ಪ್ರೈಮ್‌ ಸದಸ್ಯತ್ವ ಹೊಂದಿರುವ ಗ್ರಾಹಕರಿಗೆ ವಿಶೇಷ ಅಭಿಯಾನ ಪ್ರಾರಂಭಿಸಿದ ಅಮೆಜಾನ್‌
ಬೆಂಗಳೂರು:ಅಮೆಜಾನ್‌ ಪ್ರೈಮ್‌ ಸದಸ್ಯತ್ವ ಹೊಂದಿರುವ ತನ್ನ ಗ್ರಾಹಕರಿಗೆ “ಸಚ್‌ ಮೆ ಟೂ ಮಚ್‌”ಎಂಬ ವಿಶೇಷ ಅಭಿಯಾನ ಪ್ರಾರಂಭಿಸಿದೆ.
ಈ ಅಭಿಯಾನದ ಉದ್ದೇಶವೆಂದರೆ, ಅಮೆಜಾನ್‌ ಪ್ರೈಮ್‌ ಸದಸ್ಯರು ಒಂದೇ ದಿನದಲ್ಲಿ ತಮಗೆ ಬೇಕಾದಷ್ಟು ವಸ್ತುಗಳನ್ನು ವೇಗವಾಗಿ ಖರೀದಿಸಲು ಅನುವು ಮಾಡಿಕೊಡುವುದಾಗಿದೆ. ಈ ಅಭಿಯಾನದಲ್ಲಿ ಎರಡು ರೀತಿಯ ವಿಡಿಯೋ ಬಿಡುಗಡೆ ಮಾಡಿದೆ. ಮೊದಲನೇ ವಿಡಿಯೋದಲ್ಲಿ ‘ಒನ್ ಮೆಂಬರ್‌ಶಿಪ್‌ʼ ಹಲವು ಪ್ರಯೋಜನಗಳು ಎಂಬ ವಿಷಯದ ಬಗ್ಗೆ ವಿವರವಾಗಿ ನೀಡಲಾಗಿದೆ. ಎರಡನೇ ವಿಡಿಯೋದಲ್ಲಿ ಅಮೆಜಾನ್‌ ಸದಸ್ಯರು ಯಾವೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂಬುದರ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಈ ವಿಡಿಯೋ ಮೂಲಕ ಪ್ರೈಮ್‌ ಸದಸ್ಯತ್ವದ ಪ್ರಾಮುಖ್ಯತೆ ತಿಳಿಯಬಹುದು. ಸಾಕಷ್ಟ ಜನರು ಪ್ರೈಮ್‌ ಸದಸ್ಯತ್ವ ಹೊಂದಿ ದ್ದರೂ ಅದರ ಬಳಕೆ ಮಾತ್ರ ತೀರ ಕಡಿಮೆ, ಇನ್ನೂ ಕೆಲವರಿಗೆ ಸದಸ್ಯತ್ವದ ಮಹತ್ವವೇ ತಿಳಿದಿರುವುದಿಲ್ಲ. ಇದರಿಂದ ಅವರ ಸದಸ್ಯತ್ವ ಅಷ್ಟಾಗಿ ಪ್ರಯೋಜನಕ್ಕೆ ಬರುತ್ತಿರುವುದಿಲ್ಲ.
ಹೀಗಾಗಿ, ಪ್ರೈಮ್‌ ಸದಸ್ಯತ್ವದ ಸಂಪೂರ್ಣ ಬಳಕೆಯ ಬಗ್ಗೆ ತಿಳಿಸಲು ಈ ಅಭಿಯಾನ ಆಯೋಜಿಸಲಾಗಿದೆ ಎಂದು ಅಮೆಜಾನ್ ಇಂಡಿಯಾದ ಗ್ರಾಹಕ ಮಾರ್ಕೆಟಿಂಗ್‌ ನಿರ್ದೇಶಕ ಪ್ರಜ್ಞಾ ಶರ್ಮಾ ಹೇಳಿದರು.