ಅನುಷ್ಠಾನ ಮಾಡುವ ಕೌಶಲ್ಯವನ್ನು ಪಡೆದಾಗ ಮಾತ್ರ ಜೀವನ ಉತ್ತಮ
ತಿಪಟೂರು:ಹದಿಹರೆಯದ ವಯಸ್ಸಿನಲ್ಲಿ ನಿಯಮ, ನಿರ್ಧಿಷ್ಟವಾದ ಗುರಿ, ಜೀವನದ ಬಗ್ಗೆ ಸ್ವಷ್ಟತೆ ಹಾಗೂ ಸಂಯಮವನ್ನು ಅಳವಡಿಸಿಕೊಂಡು ಕೈಗೊಂಡ ನಿರ್ಧಾರಕ್ಕೆ ಬದ್ದತೆ ಹಾಗೂ ಅನುಷ್ಠಾನ ಮಾಡುವ ಕೌಶಲ್ಯವನ್ನು ಪಡೆದಾಗ ಮಾತ್ರ ಜೀವನ ಉತ್ತಮವಾಗಿರುತ್ತದೆ ಎಂದು ಬದುಕು ಸಾಂತ್ವನ ಕೇಂದ್ರದ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ನಿರ್ಧೇಶಕ ಬಿ.ಎಸ್ ನಂದಕುಮಾರ್ ತಿಳಿಸಿದರು.
ತಾಲ್ಲೂಕಿನ ಸಾಂತ್ವನ ಕೇಂದ್ರ ತಿಪಟೂರು. ಸಖಿ ಒನ್ ಸ್ಟಾಪ್ ಕೇಂದ್ರ ತುಮಕೂರು ಹಾಗೂ ಕಲ್ಪತರು ಪದವಿ ಕಾಲೇಜು ತಿಪಟೂರು ಸಹಯೋಗದಲ್ಲಿ ಕಲ್ಪತರು ಕಾಲೇಜು ಸಭಾಂಗಣದಲ್ಲಿ ಆಯೋಜನೆ ಮಾಡಿದ್ದ ವಿಧ್ಯಾರ್ಥಿಗಳಲ್ಲಿ ಕೌಶಲ್ಯ ಕಾನೂನು ಅರಿವು ಹಾಗೂ ಮಹಿಳಾ ಸಬಲೀಕರಣ ಕರ‍್ಯಕ್ರಮ ವನ್ನು ಉದ್ಗಾಟಿಸಿ ಮಾತನಾಡಿದರು.
ಪದವಿ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಅಳªಡಿಸಿಕೊಳ್ಳಬೇಕಾದ ಕೌಶಲ್ಯ ಗಳ ಬಗ್ಗೆ ಹಾಗೂ ಈ ಅವಧಿಯಲ್ಲಿ ಬಲಿಯಾಗುವ ವ್ಯಾಮೋಹಗಳ ಬಗ್ಗೆ ಮತ್ತು ಇವುಗಳಿಂದ ಮುಕ್ತತತೆ ಹೊಂದಿದರೆ ಬದುಕಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಅದರಂತೆ ಸ್ವಾಮಿ ವಿವೇಕನಂದರು ಹೇಳಿದಂತೆ ನಿಮ್ಮ ಜೀವನದ ಶಿಲ್ಪಿ ನೀವೇ, ಎಂಬ0ತೆ ಸಮಯಕ್ಕೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಮನಸ್ಥಿತಿಯನ್ನು ಹೊಂದಬೇಕು ಎಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ.ವಿ.ಮಾಲತಿ ಮಾತನಾಡಿ ಮಕ್ಕಳು ಶಾಲಾ ಕಾಲೇಜುಗಳಲ್ಲಿ ವಿದ್ಯಾಬ್ಯಾಸದ ಜೊತೆಗೆ ಪಠ್ಯೇತರ ವಿಷಯಗಳನ್ನು ರೂಡಿಸಿ ಕೊಂಡು ಸಾಮಾನ್ಯ ಜ್ಞಾನವನ್ನು ಪಡೆದಾಗ ಭವ್ಯ ಭಾರತ ದೇಶದ ಉತ್ತಮ ನಾಗರೀಕರಾಗಲು ಸಾಧ್ಯವಾಗುತ್ತದೆ ಎಂದರು.
ಸ್ವಾಧಾರ ಗೃಹ ಅಧೀಕ್ಷಕರಾದ ಸಿದ್ದಗಂಗಮ್ಮ ಮಾತನಾಡಿ ಸಖಿ ಕೇಂದ್ರದ ಕಾನೂನು ಸಲಹೆಗರಾರು ಕೇಂದ್ರದ ಸೌಲಭ್ಯಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಲ್ಲಿ ನೊಂದ ಮಹಿಳೆಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕರ‍್ಯಕ್ರಮದಲ್ಲಿ ಉಪನ್ಯಾಸಕ ನಿಂಗೇಗೌಡ, ಧನಂಜಯ, ಬದುಕು ಸಾಂತ್ವನ ಕೇಂದ್ರದ ಸಿಬ್ಬಂದಿ ಮೋಹನ್‌ಕುಮಾರ್, ಕಾಲೇಜಿನ ವಿಧ್ಯಾರ್ಥಿಗಳು ಮತ್ತಿತ್ತರು ಹಾಜರಿದ್ದರು.