಿ ಮಾತ್ರ ಮಲಗಬೇಕಾಗಿದೆ, ವಿಪರ್ಯಾಸವೆಂದರೆ ಇಲ್ಲಿಯಿರುವ ಹಾಲು ನೀಡುವ ಸೀಮೆಯ ಹಸುಗಳಿಗೆ ಎರಡು ಹೊತ್ತು ಮೇವು ಹಾಗೂ ಪಶು ಆಹಾರ ನೀಡಲಾಗುತ್ತಿದೆ.
ಅವ್ಯವಸ್ಥೆಯ ಆಗರ :ಕೇಂದ್ರದಲ್ಲಿರುವ ಕರುಗಳಿಗೆ ಪಶು ಆಹಾರವನ್ನು ನೆಲದ ಮೇಲೆ ಹಾಕಿ ತಿನ್ನಲು ನೀಡುವುದು, ಜಾನುವಾರು ಗಳ ಮೇವಿನ ಕೊಟ್ಟಿಗೆಯಲ್ಲಿ ಸಗಣಿಯಿಂದ ತುಂಬಿದ್ದು, ಎರಡು ದಿನಕೊಮ್ಮೆ ಸಗಣಿ ಎತ್ತುವ ಕೆಲಸ ನೆಡೆಯುತ್ತಿದ್ದು, ಮೇವು ಸಂಗ್ರಹಣೆಯ ಜಾಗದಲ್ಲಿ ಕೆಲಸಕ್ಕೆ ಬಾರದ ವಸ್ತುಗಳನ್ನು ತುಂಬಿದ್ದು ಜಾನುವಾರುಗಳು ವಾಸಸ್ಥಳಕ್ಕೆ ಬೇರೆ-ಬೇರೆ ವಸ್ತುಗಳು ಆಕ್ರಮಿಸಿಕೊಂಡಿದೆ.
ಜಾನುವಾರಗಳ ಸಮಸ್ಯೆ ಒಂದಾದರೆ ಆಡಳಿತ ವಿಭಾಗದಲ್ಲಿ ದೊಡ್ಡದಾದ ಆಡಳಿತ ಕಛೇರಿಯಿದ್ದು, ಬರೀ ಧೂಳು ಕಸ ಕಡ್ಡಿ ಯಿಂದ ಕೊಡಿದ್ದು, ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಮಾಹಿತಿ ನೀಡುವ ಪುಸ್ತಕಗಳು ಮೂಲೆಯಲ್ಲಿದ್ದು ಅದರ ಮೇಲೆ ಪೂರಕೆ, ಗುದ್ದಲಿ ಮುಂತಾದ ವಸ್ತುಗಳನ್ನು ಬಿಸಾಕಲಾಗಿದ್ದು, ಶೌಚಾಲಯವನ್ನು ನೋಡಿದರೆ ಎಲ್ಲಾ ರೋಗಗಳು ಒಮ್ಮೇಲೆ ಬರುವಂತಿದೆ.
ಒಟ್ಟಾರೆ ಇಲ್ಲಿ ಅಮೃತ್‌ಮಹಲ್ ತಳಿಯ ಸಾಕಾಣಿಕೆ, ಮಿಶ್ರತಳಿ ಹಸುವಿನ ಹೈನುಗಾರಿಕೆ ಘಟಕ, ಹಸಿರು ಮೇವಿನ ಬೆಳೆಗಳ ಪ್ರಾತ್ಯಕ್ಷಿಕೆ, ಪಶು ಸಂಗೋಪನೆಯ ಉತ್ಪಾದನೆಯ ನೂತನ ತಂತ್ರಜ್ಞಾನದ ಕೇಂದ್ರದ ವ್ಯವಸ್ಥೆಯಿದ್ದು, ಇಲ್ಲಿರುವ ಎಲ್ಲಾ ಪ್ರಯೋಗಗಳು ಸಾರ್ವಜನಿಕರಿಗೆ ಉಪಯೋಗವಾಗಿ ಅಮೃತ್ ಮಹಲ್ ರಾಸುಗಳು ಅಸ್ಮಿತೆ ಉಳಿದರೆ ಸಾಕು ಎಂಬುದಾಗಿದೆ.
ಕೋಟ್, ಅಮೃತ್ ಮಹಲ್ ತಳಿಯು ಮೈಸೂರು ರಾಜವಂಶದವರ ತಳಿಯಾಗಿದ್ದು, ಅವರ ಕಾಲದಲ್ಲಿ ಸಾಗಣಿಕೆ, ಮಿಲಿಟರಿ, ಕೃಷಿ ಕಾರ್ಯಗಳಿಗೆ ಬಳ¸ಲಾಗುತ್ತಿದ್ದು, ಈ ತಳಿಯನ್ನು ಉಳಿಸುವುದು ನಮ್ಮೆಲ್ಲರ ಹೊಣೆಯಾಗಿದ್ದು ಸರ್ಕಾರ ಹಾಗೂ ಅಧಿಕಾರಿಗಳ ದೂರದೃಷ್ಟಿಯಾದ ಯೋಜನೆಯಾಗಿ ಉಳಿಯಬೇಕಾಗಿದೆ.
ಕರ್ನಾಟಕದ ಆರೇಳು ಜಿಲ್ಲೆಗಳಲ್ಲಿ ಈ ತಳಿ ನೋಡಬಹುದು (ತುಮಕೂರು, ಹಾಸನ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಿಕ್ಕಮಗಳೂರು )